2047ರ ಯುವ ಭಾರತೀಯರಿಗೆ ಪತ್ರ ಬರೆದ ರತನ್ ಟಾಟಾ 

2047ರಲ್ಲಿ ಭಾರತ 100ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಳ್ಳುತ್ತದೆ. ಆ ಪ್ರಯುಕ್ತ ಅಂದಿನವರಿಗೆ ರತನ್ ಟಾಟಾ ತಮ್ಮ ಈ ಮಾತುಗಳನ್ನು ಉಳಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಟಾಟಾ ಸಂಸ್ಥೆಯ ಚೇರ್ ಮೆನ್ ರತನ್ ಟಾಟಾ ಅವರು 2047ರ ಯುವ ಭಾರತೀಯರಿಗೆ ಪತ್ರ ಬರೆದಿದ್ದಾರೆ. 2047ರಲ್ಲಿ ಭಾರತ 100ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿಕೊಳ್ಳುತ್ತದೆ. ಆ ಪ್ರಯುಕ್ತ ಅಂದಿನವರಿಗೆ ರತನ್ ಟಾಟಾ ತಮ್ಮ ಈ ಮಾತುಗಳನ್ನು ಉಳಿಸಿದ್ದಾರೆ. 

2047ನೇ ಇಸವಿಯ ನನ್ನ ಯುವ ಮಿತ್ರರೇ,

ಭಾರತವನ್ನು ಇನ್ನೂ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಕಾಪಾಡಿಕೊಂಡಿರುವ ನಿಮ್ಮನ್ನು ನಾನು ಅಭಿನಂದಿಸಬಯಸುತ್ತೇನೆ. ಗಡಿ ಬಿಕ್ಕಟ್ಟುಗಳು, ಧಾರ್ಮಿಕ ವಿವಾದಗಳಿಂದ ಮುಕ್ತವಾದ ರಾಷ್ಟ್ರವನ್ನು ನಿರ್ಮಾಣ ಮಾಡಿದ್ದೀರಾ. ಮುಕ್ತವಾದ ವಾತಾವರಣ ನಿರ್ಮಾಣಗೊಂಡಿದೆಯೆಂದು ನಾನು ಆಶಿಸುತ್ತೇನೆ. 

ಭಾರತದ ಅಭಿವೃದ್ಧಿ, ಭಾರತೀಯರ ಹಿತಾಸಕ್ತಿಗಳನ್ನು ಗೌರವಿಸುವ ಸರ್ಕಾರಕ್ಕೆ ಮತ ಹಾಕುವುದರ ಮೂಲಕ ಜವಾಬ್ದಾರಿಯನ್ನು ನೀವು ತೋರಿರುವುದು ಶ್ಲಾಘನಾರ್ಹ.

ಜಾಗತಿಕ ಮಟ್ಟದಲ್ಲಿ ಆರ್ಥಿಕವಾಗಿ ಭಾರತ ಸದೃಢಗೊಂಡಿರುವುದಷ್ಟೇ ಅಲ್ಲದೆ ಮಹತ್ವಪೂರ್ಣ ಸ್ಥಾನವನ್ನು ಪಡೆದಿದೆ ಎಂದು ನಾನು ತಿಳಿಯುತ್ತೇನೆ. ಸರ್ಕಾರದ ದೂರದೃಷ್ಟಿತ್ವ ಉಳ್ಳ ಉತ್ತಮ ಆರ್ಥಿಕ ನೀತಿಗಳು ಜಾರಿಗೊಂಡಿರುತ್ತದೆ. ಭಾರತ ಸದೃಢಗೊಳ್ಳುವಲ್ಲಿ ಅದರ ಪಾತ್ರವೇ ಹಿರಿದು. 

ಎಲ್ಲಕ್ಕಿಂತ ಮಿಗಿಲಾಗಿ ರಾಷ್ಟ್ರದಲ್ಲಿ ಶಾಂತಿ ಮತ್ತು ಆರ್ಥಿಕ ಸದೃಢತೆ ತರುವ ಸರ್ಕಾರವನ್ನೇ ನನ್ನ ಯುವ ಮಿತ್ರರು ಬೆಂಬಲಿಸಿರುತ್ತಾರೆ. ಅದರಿಂದಾಗಿಯೇ ೨೦೪೭ರ ಭಾರತ ಜಗತ್ತಿನಲ್ಲಿಯೇ ತಲೆಯೆತ್ತಿ ನಿಂತಿದೆ.

- ರತನ್ ಟಾಟಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com