50 ವರ್ಷಗಳ ಹಿಂದೆ ಅಧಿಕಾರಿಗಳ ಕಾಲಿಗೆ ಬೀಳಬೇಕಾಗಿತ್ತು, ಮೋದಿ ಅವಧಿಯಲ್ಲಿ ಪರಿಸ್ಥಿತಿ ಬದಲಾಗಿದೆ: ಪೂನವಾಲಾ

50 ವರ್ಷಗಳ ಹಿಂದೆ ಅನುಮತಿ ಪಡೆಯಲು "ಅಧಿಕಾರಿಗಳ ಕಿರುಕುಳ"ದಿಂದಾಗಿ ಉದ್ಯಮವು ಹೇಗೆ "ಸಂಕಷ್ಟಗಳನ್ನು" ಎದುರಿಸುತ್ತಿತ್ತು ಎಂಬುದನ್ನು ನೆನಪಿಸಿಕೊಂಡ ಕೋವಿಡ್ ಲಸಿಕೆ ತಯಾರಕ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ...
ಸೈರಸ್ ಪೂನವಾಲಾ
ಸೈರಸ್ ಪೂನವಾಲಾ

ಪುಣೆ: 50 ವರ್ಷಗಳ ಹಿಂದೆ ಅನುಮತಿ ಪಡೆಯಲು "ಅಧಿಕಾರಿಗಳ ಕಿರುಕುಳ"ದಿಂದಾಗಿ ಉದ್ಯಮವು ಹೇಗೆ "ಸಂಕಷ್ಟಗಳನ್ನು" ಎದುರಿಸುತ್ತಿತ್ತು ಎಂಬುದನ್ನು ನೆನಪಿಸಿಕೊಂಡ ಕೋವಿಡ್ ಲಸಿಕೆ ತಯಾರಕ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್ಐಐ) ಅಧ್ಯಕ್ಷ ಡಾ. ಸೈರಸ್ ಪೂನವಾಲಾ ಅವರು, ಈಗ ರೆಡ್-ಟ್ಯಾಪಿಸಂ ಮತ್ತು ಲೈಸೆನ್ಸ್ ರಾಜ್ ಆಳ್ವಿಕೆ ಕಡಿಮೆಯಾಗಿದೆ ಎಂದು ಮೋದಿ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ.

ಲೋಕಮಾನ್ಯ ತಿಲಕ್ ಟ್ರಸ್ಟ್ ನೀಡುವ ಲೋಕಮಾನ್ಯತ್ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೂನವಾಲಾ ಅವರು, ಹಿಂದೆ ಅನುಮತಿ ಪಡೆಯಲು ಅಧಿಕಾರಿಗಳಿಗೆ ಮತ್ತು ಡ್ರಗ್ ಕಂಟ್ರೋಲರ್‌ಗಳ ಕಾಲಿಗೆ ಬೀಳಬೇಕಾಗಿತ್ತು. ಈಗ ಪರಿಸ್ಥಿತಿ ಬದಲಾಗಿದೆ, ಇದರ ಪರಿಣಾಮವಾಗಿ ಎಸ್ಐಐ ಕೋವಿಡ್ ಲಸಿಕೆ ಕೋವಿಶೀಲ್ಡ್ ಅನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಸಾಧ್ಯವಾಯಿತು ಎಂದರು.

"ನಾನು ನನ್ನ ಪ್ರೀತಿಯ ದಿವಂಗತ ಹೆಂಡತಿ ವಿಲ್ಲೂ ಜೊತೆ ಮದುವೆಯಾದ ದಿನ 1966 ರಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಅನ್ನು ಸ್ಥಾಪಿಸಲಾಯಿತು. ಹೀಗಾಗಿ ನಾನು ಈ ಪ್ರಶಸ್ತಿಯನ್ನು ಪತ್ನಿಗೆ ಅರ್ಪಿಸುತ್ತೇನೆ ಎಂದರು.

ಐವತ್ತು ವರ್ಷಗಳ ಹಿಂದೆ, ವಿದ್ಯುತ್, ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳ ಅನುಮತಿ ಪಡೆಯಲು ಉದ್ಯಮವು ಹಲವು ಕಷ್ಟಗಳನ್ನು ಎದುರಿಸಬೇಕಾಗಿತ್ತು. ಅಧಿಕಾರಿಗಳಿಂದ ಕಿರುಕುಳವನ್ನು ಎದುರಿಸಬೇಕಾಯಿತ ಎಂದು ಪೂನವಾಲಾ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com