2024 ಚುನಾವಣೆಗೆ ಯೋಜನೆ ರೂಪಿಸಬೇಕು, ಸಂವಿಧಾನದ ತತ್ವದಲ್ಲಿ ನಂಬಿಕೆಯುಳ್ಳ ಸರ್ಕಾರ ರಚನೆಯೇ ನಮ್ಮ ಗುರಿ: ಸೋನಿಯಾ ಗಾಂಧಿ

ನಾವು ಈಗಿನಿಂದಲೇ 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಗಾಗಿ ವ್ಯವಸ್ಥಿತವಾಗಿ ಸಿದ್ಧತೆ ಆರಂಭಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಹೇಳಿದ್ದಾರೆ.
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ

ನವದೆಹಲಿ: ನಾವು ಈಗಿನಿಂದಲೇ 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಗಾಗಿ ವ್ಯವಸ್ಥಿತವಾಗಿ ಸಿದ್ಧತೆ ಆರಂಭಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಹೇಳಿದ್ದಾರೆ.

19 ವಿರೋಧ ಪಕ್ಷಗಳ ಮುಖಂಡರೊಂದಿಗೆ ಶುಕ್ರವಾರ ನಡೆಸಿದ ವರ್ಚುವಲ್‌ ಸಭೆಯಲ್ಲಿ ಮಾತನಾಡಿದ ಅವರು, 'ಸಂವಿಧಾನದ ಆಶಯ-ತತ್ವಗಳಲ್ಲಿ ನಂಬಿಕೆ ಹೊಂದಿರುವಂತಹ ಸರ್ಕಾರ ರಚನೆಯೇ ನಮ್ಮ ಗುರಿಯಾಗಿರಬೇಕು. ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಸರ್ಕಾರ ರಚಿಸುವುದು ಸವಾಲೇ  ಆದರೂ ನಾವೆಲ್ಲಾ ಒಗ್ಗಟ್ಟಿನಿಂದ ಹೋರಾಡಿದರೆ ಇದನ್ನು ಸಾಧಿಸಬಹುದು. ನಮಗೆ ನಮ್ಮವೇ ಆದ ಬಾಧ್ಯತೆಗಳು, ಮಿತಿಗಳು ಇವೆ. ಆದರೆ, ರಾಷ್ಟ್ರದ ಹಿತದೃಷ್ಟಿಯಿಂದ ನಾವೆಲ್ಲಾ ಇಂತಹ ಮಿತಿಗಳನ್ನು ಮೀರಿ ಒಂದುಗೂಡುವುದು ಅಗತ್ಯವಿದೆ. ಅಂಥ ಸಮಯ ಈಗ ಬಂದಿದೆ ಎಂದು ಹೇಳಿದರು.

ಸಂಸತ್ ಕಲಾಪಕ್ಕೆ ಅಡ್ಡಿ ಪಡಿಸಿದ್ದೇ ಕೇಂದ್ರ ಸರ್ಕಾರ
ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟಿನ ಬಗ್ಗೆ ಮಾತನಾಡಿದ ಸೋನಿಯಾ ಗಾಂಧಿ, ಸಂಸತ್ತಿನ ಉಭಯ ಸದನಗಳಲ್ಲಿ ಎಲ್ಲಾ ವಿರೋಧ ಪಕ್ಷಗಳು 20 ದಿನಗಳಿಗಿಂತ ಹೆಚ್ಚು ಕಾಲ "ನಿಶ್ಚಿತ ಒಗ್ಗಟ್ಟಿನಿಂದ" ಗುರಿತಿಸಿಕೊಂಡಿದೆ ಎಂದು ಹೇಳಿದ ಸೋನಿಯಾ ಗಾಂಧಿ, "ನಾವು ದಿನನಿತ್ಯದ ಚರ್ಚೆಯಲ್ಲಿ ಸರಿಯಾಗಿ  ಭಾಗಿಯಾಗಿದ್ದೇವೆ. ಸಂಸತ್ತಿನ ಮುಂದಿನ ಅಧಿವೇಶನಗಳಲ್ಲೂ ಈ ಏಕತೆಯನ್ನು ಉಳಿಸಿಕೊಳ್ಳಲಾಗುವುದು ಎಂಬ ನನಗೆ ವಿಶ್ವಾಸವಿದೆ. ಆದರೆ ನಾವು ಸಂಸತ್ತಿನ ಹೊರಗೆ ದೊಡ್ಡ ರಾಜಕೀಯ ಹೋರಾಟ ಮಾಡಬೇಕಾಗಿದೆ," ಎಂದು ಉಲ್ಲೇಖ ಮಾಡಿದ್ದಾರೆ.

ಪೆಗಾಸಸ್ ಪ್ರಸ್ತಾಪ
ಅಂತೆಯೇ ಸೋನಿಯಾ ಗಾಂಧಿ ತಮ್ಮ ಭಾಷಣದ ಸಮಯದಲ್ಲಿ ಪೆಗಾಸಸ್ ಹಗರಣವನ್ನು ಪ್ರಸ್ತಾಪಿಸಿದರೆ, ಆರ್​ಜೆಡಿ ಪಕ್ಷದ ಕೆಲವು ನಾಯಕರು ಮತ್ತು ಜೆಎಂಎಂನ ಹೇಮಂತ್ ಸೊರೆನ್ ಅವರು ಜನರ ಸಮಸ್ಯೆಗಳನ್ನು ಕೇಂದ್ರೀಕರಿಸಬೇಕು ಎಂದು ಒತ್ತಾಯಿಸಿದರು. ರಾಹುಲ್ ಗಾಂಧಿ ಕರೆದಿದ್ದ ಉಪಹಾರ ಕೂಟದಲ್ಲಿ  ಹೇಳಲಾದ ಅಂಶವೂ ಇದೇ ಆಗಿದೆ. ಮಮತಾ ಬ್ಯಾನರ್ಜಿ ಅವರು ಎಲ್ಲಾ ಪಕ್ಷಗಳು ಒಗ್ಗೂಡಬೇಕು ಎಂದು ಕರೆ ನೀಡಿದರು. ಆದರೆ ಬಿಎಸ್‌ಪಿ, ಬಿಜೆಡಿಯಂತಹ ಪಕ್ಷಗಳು ಬಿಜೆಪಿ ವಿರುದ್ಧ ಮೃದುವಾಗಿ ಪರಿಗಣಿಸಲ್ಪಡುತ್ತವೆ. ಅಂತಹ ವಿರೋಧ ಸಭೆಗಳಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. 

ಅಂತೆಯೇ ಸಭೆಯಲ್ಲಿ ದೇಶ ಎದುರಿಸುತ್ತಿರುವ ಇತರ ಸಮಸ್ಯೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು ಎನ್ನಲಾಗಿದ್ದು, ಅಲ್ಲದೆ ಕೆಲವು ರಾಜ್ಯಗಳಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸುವುದು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕೈಗೊಳ್ಳಬೇಕಾದ ಹೋರಾಟಕ್ಕೆ  ಸಂಬಂಧಿಸಿ ವಿರೋಧ ಪಕ್ಷಗಳಲ್ಲಿ ಒಮ್ಮತ ಮೂಡಿಸುವುದು ಸಹ ಸಭೆಯ ಉದ್ದೇಶವಾಗಿತ್ತು ಎಂದು ಮೂಲಗಳು ಹೇಳಿವೆ.

ಈ ಮಹತ್ವದ ಸಭೆಯಲ್ಲಿ ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಪಾಲ್ಗೊಂಡಿದ್ದರು. ಅಲ್ಲದೆ ಜೆಎಂಎಂ, ಸಿಪಿಐ, ಸಿಪಿಎಂ, ಎನ್‌ಸಿ, ಆರ್‌ಜೆಡಿ, ಎಐಯುಡಿಎಫ್‌, ವಿಸಿಕೆ,  ಎಲ್‌ಜೆಡಿ, ಜೆಡಿಎಸ್‌, ಆರ್‌ಎಲ್‌ಡಿ, ಆರ್‌ಎಸ್‌ಪಿ, ಕೇರಳ ಕಾಂಗ್ರೆಸ್‌ (ಮಣಿ), ಪಿಡಿಪಿ ಹಾಗೂ ಐಯುಎಂಎಲ್‌ ಮುಖಂಡರು ಸಹ ಸಭೆಯಲ್ಲಿ ಭಾಗವಹಿಸಿದ್ದರು.

ಆದರೆ ಎಎಪಿ, ಬಿಎಸ್‌ಪಿ ಹಾಗೂ ಸಮಾಜವಾದಿ ಪಾರ್ಟಿ ಮುಖಂಡರು ಪಾಲ್ಗೊಂಡಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com