'ಮೋದಿ ಭಾರತದ ಕಿಂಗ್ ಅಲ್ಲ': ಪ್ರಧಾನಿಯ ಆರ್ಥಿಕ, ವಿದೇಶಿ ನೀತಿಗಳಿಗೆ ಸುಬ್ರಮಣಿಯನ್ ಸ್ವಾಮಿ ವಿರೋಧ
ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ಮತ್ತು ವಿದೇಶಿ ನೀತಿಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು, 'ಮೋದಿ ಭಾರತದ ರಾಜ ಅಲ್ಲ' ಎಂದು ಹೇಳಿದ್ದಾರೆ.
Published: 14th August 2021 04:23 PM | Last Updated: 14th August 2021 04:23 PM | A+A A-

ಸುಬ್ರಮಣಿಯನ್ ಸ್ವಾಮಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ಮತ್ತು ವಿದೇಶಿ ನೀತಿಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು, 'ಮೋದಿ ಭಾರತದ ರಾಜ ಅಲ್ಲ' ಎಂದು ಹೇಳಿದ್ದಾರೆ.
ತಮ್ಮ ಆಯ್ಕೆಯ ಸಚಿವ ಸ್ಥಾನ ನೀಡದಿರುವುದು ನಿಮ್ಮ ಅಸಮಾಧಾನಕ್ಕೆ ಕಾರಣ ಎಂದು ವಾದಿಸಿದ ಟ್ವಿಟರ್
ಬಳಕೆದಾರರೊಬ್ಬರಿಗೆ ಉತ್ತರಿಸಿದ ಸುಬ್ರಮಣಿಯನ್ ಸ್ವಾಮಿ, ನಾನು ಬೇರೆ ಕಾರಣಕ್ಕಾಗಿ "ಮೋದಿ ವಿರೋಧಿ" ಎಂದು ಹೇಳಿದ್ದಾರೆ.
"ನಾನು ಆರ್ಥಿಕತೆ ಮತ್ತು ವಿದೇಶಾಂಗ ನೀತಿಗಾಗಿ ಮೋದಿ ವಿರೋಧಿ ಮತ್ತು ಅದರ ಬಗ್ಗೆ ಯಾವುದೇ ಜವಾಬ್ದಾರಿಯುತರೊಂದಿಗೆ ಚರ್ಚಿಸಲು ನಾನು ಸಿದ್ಧ. ಪ್ರಜಾಪ್ರಭುತ್ವದ ಬಗ್ಗೆ ನೀವು ಕೇಳಿದ್ದೀರಾ? ಮೋದಿ ಭಾರತದ ರಾಜ ಅಲ್ಲ" ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ನಾನು ಸಮರ್ಥ ಮತ್ತು ಜವಾಬ್ದಾರಿಯುತವಾದ ಯಾರೊಂದಿಗೆ ಬೇಕಾದರೂ "ಚರ್ಚೆಗೆ" ಸಿದ್ಧ ಎಂದು ಸ್ವಾಮಿ ಹೇಳಿದ್ದಾರೆ.
ಭಾರತದ ವಿದೇಶಾಂಗ ನೀತಿಗಳ ಪರಿಣಾಮಕಾರಿತ್ವವನ್ನು ಸ್ವಾಮಿ ಪ್ರಶ್ನಿಸಿದ್ದು, ಇದು ವಿದೇಶಾಂಗ ಸಚಿವ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ನಿರ್ಧಾರಗಳಿಂದಾಗಿ "ಅವ್ಯವಸ್ಥೆ" ಯಾಗಿದೆ ಎಂದಿದ್ದಾರೆ.
I am anti Modi policies for the economy & foreign policy and I am ready to debate with any responsible on it. Have you heard about participatory democracy? Modi is not King of India
— Subramanian Swamy (@Swamy39) August 14, 2021