ಸಂಸದ ತೇಜಸ್ವಿ ಸೂರ್ಯ-ಕಾರ್ಗಿಲ್ ಕೌನ್ಸಿಲರ್ ಪದ್ಮ ದೋರ್ಜೆ
ಸಂಸದ ತೇಜಸ್ವಿ ಸೂರ್ಯ-ಕಾರ್ಗಿಲ್ ಕೌನ್ಸಿಲರ್ ಪದ್ಮ ದೋರ್ಜೆ

ಕಾರ್ಗಿಲ್ ನೆಲದಲ್ಲಿ ಕನ್ನಡದ ಕಂಪು: ಇಲ್ಲಿದೆ ಸಂಸದ ತೇಜಸ್ವೀ ಸೂರ್ಯ- ಕಾರ್ಗಿಲ್ ಕೌನ್ಸಿಲರ್ ಕನ್ನಡ ಸಂಭಾಷಣೆ!

ಕನ್ನಡ ಭಾಷೆಯನ್ನು ನಮ್ಮ ನಾಡಿನಾಚೆ ಕೇಳುವುದು ವರ್ಣನಾತೀತ ಆನಂದ ನೀಡುತ್ತದೆ. ಇಂಥಹದ್ದೇ ಒಂದು ವಿಶೇಷವಾದ ವಿಡಿಯೋ ಈಗ ವೈರಲ್ ಆಗತೊಡಗಿದೆ. 

ಲೇಹ್: ಕನ್ನಡ ಭಾಷೆಯನ್ನು ನಮ್ಮ ನಾಡಿನಾಚೆ ಕೇಳುವುದು ವರ್ಣನಾತೀತ ಆನಂದ ನೀಡುತ್ತದೆ. ಇಂಥಹದ್ದೇ ಒಂದು ವಿಶೇಷವಾದ ವಿಡಿಯೋ ಈಗ ವೈರಲ್ ಆಗತೊಡಗಿದೆ. 

ಬಿಜೆಪಿ ಯುವಾ ಮೋರ್ಚಾದ ರಾಷ್ಟ್ರಾಧ್ಯಕ್ಷರಾಗಿರುವ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಪಕ್ಷದ ಕಾರ್ಯಕ್ರಮದ ನಿಮಿತ್ತ ಲೇಹ್ ಗೆ ಭೇಟಿ ನೀಡಿದ್ದಾಗ ಕಾರ್ಗಿಲ್ ನ ಕೌನ್ಸಿಲರ್ ಸಂಸದರ ಜೊತೆ ಕನ್ನಡದಲ್ಲಿ ಸಂಭಾಷಣೆ ನಡೆಸಿ ಅಚ್ಚರಿ ಮೂಡಿಸಿದ್ದಾರೆ.  

75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ, ಭಾರತೀಯ ಜನತಾ ಯುವ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿರುವ 'ಯುವ ಸಂಕಲ್ಪ ಯಾತ್ರಾ' ಪ್ರಯುಕ್ತ ಆಯೋಜನೆಗೊಂಡಿರುವ ಸೈಕಲ್ ರ್ಯಾಲಿ ಹಿನ್ನೆಲೆ, ಲಡಾಖ್ ನಲ್ಲಿರುವ ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವೀ ಸೂರ್ಯ ರವರೊಂದಿಗೆ ಕನ್ನಡದಲ್ಲಿಯೇ ಮಾತನಾಡಿರುವ ಕಾರ್ಗಿಲ್ ನ ಕೌನ್ಸಿಲರ್ ಪದ್ಮ ದೋರ್ಜೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅತಿ ಪ್ರಮುಖ ನಿರ್ಣಯಗಳಲ್ಲೊಂದಾಗಿರುವ 370ನೇ ವಿಧಿ ರದ್ಧತಿಯಿಂದ ಲಡಾಖ್ ಪ್ರದೇಶಕ್ಕೆ ಆಗಿರುವ ಅನುಕೂಲಗಳನ್ನು ಕನ್ನಡದಲ್ಲಿಯೇ ವಿವರಿಸಿರುವುದು ವಿಶೇಷ.

ಈ ಕುರಿತು ಮಾತನಾಡಿರುವ ಸಂಸದ  ತೇಜಸ್ವಿ ಸೂರ್ಯ, "ಕರ್ನಾಟಕದಿಂದ ದೂರದ ಪ್ರದೇಶಗಳಲ್ಲಿ ಕನ್ನಡ ಭಾಷೆ ಕೇಳಿದಾಗ ಸಿಗುವ ಖುಷಿ ನಿಜಕ್ಕೂ ಗಮನಾರ್ಹ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಲಡಾಖ್ ಪ್ರದೇಶದಲ್ಲಿ ನೂತನ ವಿಶ್ವವಿದ್ಯಾಲಯ ಸ್ಥಾಪನೆಗೊಳಿಸಿ ಇಲ್ಲಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಭಿವೃದ್ಧಿಗೆ  ಕ್ರಮ ಕೈಗೊಂಡಿದ್ದು ಅಭಿನಂದನಾರ್ಹ. ಜಮ್ಮು ಕಾಶ್ಮೀರದ ಅಭಿವೃದ್ಧಿಗೆ ಕಳೆದ 7 ದಶಕಗಳಿಂದ ಕಂಟಕವಾಗಿದ್ದ 370ನೇ ವಿಧಿ ರದ್ದುಗೊಳಿಸಿ, ಈ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದು ಸ್ವಾಗತಾರ್ಹ" ಎಂದು ತಿಳಿಸಿದರು.

Related Stories

No stories found.

Advertisement

X
Kannada Prabha
www.kannadaprabha.com