ಮುಂದಿನ ವರ್ಷ ಜುಲೈ 1 ರಿಂದ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಮಾರಾಟ ನಿಷೇಧ: ಕೇಂದ್ರ ಸರ್ಕಾರ
ಪ್ಲೇಟ್ ಗಳು, ಕಪ್ ಗಳು, ಸಿಗರೇಟ್ ಪ್ಯಾಕೇಟ್ ಸೇರಿದಂತೆ ಏಳ ಬಳಕೆ ಪ್ಲಾಸ್ಟಿಕ್ ವಸ್ತುಗಳು, ಅವುಗಳ ತಯಾರಿಕೆ, ಆಮದು, ದಾಸ್ತಾನು, ವಿತರಣೆ ಮತ್ತು ಮಾರಾಟವನ್ನು ನಿಷೇಧಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
Published: 13th August 2021 06:45 PM | Last Updated: 13th August 2021 07:30 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಪ್ಲೇಟ್ ಗಳು, ಕಪ್ ಗಳು, ಸಿಗರೇಟ್ ಪ್ಯಾಕೇಟ್ ಸೇರಿದಂತೆ ಏಳ ಬಳಕೆ ಪ್ಲಾಸ್ಟಿಕ್ ವಸ್ತುಗಳು, ಅವುಗಳ ತಯಾರಿಕೆ, ಆಮದು, ದಾಸ್ತಾನು, ವಿತರಣೆ ಮತ್ತು ಮಾರಾಟವನ್ನು ನಿಷೇಧಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ನಿನ್ನೆ ಹೊರಡಿಸಲಾಗಿರುವ ಅಧಿಸೂಚನೆ ಪ್ರಕಾರ, ಸೆಪ್ಟೆಂಬರ್ 30, 2021ರಿಂದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಾತ್ರವನ್ನು 50 ಮೈಕ್ರಾನ್ ಗಳಿಂದ 75 ಮೈಕ್ರಾನ್ ಗಳಿಗೆ ಹಾಗೂ ಡಿಸೆಂಬರ್ 31, 2022ರಿಂದ 120 ಮೈಕ್ರಾನ್ ಗಳಿಗೆ ಹೆಚ್ಚಿಸಲಾಗಿದೆ. ಪಾಲಿಸ್ಟೈರೀನ್ ಸೇರಿದಂತೆ ಏಕ ಬಳಕೆ ಪ್ಲಾಸ್ಟಿಕ್ ತಯಾರಿಕೆ, ಆಮದು, ದಾಸ್ತಾನು, ವಿತರಣೆ ಮತ್ತು ಮಾರಾಟವನ್ನು ಜುಲೈ 1, 2022ರಿಂದ ನಿಷೇಧಿಸಲಾಗಿದೆ.
ಬಲೂನ್ ಗಳಿಗಾಗಿ ಪ್ಲಾಸ್ಟಿಕ್ ಕಡ್ಡಿಗಳು, ಪ್ಲಾಸ್ಟಿಕ್ ಧ್ವಜಗಳು, ಕ್ಯಾಂಡಿ ಕಡ್ಡಿಗಳು, ಐಸ್ - ಕ್ರೀಮ್ ಕಡ್ಡಿಗಳು, ಪ್ಲೇಟ್ ಗಳು, ಕಪ್ ಗಳು, ಚಮಚ, ಆಹ್ವಾನ ಪತ್ರಿಕೆ, ಸಿಗರೇಟ್ ಪ್ಯಾಕೇಟ್, ಅಥವಾ ಪಿವಿಸಿ ಬ್ಯಾನರ್ ಗಳು 100 ಮೈಕ್ರಾನ್ ಗಳಿಗಿಂತ ಕಡಿಮೆ ಇರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಕಾನೂನು 2016ರ ಪ್ರಕಾರ, ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳಲ್ಲಿ ಗುರುತಿಸಲಾಗದು, ಅದನ್ನು ತಯಾರಕರು, ಆಮದುದಾರರು ಮತ್ತು ಬ್ರಾಂಡ್ ಮಾಲೀಕರ ಜವಾಬ್ಗಾರಿ ಮೂಲಕ ಸುಸ್ಥಿರ ಪರಿಸರದ ನಿಟ್ಟಿನಲ್ಲಿ ನಿರ್ವಹಣೆ ಮಾಡಬೇಕಾಗಿದೆ. ಇದರ ಪರಿಣಾಮಕಾರಿ ಅನುಷ್ಟಾನಕ್ಕೆ ತಿದ್ದುಪಡಿ ಕಾನೂನುಗಳ ಮೂಲಕ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಪರಿಸರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.