ತಾಲಿಬಾನ್ ಹಿಡಿತ: ಅಫ್ಘಾನ್ ತೊರೆಯಲು ಬಯಸುವ ಭಾರತೀಯರಿಗೆ ನೆರವಾಗುತ್ತೇವೆ - ಎಂಇಎ

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಳ್ಳುವ ಬಗ್ಗೆ ಮೌನ ಮುರಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸೋಮವಾರ ಕೇಂದ್ರ ಸರ್ಕಾರವು ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದೆ.
ಕಾಬೂಲ್ ವಿಮಾನ ನಿಲ್ದಾಣ
ಕಾಬೂಲ್ ವಿಮಾನ ನಿಲ್ದಾಣ

ನವದೆಹಲಿ: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಳ್ಳುವ ಬಗ್ಗೆ ಮೌನ ಮುರಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸೋಮವಾರ ಕೇಂದ್ರ ಸರ್ಕಾರವು ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದೆ.

ನಾವು ಅಫ್ಘಾನ್ ಸಿಖ್, ಹಿಂದೂ ಸಮುದಾಯಗಳ ಪ್ರತಿನಿಧಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಅಲ್ಲದೆ  ಅಫ್ಘಾನಿಸ್ತಾನವನ್ನು ತೊರೆಯಲು ಬಯಸುವವರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಎಂಇಎ ಹೇಳಿಕೆಯಲ್ಲಿ ತಿಳಿಸಿದೆ.

ಅಫ್ಘಾನಿಸ್ತಾನದಿಂದ ಸ್ವದೇಶಕ್ಕೆ ಮರಳಲು ಬಯಸುವ ಕೆಲವು ಭಾರತೀಯ ಪ್ರಜೆಗಳಿದ್ದಾರೆ ಎಂದು ನಮಗೆ ತಿಳಿದಿದೆ. ನಾವು ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಕಾರ್ಯಾಚರಣೆಗಳ ಕ್ಲೌಸರ್‌ನಿಂದಾಗಿ ಪ್ರಸ್ತುತ ವಾಪಸಾತಿ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ ಎಂದು ಎಂಇಎ ಹೇಳಿದೆ.

ತಾಲಿಬಾನಿಗಳ ಹೆದರಿಕೆಯಿಂದಾಗಿ ಅಫ್ಘಾನ್ ನಲ್ಲಿನ ಸಿರಿವಂತರು ಮತ್ತು ನಾಗರೀಕರು ದೇಶ ತೊರೆಯಲು ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಇಂದು ಕಾಬೂಲ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೌಡಾಯಿಸಿದ್ದರು. ಸಾವಿರಾರೂ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ನಿಲ್ದಾಣದಲ್ಲಿ ಪರಿಸ್ಥಿತಿ ಹತೋಟಿ ದಾಟಿತ್ತು. ಹೀಗಾಗಿ ಕಾಬೂಲ್‌ನಿಂದ ವಾಣಿಜ್ಯ ವಿಮಾನಗಳನ್ನು ರದ್ದುಗೊಳಿಸಲಾಯಿತು. 

ಅದೇ ಕಾರಣಕ್ಕಾಗಿ ಏರ್ ಇಂಡಿಯಾ ತನ್ನ ಏಕೈಕ ವಿಮಾನವನ್ನು ಕಾಬೂಲ್ ನಿಂದ ರದ್ದುಗೊಳಿಸಿತು. ಕಳೆದ ಕೆಲವು ದಿನಗಳಿಂದ ಕಾಬೂಲ್‌ನಲ್ಲಿ ಭದ್ರತಾ ಪರಿಸ್ಥಿತಿ ಗಣನೀಯವಾಗಿ ಹದಗೆಟ್ಟಿದೆ ಮತ್ತು ಅದು ವೇಗವಾಗಿ ಬದಲಾಗುತ್ತಿದೆ ಎಂದು ಎಂಇಎ ಸೇರಿಸಲಾಗಿದೆ.

ತಾಲಿಬಾನ್ ನ ಕ್ರೂರ ಆಡಳಿತಕ್ಕೆ ಮರಳುವ ಭೀತಿಯಿಂದ ಸಾವಿರಾರು ಆಫ್ಘನ್ನರು ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೇಶವನ್ನು ತೊರೆಯಲು ಪ್ರಯತ್ನಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com