ಅಸ್ಸಾಂ-ಮಿಜೊರಾಮ್ ಗಡಿ ಭಾಗದ ಶಾಲೆಯ ಬಳಿ ಸ್ಫೋಟ

ಅಸ್ಸಾಂ-ಮಿಜೊರಾಮ್ ಗಡಿ ಭಾಗದ ವಿವಾದ ಮುಕ್ತಾಯಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. 
ಸ್ಫೋಟ ನಡೆದ ಸ್ಥಳ
ಸ್ಫೋಟ ನಡೆದ ಸ್ಥಳ

ಗುವಾಹಟಿ: ಅಸ್ಸಾಂ-ಮಿಜೊರಾಮ್ ಗಡಿ ಭಾಗದ ವಿವಾದ ಮುಕ್ತಾಯಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. 

ಅಸ್ಸಾಂ ನ ಸರ್ಕಾರಿ  ಕಿರಿಯ ಪ್ರಾಥಮಿಕ ಶಾಲೆಯ ಬಳಿಯಲ್ಲಿ ದುಷ್ಕರ್ಮಿಗಳು ಸ್ಫೋಟ ನಡೆಸಿದ್ದಾರೆ. ಶುಕ್ರವಾರ ಈ ಘಟನೆ ನಡೆದಿದ್ದು, ಗಡಿ ಭಾಗಕ್ಕೆ 1 ಕಿಲೋಮೀಟರ್ ಗಿಂತಲೂ ಕಡಿಮೆ ದೂರದಲ್ಲಿ ಈ ಕೃತ್ಯ ಸಂಭವಿಸಿದೆ. 

ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಪೌರಾಡಳಿತದ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. 

ಶುಕ್ರವಾರ ರಾತ್ರಿ 11-11:30 ಈ ಸ್ಫೋಟ ನಡೆಸಿದ್ದು, ಶಾಲೆಯ ಕಾಂಪೌಂಡ್ ನ ಭಾಗ ಭಾಗಶಃ ಹಾನಿಯಾಗಿದೆ. "ಸ್ಥಳೀಯರಿಗೆ ಸ್ಫೋಟದ ಸದ್ದು ಕೇಳುತ್ತಿದ್ದಂತೆಯೇ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು" ಎಂದು ಹೈಲಕಂಡಿ ಎಸ್ ಪಿ ಗೌರವ್ ಉಪಾಧ್ಯಾಯ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದಾರೆ. 

ಅಸ್ಸಾಂ ನ ಗುಟ್ಗುಟಿ ಗಡಿ ಹೊರಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಧಿಕಾರಿಗಳು ಈಗಲೂ ಸ್ಥಳದಲ್ಲಿದ್ದಾರೆ. ತಕ್ಷಣಕ್ಕೆ ಯಾವುದೇ ಆಸ್ತಿಪಾಸ್ತಿಗೂ ಹಾನಿಯುಂಟಾಗಿಲ್ಲ ಎಂದು ಉಪಾಧ್ಯಾಯ ಹೇಳಿದ್ದಾರೆ. ಜುಲೈ 26 ರಂದು ಪ್ರಾರಂಭವಾಗಿದ್ದ ಅಂತರರಾಜ್ಯ ಗಡಿ ಹಿಂಸಾಚಾರದಲ್ಲಿ ಅಸ್ಸಾಂ ನ 6 ಪೊಲೀಸ್ ಸಿಬ್ಬಂದಿಗಳು ಸಾವನ್ನಪ್ಪಿದ್ದರು. ಎಸ್ ಪಿ ಗಾಯಗೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com