ದೆಹಲಿಯಲ್ಲಿ ಮುಂಜಾನೆಯಿಂದ ಧಾರಾಕಾರ ಮಳೆ, ತಗ್ಗು ಪ್ರದೇಶಗಳು ಜಲಾವೃತ!

ದೇಶದ ರಾಜಧಾನಿ ದೆಹಲಿಯಲ್ಲಿ ಬೆಳಗ್ಗೆಯಿಂದಲೇ ಧಾರಾಕಾರ ಮಳೆ ಸುರಿಯುತ್ತಿದೆ. ಮಿಂಟೊ ಬ್ರಿಗೇಡ್, ಮೂಲ್ಚಂದ್ ಅಂಡರ್ ಪಾಸ್, ಐಟಿಒ ಸೇರಿದಂತೆ ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿದ್ದು ವಾಹನ ಸವಾರರಿಗೆ, ಜನರಿಗೆ ತೀವ್ರ ತೊಂದರೆಯುಂಟಾಗಿದೆ.
ರಾಜಧಾನಿ ದೆಹಲಿಯಲ್ಲಿ ಧಾರಾಕಾರ ಮಳೆ
ರಾಜಧಾನಿ ದೆಹಲಿಯಲ್ಲಿ ಧಾರಾಕಾರ ಮಳೆ

ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಬೆಳಗ್ಗೆಯಿಂದಲೇ ಧಾರಾಕಾರ ಮಳೆ ಸುರಿಯುತ್ತಿದೆ. ಮಿಂಟೊ ಬ್ರಿಗೇಡ್, ಮೂಲ್ಚಂದ್ ಅಂಡರ್ ಪಾಸ್, ಐಟಿಒ ಸೇರಿದಂತೆ ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿದ್ದು ವಾಹನ ಸವಾರರಿಗೆ, ಜನರಿಗೆ ತೀವ್ರ ತೊಂದರೆಯುಂಟಾಗಿದೆ.

ಹಲವು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿರುವುದರಿಂದ ದೆಹಲಿ ಸಂಚಾರಿ ಪೊಲೀಸರು ಹಲವು ಪ್ರಮುಖ ಅಂಡರ್ ಪಾಸ್ ಗಳನ್ನು ಮುಚ್ಚಿದ್ದು ಸೋಷಿಯಲ್ ಮೀಡಿಯಾ ಮೂಲಕ ಜನರಿಗೆ ಮಾಹಿತಿ ನೀಡುತ್ತಿದ್ದಾರೆ.

ಸ್ಥಳದಲ್ಲಿರುವ ಲೋಕೋಪಯೋಗಿ ಇಲಾಖೆ ಸಿಬ್ಬಂದಿ, ಮಹಾ ನಗರ ಪಾಲಿಕೆ ಸಿಬ್ಬಂದಿ ನೀರು ನಿಂತು ಆಗಿರುವ ತೊಂದರೆಯನ್ನು ಸರಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 

ಭಾರೀ ಮಳೆಯಿಂದಾಗಿ ಜಲಾವೃತಗೊಂಡ ಇತರ ಪ್ರದೇಶಗಳೆಂದರೆ ಪುಲ್ ಪ್ರಹ್ಲಾದಪುರ ಅಂಡರ್‌ಪಾಸ್, ಲಜಪತ್ ನಗರ, ಜಂಗಪುರ, ಐಟಿಒ, ಪ್ರಗತಿ ಮೈದಾನದ ಸುತ್ತಲಿನ ರಸ್ತೆಗಳು, ಸಂಗಮ್ ವಿಹಾರ್, ರೋಹ್ಟಕ್ ರಸ್ತೆ, ಮಂಗೋಲ್‌ಪುರಿ, ಕಿರರಿ ಮತ್ತು ಮಾಳವೀಯ ನಗರ ಸೇರಿವೆ. ದಕ್ಷಿಣ ದೆಹಲಿಯ ಮೆಹ್ರೌಲಿ-ಬದರ್‌ಪುರ್ ರಸ್ತೆಯಲ್ಲಿ ನೀರಿನ ಹರಿವಿನಿಂದಾಗಿ ಸಂಚಾರ ಸ್ಥಗಿತಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com