ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ರೈಲ್ವೆಗೆ 36,000 ಕೋಟಿ ರೂಪಾಯಿ ನಷ್ಟ!

ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ರೈಲ್ವೆ 36,000 ಕೋಟಿ ರೂಪಾಯಿ ನಷ್ಟ ಎದುರಿಸಿದೆ ಎಂದು ಕೇಂದ್ರ ಸಚಿವ ರಾವ್ ಸಾಹೇಬ್ ದನ್ವೆ ಮಾಹಿತಿ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ ರೈಲ್ವೆ 36,000 ಕೋಟಿ ರೂಪಾಯಿ ನಷ್ಟ ಎದುರಿಸಿದೆ ಎಂದು ಕೇಂದ್ರ ಸಚಿವ ರಾವ್ ಸಾಹೇಬ್ ದನ್ವೆ ಮಾಹಿತಿ ನೀಡಿದ್ದಾರೆ.

ಗೂಡ್ಸ್ ರೈಲುಗಳು ರಾಷ್ಟ್ರೀಯ ಸಾಗಣೆ ವಿಭಾಗದ ನಿಜವಾದ ಆದಾಯದ ಮೂಲ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ರಾವ್ ಸಾಹೇಬ್ ದನ್ವೆ ಹೇಳಿದ್ದಾರೆ.

ಮುಂಬೈ-ನಾಗ್ಪುರ ಎಕ್ಸ್ ಪ್ರೆಸ್ ವೇ ಮಾರ್ಗದಲ್ಲಿ ಬುಲೆಟ್ ಟ್ರೈಲ್ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಜಲ್ನಾ ರೈಲ್ವೆ ನಿಲ್ದಾಣದ ಬಳಿ ಕೆಳಸೇತುವೆಗೆ ಶಂಕುಸ್ಥಾಪನೆ ಕಾಮಗಾರಿಯ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.

"ಪ್ರಯಾಣಿಕ ರೈಲು ವಿಭಾಗ ಯಾವಾಗಲೂ ನಷ್ಟದಲ್ಲಿ ನಡೆಯುತ್ತದೆ. ಟಿಕೆಟ್ ದರ ಏರಿಕೆ ಮಾಡಿದರೆ ಅದು ಪ್ರಯಾಣಿಕರ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಅದು ಸಾಧ್ಯವಿಲ್ಲ, ಸಾಂಕ್ರಾಮಿಕದ ಅವಧಿಯಲ್ಲಿ ರೈಲ್ವೆ 36,000 ಕೋಟಿ ರೂಪಾಯಿ ನಷ್ಟ ಎದುರಿಸಿದೆ ಎಂದು ಅವರು ಹೇಳಿದ್ದಾರೆ.

ಸರಕು ಸಾಗಣೆ ರೈಲುಗಳಿಂದ ಮಾತ್ರ ಲಾಭವಿದೆ. ಸಾಂಕ್ರಾಮಿಕದ ಅವಧಿಯಲ್ಲೂ ಈ ರೈಲುಗಳು ಸರಕು ಸಾಗಣೆ, ಜನರಿಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಮಹತ್ವದ ಪಾತ್ರ ವಹಿಸಿತ್ತು ಎಂದು ಸಚಿವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com