ಉಪಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆಲ್ಲುತ್ತದೆ: ಮತ್ತೊಮ್ಮೆ ಪುನರುಚ್ಛರಿಸಿದ ಟಿಎಂಸಿಯ ಮುಕುಲ್ ರಾಯ್
ಕಳೆದ ಪಶ್ಚಿಮ ಬಂಗಾಳದ ಕೃಷ್ಣಾನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಗೆದ್ದು ನಂತರ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದ ಪಶ್ಚಿಮ ಬಂಗಾಳ ಶಾಸಕ ಮುಕುಲ್ ರಾಯ್, ತಮ್ಮ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆಲ್ಲುತ್ತದೆ ಎಂದು ವಾರದಲ್ಲಿ ಎರಡನೇ ಬಾರಿಗೆ ಹೇಳಿದ್ದಾರೆ.
Published: 14th August 2021 01:19 AM | Last Updated: 14th August 2021 01:19 AM | A+A A-

ಮುಕುಲ್ ರಾಯ್
ಕೋಲ್ಕತ್ತಾ: ಕಳೆದ ಪಶ್ಚಿಮ ಬಂಗಾಳದ ಕೃಷ್ಣಾನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಗೆದ್ದು ನಂತರ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದ ಪಶ್ಚಿಮ ಬಂಗಾಳ ಶಾಸಕ ಮುಕುಲ್ ರಾಯ್, ತಮ್ಮ ಕ್ಷೇತ್ರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆಲ್ಲುತ್ತದೆ ಎಂದು ವಾರದಲ್ಲಿ ಎರಡನೇ ಬಾರಿಗೆ ಹೇಳಿದ್ದಾರೆ.
ಆದಾಗ್ಯೂ, 2023ರ ತ್ರಿಪುರಾದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಮುಕುಲ್ ರಾಯ್ ಹೇಳಿದರು.
ರಾಯ್ ಹೇಳಿಕೆ ಕುರಿತಂತೆ ಟಿಎಂಸಿ ಹಿರಿಯ ನಾಯಕ ತಪಸ್ ರಾಯ್ ಪ್ರತಿಕ್ರಿಯಿಸಲು ನಿರಾಕರಿಸಿದರು. ಆದರೆ ಬಿಜೆಪಿ ಅಂತಹ ಹೇಳಿಕೆಗಳನ್ನು ಜನರು ನಿರ್ಣಯಿಸುತ್ತಾರೆ ಎಂದು ಹೇಳಿದರು.
ಮುಕುಲ್ ರಾಯ್ ಆಗಸ್ಟ್ 6 ರಂದು ನಾಡಿಯಾ ಜಿಲ್ಲೆಯ ಕೃಷ್ಣನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯದಲ್ಲಿ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದ್ದರು.