
ಸಾಂದರ್ಭಿಕ ಚಿತ್ರ
ನವದೆಹಲಿ: ಭಾರತದಲ್ಲಿ ಮಹಾಮಾರಿ ಕೊರೋನಾಗೆ ಕಳೆದ 24 ಗಂಟೆಗಳ ಅವಧಿಯಲ್ಲಿ 530 ಮಂದಿ ಮೃತಪಟ್ಟಿದ್ದು, 36 ಸಾವಿರದ 401 ಮಂದಿ ಸೋಂಕಿಗೆ ತುತ್ತಾಗಿದ್ದಾರೆ.
ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3 ಲಕ್ಷದ 64 ಸಾವಿರದ 129 ಮಂದಿಯಿದ್ದು ಕಳೆದ 149 ದಿನಗಳಲ್ಲಿ ಅತಿ ಕಡಿಮೆಯಾಗಿದೆ. ಇದುವರೆಗೆ 3 ಕೋಟಿಯ 15 ಲಕ್ಷದ 25 ಸಾವಿರದ 080 ಮಂದಿ ಗುಣಮುಖರಾಗಿದ್ದಾರೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 39 ಸಾವಿರದ 157 ಮಂದಿ ಗುಣಮುಖರಾಗಿದ್ದರೆ, ಮೃತಪಟ್ಟವರ ಒಟ್ಟು ಸಂಖ್ಯೆ 4 ಲಕ್ಷದ 33 ಸಾವಿರದ 049ಕ್ಕೇರಿದೆ.
ಕೊರೋನಾ ಪರೀಕ್ಷೆಯಲ್ಲಿ ಮೈಲಿಗಲ್ಲು: ಈ ಮಧ್ಯೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ(ಐಸಿಎಂಆರ್) ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್), ಭಾರತದಲ್ಲಿ ಕೋವಿಡ್ -19 ಪರೀಕ್ಷೆಯಲ್ಲಿ ಅಗ್ರಸ್ಥಾನದಲ್ಲಿದೆ, ನಿನ್ನೆಯವರೆಗೆ ದೇಶದಲ್ಲಿ 50 ಕೋಟಿಗೂ ಅಧಿಕ ಪರೀಕ್ಷೆಗಳನ್ನು ನಡೆಸಿ ಮೈಲಿಗಲ್ಲನ್ನು ಸಾಧಿಸಿದೆ.
ಈ ಆಗಸ್ಟ್‌ನಲ್ಲಿ ಸರಾಸರಿ 17 ಲಕ್ಷಕ್ಕಿಂತ ಹೆಚ್ಚಿನ ದೈನಂದಿನ ಪರೀಕ್ಷೆಯೊಂದಿಗೆ, ಭಾರತವು ದೇಶಾದ್ಯಂತ 50 ಕೋಟಿ ಮಾದರಿಗಳನ್ನು ಪರೀಕ್ಷೆಗೊಳಪಡಿಸಿದೆ.ಕೇವಲ 55 ದಿನಗಳಲ್ಲಿ 10 ಕೋಟಿ ಕೊರೋನಾ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ. ದೇಶಾದ್ಯಂತ ಕೋವಿಡ್ ಲಸಿಕೆ ಅಭಿಯಾನ ಆರಂಭಗೊಂಡ ನಂತರ ಇಲ್ಲಿಯವರೆಗೆ 56.64 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.
According to the Union Health Ministry, India recorded 36,401 new #COVID19 cases and 39,157 recoveries in the last 24 hrs.
— The New Indian Express (@NewIndianXpress) August 19, 2021
Express Photo | @prasantmadugula pic.twitter.com/RcA1IGTFcj