ಅಫ್ಘಾನಿಸ್ತಾನದಿಂದ ಭಾರತದ ಪ್ರಜೆಗಳ ಸ್ಥಳಾಂತರ: ಪ್ರಧಾನಿ ಮೋದಿ, ಎಂಇಎಗೆ ಧನ್ಯವಾದ ಸಲ್ಲಿಸಿದ ಕೇರಳ ಸಿಎಂ

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಫ್ಘಾನಿಸ್ತಾನದಿಂದ ಕೇರಳಿಗರು  ಒಳಗೊಂಡಂತೆ ಭಾರತೀಯರನ್ನು ಸ್ಥಳಾಂತರಿಸುವುದು ಮತ್ತು ಸ್ವದೇಶಕ್ಕೆ ಕರೆಸಿಕೊಳ್ಳುವುದು ಶ್ಲಾಘನೀಯ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾನುವಾರ ಹೇಳಿದ್ದಾರೆ. ಅಲ್ಲದೇ  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಕೇರಳ ಮುಖ್ಯಮಂತ್ರಿಪಿಣರಾಯಿ ವಿಜಯನ್
ಕೇರಳ ಮುಖ್ಯಮಂತ್ರಿಪಿಣರಾಯಿ ವಿಜಯನ್

ತಿರುವನಂತಪುರಂ: ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಫ್ಘಾನಿಸ್ತಾನದಿಂದ ಕೇರಳಿಗರು  ಒಳಗೊಂಡಂತೆ ಭಾರತೀಯರನ್ನು ಸ್ಥಳಾಂತರಿಸುವುದು ಮತ್ತು ಸ್ವದೇಶಕ್ಕೆ ಕರೆಸಿಕೊಳ್ಳುವುದು ಶ್ಲಾಘನೀಯ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾನುವಾರ ಹೇಳಿದ್ದಾರೆ. ಅಲ್ಲದೇ  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿರುವ ವಿಜಯನ್, ನೆರವಿನ ಅಗತ್ಯವಿರುವ ಕೇರಳಿಗರು Norka roots ಸಂಪರ್ಕಿಸಬಹುದೆಂದು ಅವರು ಹೇಳಿದ್ದಾರೆ.

ಭಾನುವಾರ ಇಬ್ಬರು ಆಫ್ಘನ್ ಶಾಸಕರು ಸೇರಿದಂತೆ ಸುಮಾರು 400 ಜನರನ್ನು ಕಾಬೂಲ್ ನಿಂದ ಭಾರತಕ್ಕೆ ಕರೆತರಲಾಗಿದೆ. ಅಮೆರಿಕ, ಕತಾರ್, ತಜಕಿಸ್ತಾನ್ ಮತ್ತಿತರ ಅನೇಕ ಮಿತ್ರ ರಾಷ್ಟ್ರಗಳ ಸಹಕಾರದೊಂದಿಗೆ ಭಾರತ ಸ್ಥಳಾಂತರ ಕಾರ್ಯವನ್ನು ಮಾಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com