ಕಾನ್ಫುರ: 'ಜೈ ಶ್ರೀರಾಮ್ 'ಮಂತ್ರ ಜಪಿಸುವಂತೆ ಮುಸ್ಲಿಂ ವ್ಯಕ್ತಿಗೆ ಥಳಿತ

ಜೈ ಶ್ರೀ ರಾಮ್ ಮಂತ್ರ ಜಪಿಸುವಂತೆ  ಒತ್ತಾಯಿಸಿ ಗುಂಪೊಂದು ಮುಸ್ಲಿಂ ವ್ಯಕ್ತಿಯೊಬ್ಬರನ್ನು ಸಾರ್ವಜನಿಕವಾಗಿ ಥಳಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಫುರದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಮುಸ್ಲಿಂ ವ್ಯಕ್ತಿ
ಹಲ್ಲೆಗೊಳಗಾದ ಮುಸ್ಲಿಂ ವ್ಯಕ್ತಿ

ಕಾನ್ಫುರ: ಜೈ ಶ್ರೀ ರಾಮ್ ಮಂತ್ರ ಜಪಿಸುವಂತೆ  ಒತ್ತಾಯಿಸಿ ಗುಂಪೊಂದು ಮುಸ್ಲಿಂ ವ್ಯಕ್ತಿಯೊಬ್ಬರನ್ನು ಸಾರ್ವಜನಿಕವಾಗಿ ಥಳಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಫುರದಲ್ಲಿ ನಡೆದಿದೆ. ಆತನ ಅಪ್ರಾಪ್ತ ವಯಸ್ಸಿನ ಮಗಳು ತನ್ನ ತಂದೆಗೆ ಹೊಡೆಯಬೇಡಿ, ಕಾಪಾಡಿ ಅಂತಾ ಕೇಳಿಕೊಂಡರೂ ಕಿವಿಗೂಡದ ಕಿಡಿಗೇಡಿಗಳು ಹಲ್ಲೆ ನಡೆಸಿರುವುದಾಗಿ ಪೊಲೀಸರು ಗುರುವಾರ ತಿಳಿಸಿದ್ದಾರೆ. 

ಈ ಘಟನೆಯ ಒಂದು ನಿಮಿಷದ ವಿಡಿಯೋವೊಂದು ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕೆಲವರು  ಜೈ ಶ್ರೀರಾಮ್ ಎಂದು ಜಪಿಸುವಂತೆ  ಹೇಳುತ್ತಾ,  45 ವರ್ಷದ ವ್ಯಕ್ತಿಯೊಬ್ಬನಿಗೆ ಹೊಡೆಯುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ತನ್ನ ತಂದೆಗೆ ಹೊಡೆಯಬೇಡಿ, ಕಾಪಾಡಿ ಎಂದು ಅಳುತ್ತಾ ಹೇಳುವ ಅಪ್ತಾಪ್ತ ವಯಸ್ಸಿನ ಬಾಲಕಿ ಮೊರೆ ಹಿಡಿಯುವ ದೃಶ್ಯವೂ ವಿಡಿಯೋದಲ್ಲಿದೆ. ತದನಂತರ ಬರುವ ಪೊಲೀಸರು ಜೀಪ್ ನಲ್ಲಿ ಆ ವ್ಯಕ್ತಿಯನ್ನು ಕರೆದೊಯ್ದಿದ್ದಾರೆ.  

ಪೊಲೀಸ್ ಕಸ್ಟಡಿಯಲ್ಲಿದ್ದರೂ ಹೊಡೆಯುವ ದೃಶ್ಯವಿದೆ.  ಈ ಸಂಬಂಧ ಸಂತ್ರಸ್ತ ನೀಡಿರುವ ದೂರಿನ ಆಧಾರದ ಮೇಲೆ ಎಫ್ ಐಆರ್ ದಾಖಲಾಗಿದೆ. ಕಾನೂನು ಕ್ರಮ ಪ್ರಕ್ರಿಯೆ ನಡೆಯುತ್ತಿರುವುದಾಗಿ ಡಿಸಿಪಿ ರವೀನಾ ತ್ಯಾಗಿ ತಿಳಿಸಿದ್ದಾರೆ. ಆದಾಗ್ಯೂ,  ಈ ಕೃತ್ಯ ನಡೆಸಿರುವ ಸಂಘಟನೆಯ ಹೆಸರನ್ನು ಪೊಲೀಸರು ಉಲ್ಲೇಖಿಸಿಲ್ಲ.  ಮಧ್ಯಾಹ್ನ ಮೂರು ಗಂಟೆ ಸುಮಾರಿನಲ್ಲಿ ಕೆಲವು ಜನರು ನನನ್ನು ಬೈದು ಹಲ್ಲೆ ನಡೆಸಿದ್ದಾರೆ, ಅಲ್ಲದೇ ನನ್ನ ಕುಟುಂಬಕ್ಕೂ ಬೆದರಿಕೆ ಹಾಕಿದ್ದಾರೆ ಎಂದು ಹಲ್ಲೆಗೊಳಗಾದ ವ್ಯಕ್ತಿ ತಿಳಿಸಿದ್ದಾರೆ.  

ಆ ವ್ಯಕ್ತಿ ಮುಸ್ಲಿಂ ಕುಟುಂಬದ ಸಂಬಂಧಿಯಾಗಿದ್ದು, ಕಾನ್ಪುರ್ ಪ್ರದೇಶದಲ್ಲಿ ಹಿಂದೂ ನೆರೆಹೊರೆಯವರೊಂದಿಗೆ ವಿವಾದವೊಂದರಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.  ಜುಲೈನಲ್ಲಿ ಎರಡು ಕುಟುಂಬಗಳು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪರಸ್ಪರರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com