ಗುಜರಾತ್: ಮತಾಂತರ ನಿಷೇಧ ಕಾಯ್ದೆಯ ಅಂತರ್ಧರ್ಮೀಯ ವಿವಾಹದ ಸೆಕ್ಷನ್ ಗಳಿಗೆ ಹೈಕೋರ್ಟ್ ತಡೆ

ಗುಜರಾತ್ ಸರ್ಕಾರದ ಮತಾಂತರ ನಿಷೇಧ ಕಾಯ್ದೆಯ ಅಂತರ್ಧರ್ಮೀಯ ವಿವಾಹಗಳಿಗೆ ಅನ್ವಯಿಸುವ ಸೆಕ್ಷನ್ ಗಳಿಗೆ ಅಲ್ಲಿನ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ವಿವಾಹ
ವಿವಾಹ

ಅಹ್ಮದಾಬಾದ್: ಗುಜರಾತ್ ಸರ್ಕಾರದ ಮತಾಂತರ ನಿಷೇಧ ಕಾಯ್ದೆಯ ಅಂತರ್ಧರ್ಮೀಯ ವಿವಾಹಗಳಿಗೆ ಅನ್ವಯಿಸುವ ಸೆಕ್ಷನ್ ಗಳಿಗೆ ಅಲ್ಲಿನ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್ ಹಾಗೂ ನ್ಯಾ.ಬಿರೇನ್ ವೈಷ್ಣವ್ ಅವರಿದ್ದ ವಿಭಾಗೀಯ ಪೀಠ, "ಜನರನ್ನು ಅನಗತ್ಯ ಕಿರುಕುಳದಿಂದ ರಕ್ಷಿಸಲು ಈ ಆದೇಶ ನೀಡಲಾಗುತ್ತಿದೆ" ಎಂದು ಹೇಳಿದೆ.

ವಿವಾಹದ ಮೂಲಕ ಒತ್ತಾಯಪೂರ್ವಕ ಹಾಗೂ ವಂಚನೆಯ ಧಾರ್ಮಿಕ ಮತಾಂತರವನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವ ಗುಜರಾತ್ ನ ಧಾಮಿಕ ಸ್ವಾತಂತ್ರ್ಯ (ತಿದ್ದುಪಡಿ) ಕಾಯ್ದೆ, 2021 ಜೂ.15 ರಂದು ಜಾರಿಗೆ ಬಂದಿತ್ತು. ಈ ತಿದ್ದುಪಡಿ ಕಾಯ್ದೆಯಲ್ಲಿನ ಕೆಲವು ಅಂಶಗಳು ಅಸಾಂವಿಧಾನಿಕ ಎಂದು ಗುಜರಾತ್ ನ ಜಮಾಯತ್ ಉಲೇಮಾ-ಎ-ಹಿಂದ್ ಹೈಕೋರ್ಟ್ ಮೆಟ್ಟಿಲೇರಿತ್ತು.

ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ, "ಯಾವುದೇ ಒತ್ತಾಯ, ಆಕರ್ಷಣೆ ಅಥವಾ ಮೋಸವೂ ಇಲ್ಲದೇ ಅಂತರ್ಧರ್ಮೀಯ ವಿವಾಹ ನಡೆದರೆ ಅದನ್ನು ಅಕ್ರಮ ಮತಾಂತರಕ್ಕಾಗಿಯೇ ಮಾಡಲಾದ ವಿವಾಹ ಎನ್ನುವುದಕ್ಕೆ ಸಾಧ್ಯವಿಲ್ಲ ಆದ್ದರಿಂದ ಈ ಕಾಯ್ದೆಯ ಕಠಿಣ ಸೆಕ್ಷನ್ ಗಳಾದ 3,4,4a-4c, 5, 6, 6a ಗಳು ಕಾರ್ಯನಿರ್ವಹಿಸುವುದಕ್ಕೆ ತಡೆ ನೀಡಲಾಗುತ್ತಿದೆ" ಎಂದು ಹೇಳಿದೆ.

"ಸಮ್ಮತದಿಂದ ಅಧಿಕೃತವಾಗಿ ಅಂತರ್ಧರ್ಮೀಯ ವಿವಾಹವಾಗುವ ವ್ಯಕ್ತಿಗಳನ್ನು ಕಿರುಕುಳಕ್ಕೊಳಗಾವುದರಿಂದ ತಡೆಗಟ್ಟುವುದು ಈ ತಡೆ ಆದೇಶದ ಉದ್ದೇಶ" ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com