ಉತ್ತರ ಪ್ರದೇಶ: ಕುಟುಂಬಕ್ಕೆ ವಿಷ ಹಾಕಿದ ಅಪ್ರಾಪ್ತ ಬಾಲಕಿ ಪೊಲೀಸ್ ವಶಕ್ಕೆ

ಕುಟುಂಬ ಸದಸ್ಯರು ಸೇವಿಸುವ ಆಹಾರಕ್ಕೆ ವಿಷ ಬೆರೆಸಿದ ಅಪ್ರಾಪ್ತ ಬಾಲಕಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಪ್ರಯಾಗ್ ರಾಜ್: ಕುಟುಂಬ ಸದಸ್ಯರು ಸೇವಿಸುವ ಆಹಾರಕ್ಕೆ ವಿಷ ಬೆರೆಸಿದ ಅಪ್ರಾಪ್ತ ಬಾಲಕಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. 

ಪ್ರಯಾಗ್ ರಾಜ್ ನಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಈಕೆ ಕಳೆನಾಶಕಕ್ಕಾಗಿ ಬಳಕೆ ಮಾಡಲಾಗುತ್ತಿದ್ದ ರಾಸಾಯನಿಕ ವಿಷವನ್ನು ಕುಟುಂಬ ಸದಸ್ಯರು ಸೇವಿಸುವ ಆಹಾರದಲ್ಲಿ ಬೆರೆಸಿದ್ದಳು 15 ವರ್ಷದ ಬಾಲಕಿ. ಈ ವಿಷಪೂರಿತ ಆಹಾರ ಸೇವಿಸಿದ ಪರಿಣಾಮ ಬಾಲಕಿಯ ತಂದೆ, ಕಿರಿಯ ಸಹೋದರಿ, ಹಿರಿಯ ಸಹೋದರ-ಒಟ್ಟು ಮೂರು ಮಂದಿ ಸಾವನ್ನಪ್ಪಿದ್ದಾರೆ.

ಮನೆಕೆಲಸಗಳಿಗೆ ಸಂಬಂಧಿಸಿದಂತೆ ನಿರಂತರವಾಗಿ ಗದರಿಸಿ, ಬೈಯ್ಯುತ್ತಿದ್ದರಿಂದ ಮನನೊಂದ 15 ವರ್ಷದ ಬಾಲಕಿ ಈ ದುಷ್ಕೃತ್ಯ ಎಸಗಿದ್ದಾಳೆ. ಡೆಪ್ಯುಟಿ ಎಸ್ ಪಿ (ಸೊರಾನ್) ಅಮಿತಾ ಸಿಂಗ್ ಅವರು ಮಾಹಿತಿ ನೀಡಿದ್ದು, "ಆಹಾರಕ್ಕೆ ವಿಷ ಬೆರೆಸಿದ ಪ್ರಕರಣದಲ್ಲಿ ತನಿಖೆ ನಡೆಸಲಾಗುತ್ತಿದೆ. ಆ.4 ಹಾಗೂ 8 ರಂದು ಕುಟುಂಬದ ಮೂವರು ಸದಸ್ಯರು ಸಾವನ್ನಪ್ಪಿದ್ದಾರೆ. ಕುಟುಂಬದ ಅಪ್ರಾಪ್ತ ಬಾಲಕಿ ತನ್ನವರನ್ನೇ ಹತ್ಯೆ ಮಾಡುವುದಕ್ಕೆ ಯೋಜನೆ  ರೂಪಿಸಿದ್ದಳು ಎಂಬುದು ಬಹಿರಂಗಗೊಂಡಿದೆ" ಎಂದು ಹೇಳಿದ್ದಾರೆ

 ಸ್ವತಃ ಬಾಲಕಿಯ ತಾಯಿ ತನ್ನ ಮಗಳ ವಿರುದ್ಧ ದೂರು ದಾಖಲಿಸಿದ್ದರು. ಈ ಆಧಾರದಲ್ಲಿ ಪೊಲೀಸರು ಐಪಿಸಿ  ಸೆಕ್ಷನ್ 302 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದು ಹತ್ಯೆ ಹಾಗೂ ಹತ್ಯೆಯ ನಂತರ ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಾಗಿದ್ದಾಗ ಮನೆಯ ವಸ್ತುಗಳನ್ನು ಕಳವು ಮಾಡಿದ ಆರೋಪ ಹೊರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com