ಐಸ್ ಕ್ರೀಮ್, ಚುರ್ಮಾದಿಂದ ಫಿಟ್ ನೆಸ್ ವರೆಗೆ: ಒಲಿಂಪಿಕ್ಸ್ ಕ್ರೀಡಾಪಟುಗಳೊಂದಿಗೆ ಕಳೆದ ಕ್ಷಣಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ!
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳೊಂದಿಗೆ ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅಮೂಲ್ಯವಾದ ಖುಷಿಯ ಸಮಯ ಕಳೆದಿದ್ದಾರೆ.
Published: 18th August 2021 08:22 AM | Last Updated: 18th August 2021 01:20 PM | A+A A-

ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಕ್ರೀಡಾಪಟುಗಳೊಂದಿಗೆ ಪ್ರಧಾನಿ ಮೋದಿ
ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳೊಂದಿಗೆ ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅಮೂಲ್ಯವಾದ ಖುಷಿಯ ಸಮಯ ಕಳೆದಿದ್ದಾರೆ.
ಇದರ ಸುದ್ದಿ, ಫೋಟೋಗಳು ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ರಾರಾಜಿಸಿವೆ. ಮೊನ್ನೆಯಷ್ಟೇ ಕ್ರೀಡಾಪಟುಗಳನ್ನು ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸಕ್ಕೆ ಆಹ್ವಾನಿಸಿ ಪ್ರಧಾನಿ ಮೋದಿಯವರು ಆತಿಥ್ಯ ನೀಡಿದ್ದರು. ಅವರ ಜೊತೆ ಕಳೆದ ಸಮಯ ಅಮೂಲ್ಯವಾಗಿತ್ತು ಎಂದು ಸಂತೋಷ ಹಂಚಿಕೊಂಡಿದ್ದಾರೆ.
ಐಸ್ ಕ್ರೀಮ್, ಚುರ್ಮಾ ಸವಿಯುವುದರಿಂದ ಹಿಡಿದು ಫಿಟ್ ನೆಸ್, ಆರೋಗ್ಯದವರೆಗೆ, ಗಂಭೀರ ವಿಷಯಗಳಿಂದ ಹಿಡಿದು ವಿನೋದದ ಸಂಗತಿಯವರೆಗೆ ಹಲವು ವಿಷಯಗಳ ಬಗ್ಗೆ ಮಾತುಕತೆ ನಡೆಯಿತು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
A memorable interaction with our Olympic heroes. https://t.co/leaG77TikG
— Narendra Modi (@narendramodi) August 18, 2021