ಸಿಬಿಐ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹಿಡಿತದಲ್ಲಿ ರಾಜಕೀಯ ಅಸ್ತ್ರವಾಗಿ ಬದಲಾಗಿದೆ: ಮದ್ರಾಸ್‌ ಹೈಕೋರ್ಟ್‌

ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹಿಡಿತದಲ್ಲಿ ರಾಜಕೀಯ ಅಸ್ತ್ರವಾಗಿ ಬದಲಾಗಿದೆ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹಿಡಿತದಲ್ಲಿ ರಾಜಕೀಯ ಅಸ್ತ್ರವಾಗಿ ಬದಲಾಗಿದೆ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. 

ತಮಿಳುನಾಡಿನಲ್ಲಿ 300 ಕೋಟಿ ರೂ.ಗಳ ವಂಚನೆ ಹಗರಣ ಸಂಬಂಧ ಸಿಬಿಐ ತನಿಖೆಗೆ ಆದೇಶಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯ ವೇಳೆ ನ್ಯಾಯಾಲಯ ಮಂಗಳವಾರ ಈ ಅಭಿಪ್ರಾಯ ಪಟ್ಟಿದೆ.

ಕೇಂದ್ರೀಯ ತನಿಖಾ ಸಂಸ್ಥೆಗೆ ಭಾರತೀಯ ಚುನಾವಣಾ ಆಯೋಗ, ಕಂಟ್ರೋಲರ್ ಹಾಗೂ ಆಡಿಟರ್ ಜನರಲ್ ನಂತೆ ಹೆಚ್ಚಿನ ಸ್ವಾತಂತ್ರ್ಯ ನೀಡಬೇಕು ಎಂದು ನ್ಯಾಯಮೂರ್ತಿ ಕಿರುಬಾಕರನ್, ನ್ಯಾಯಮೂರ್ತಿ ಬಿ. ಪುಹಳೇಂದಿ ಹೇಳಿದರು. ಸಿಬಿಐ ಸ್ವಾಯತ್ತ ಸಂಸ್ಥೆ ಅದು ದೇಶದ ಸಂಸತ್ತಿಗೆ ಮಾತ್ರ ಉತ್ತರದಾಯಿಯಾಗಿದೆ ಎಂದು ನುಡಿದರು.

ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ನಂತೆ ಸಿಬಿಐಗೆ ಸ್ವಾಯತ್ತತೆ ಇರಬೇಕು. ಪಂಜರದಲ್ಲಿರುವ ಗಿಳಿಯಾಗಿರುವ ಸಿಬಿಐ ಅನ್ನು ಬಿಡುಗಡೆಗೊಳಿಸುವ ಯತ್ನವಾಗಿ ಈ ಅದೇಶ ಎಂದು ನ್ಯಾಯಪೀಠ ಹೇಳಿದೆ.

ಕಳೆದ ಕೆಲವು ವರ್ಷಗಳಿಂದ ಕೇವಲ ಪ್ರತಿ ಪಕ್ಷಗಳ ನಾಯಕರನ್ನು ಗುರಿಯಾಗಿಸಿ ತನಿಖೆ ನಡೆಸುವ ಸಿಬಿಐ ಬಿಜೆಪಿಯ ಸೂತ್ರದ ಗೊಂಬೆಯಾಗಿ ಬದಲಾಗಿದೆ ಎಂದು ಹಲವರು ಆರೋಪಿಸುತ್ತಿದ್ದಾರೆ. ಬಿಜೆಪಿಯ ಬೇಡಿಕೆಗಳನ್ನು ಈಡೇರಿಸುವ ಸಂಸ್ಥೆ "ಕಾನ್ಸ್ಪಿರಿಸಿ ಬ್ಯೂರೋ ಆಫ್‌ ಇನ್ವಸ್ಟಿಗೇಷನ್‌" ಎಂದು ಟೀಕಿಸಲಾಗುತ್ತಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com