ಪಕ್ಷ ತೊರೆದ ತ್ರಿಪುರಾ ಕಾಂಗ್ರೆಸ್ ಮುಖ್ಯಸ್ಥ ಪಿಜುಶ್ ಕಾಂತಿ

ತ್ರಿಪುರಾ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಹಂಗಾಮಿ ಅಧ್ಯಕ್ಷ ಪಿಜುಶ್ ಕಾಂತಿ ಬಿಸ್ವಾಸ್ ಪಕ್ಷವನ್ನು ತೊರೆದಿದ್ದು ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ.
ಪಿಜುಶ್ ಕಾಂತಿ
ಪಿಜುಶ್ ಕಾಂತಿ

ಅಗರ್ತಲಾ: ತ್ರಿಪುರಾ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಹಂಗಾಮಿ ಅಧ್ಯಕ್ಷ ಪಿಜುಶ್ ಕಾಂತಿ ಬಿಸ್ವಾಸ್ ಪಕ್ಷವನ್ನು ತೊರೆದಿದ್ದು ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದ ತಾವು ರಾಜೀನಾಮೆ ನೀಡುತ್ತಿರುವುದಾಗಿ ಪಿಜುಶ್ ಕಾಂತಿ ಬಿಸ್ವಾಸ್ ಹೇಳಿದ್ದಾರೆ.

ಟ್ವಿಟರ್ ನಲ್ಲಿ ಬರೆದಿರುವ ಪಿಜುಶ್ ಕಾಂತಿ ಬಿಸ್ವಾಸ್ "ಪ್ರಾಮಾಣಿಕ ಕೃತಜ್ಞತೆಯೊಂದಿಗೆ ಟಿಪಿಸಿಸಿ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಸಹಕರಿಸಿದ ಎಲ್ಲಾ ಕಾಂಗ್ರೆಸ್ ನಾಯಕರು, ಬೆಂಬಲಿಗರಿಗೂ ಧನ್ಯವಾದ ಅರ್ಪಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ನಾನು ರಾಜೀನಾಮೆ ನೀಡುತ್ತಿದ್ದೇನೆ ಹಾಗೂ ರಾಜಕೀಯದಿಂದಲೂ ನಿವೃತ್ತನಾಗುತ್ತಿದ್ದೇನೆ, ಕಾಂಗ್ರೆಸ್ ಅಧ್ಯಕ್ಷ್ಯೆ ಸೋನಿಯಾ ಗಾಂಧಿ ಅವರಿಗೂ ನನ್ನ ಪ್ರಾಮಾಣಿಕ ಕೃತಜ್ಞತೆಗಳು" ಎಂದು ಪಿಜುಶ್ ಕಾಂತಿ ಬಿಸ್ವಾಸ್ ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷರಿಗೆ ಹಾಗೂ ರಾಹುಲ್ ಗಾಂಧಿಗೆ ತಮ್ಮ ರಾಜೀನಾಮೆ ಪತ್ರವನ್ನು ಈಗಾಗಲೇ ತಲುಪಿಸಿರುವುದಾಗಿ ಪಿಜುಶ್ ಕಾಂತಿ ಬಿಸ್ವಾಸ್ ತಿಳಿಸಿದ್ದಾರೆ. ರಾಜೀನಮೆಗೆ ಕಾರಣಗಳನ್ನು ಬಹಿರಂಗಗೊಳಿಸಲು ಸಾಧ್ಯವಾಗುತ್ತಿಲ್ಲ. ಆದರೆ ವೈಯಕ್ತಿಕ ಕಾರಣಗಳಿಂದಷ್ಟೇ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪಿಜುಶ್ ಕಾಂತಿ ಬಿಸ್ವಾಸ್ ಹೇಳಿದ್ದಾರೆ.

ತ್ರಿಪುರಾ ಹೈಕೋರ್ಟ್ ನ ಹಿರಿಯ ಅಡ್ವೊಕೇಟ್ ಆಗಿದ್ದ ಬಿಸ್ವಾಸ್ ಅವರನ್ನು 2019 ರಲ್ಲಿ ತ್ರಿಪುರಾ ಕಾಂಗ್ರೆಸ್ ವಿಭಾಗದ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com