ಕೋವಿಡ್-19 ಮೂರನೇ ಅಲೆ ಅಕ್ಟೋಬರ್ ನಲ್ಲಿ ಉತ್ತುಂಗಕ್ಕೆ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ವರದಿ

ಕೋವಿಡ್ 19 3ನೇ ಅಲೆ ಅಕ್ಟೋಬರ್ ನಲ್ಲಿ ಉತ್ತುಂಗಕ್ಕೇರಲಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ವರದಿ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಡ್ 19 3ನೇ ಅಲೆ ಅಕ್ಟೋಬರ್ ನಲ್ಲಿ ಉತ್ತುಂಗಕ್ಕೇರಲಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ವರದಿ ಮಾಡಿದೆ.

ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಸ್ಥಾಪಿಸಲಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ (NIDM) ಅಡಿಯಲ್ಲಿ ರಚಿಸಲಾದ ತಜ್ಞರ ಸಮಿತಿಯು ಈ ಕುರಿತಂತೆ ವರದಿ ನೀಡಿದ್ದು, ಕೊವಿಡ್ -19 ರ ಮೂರನೇ ತರಂಗವು ಅಕ್ಟೋಬರ್ ವೇಳೆಗೆ ಉತ್ತುಂಗಕ್ಕೇರಬಹುದು ಎಂದು ಹೇಳಿದೆ.  ಅಲ್ಲದೆ ಈ ವರದಿಯನ್ನು ಪ್ರಧಾನಮಂತ್ರಿ ಕಚೇರಿಗೆ ಸಲ್ಲಿಸಲಾಗಿದೆ.

ಅಂತೆಯೇ ಈ ವರದಿಯಲ್ಲಿ ಇಂತಹ ಸನ್ನಿವೇಶಗಳನ್ನು ಎದುರಿಸಲು ದೇಶದಾದ್ಯಂತ ಇರುವ ಮಕ್ಕಳ ಸೌಲಭ್ಯಗಳು ಅಸಮರ್ಪಕವಾಗಿರುವುದನ್ನು ಎತ್ತಿ ತೋರಿಸಿದ್ದು, ವೈದ್ಯಕೀಯ ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸಲು ಕರೆ ನೀಡಿದೆ ಎಂದು ಹೇಳಲಾಗಿದೆ. 

ವೈದ್ಯಕೀಯ ಸೌಲಭ್ಯಗಳ ಕೊರತೆ, ವೈದ್ಯರು, ಸಿಬ್ಬಂದಿ ಕೊರತೆ ಮತ್ತು ಅಂತಹ ಸನ್ನಿವೇಶಗಳನ್ನು ಎದುರಿಸಲು ವೆಂಟಿಲೇಟರ್‌ಗಳು, ಆಂಬ್ಯುಲೆನ್ಸ್‌ಗಳಂತಹ ಉಪಕರಣಗಳ ಕೊರತೆಯ ಬಗ್ಗೆ ವರದಿ ಎಚ್ಚರಿಸಿದೆ. ಈಗಿರುವ ವೈದ್ಯಕೀಯ ಸೌಲಭ್ಯಗಳು ಹೆಚ್ಚಿನ ಸಂಖ್ಯೆಯ ಮಕ್ಕಳು ಸೋಂಕಿಗೆ ಒಳಗಾದ ಸಂದರ್ಭದಲ್ಲಿ ಸಾಕಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ಪ್ರತೀ 100 ಸೋಂಕು ಪ್ರಕರಣಗಳಲ್ಲಿ 23 ಮಂದಿ ಆಸ್ಪತ್ರೆಗೆ ದಾಖಲು ಸಾಧ್ಯತೆ!!!
ಏತನ್ಮಧ್ಯೆ, ನೀತಿ ಆಯೋಗದ ಸದಸ್ಯ ವಿ ಕೆ ಪೌಲ್ ನೇತೃತ್ವದ ಗುಂಪು, ಕಳೆದ ತಿಂಗಳು ಸರ್ಕಾರದೊಂದಿಗೆ ಹಂಚಿಕೊಂಡಿದ್ದ ಶಿಫಾರಸಿನಲ್ಲಿ, ಭವಿಷ್ಯದಲ್ಲಿ ಕೊವಿಡ್ -19 ಸೋಂಕಿನ ಏರಿಕೆಯಲ್ಲಿ ಪ್ರತಿ 100 ಸೋಂಕು ಪ್ರಕರಣಗಳಲ್ಲಿ 23 ಸೋಂಕಿತರು ಆಸ್ಪತ್ರೆಗೆ ದಾಖಲಾಗುವಂತವುಗಳಾಗಿರುತ್ತವೆ ಎಂದಿದೆ. ಈ ಅಂದಾಜು ಸೆಪ್ಟೆಂಬರ್ 2020 ರಲ್ಲಿ ಎರಡನೇ ಅಲೆಗೆ ಮುಂಚಿತವಾಗಿ ತಜ್ಞರ ಗುಂಪು ಮಾಡಿದ ಊಹೆಗಿಂತ ಹೆಚ್ಚಾಗಿತ್ತು. “ತೀವ್ರ/ ಮಧ್ಯಮ ತೀವ್ರ” ರೋಗಲಕ್ಷಣಗಳನ್ನು ಹೊಂದಿರುವ ಸುಮಾರು ಶೇ.20 ರೋಗಿಗಳಿಗೆ ಆಸ್ಪತ್ರೆಗೆ ಅಗತ್ಯವಿರುತ್ತದೆ ಎಂದು ಲೆಕ್ಕಾಚಾರ ಮಾಡಲಾಗಿತ್ತು.

ಹೆಚ್ಚೆಚ್ಚು ಹಾಸಿಗೆಗಳ ಸಿದ್ಧತೆಯಾಗಬೇಕು
ಕೊವಿಡ್ -19 ಎರಡನೇ ಅಲೆ ನಂತರ, ಈ ವರ್ಷದ ಏಪ್ರಿಲ್-ಜೂನ್ ಅವಧಿಯಲ್ಲಿ ಕಂಡುಬಂದ ಮಾದರಿಯನ್ನು ಆಧರಿಸಿ ಹೆಚ್ಚಿನ ಸಂಖ್ಯೆಯ ಆಸ್ಪತ್ರೆ ಹಾಸಿಗೆಗಳನ್ನು ಮೀಸಲಿಡುವ ಶಿಫಾರಸನ್ನು ಮಾಡಲಾಗಿದೆ. ವರದಿ ಪ್ರಕಾರ ಅದರ ಉತ್ತುಂಗದಲ್ಲಿ, ಜೂನ್ 1 ರಂದು ದೇಶಾದ್ಯಂತ ಸಕ್ರಿಯ ಪ್ರಕರಣಗಳು 18 ಲಕ್ಷ ಆಗಿದ್ದು ಈ ಪೈಕಿ ಶೇ 21.74 ಪ್ರಕರಣಗಳು 10 ರಾಜ್ಯಗಳಲ್ಲಿ ಆಸ್ಪತ್ರೆಗೆ ದಾಖಲಾಗಬೇಕಾಗಿದ್ದು, ಅವುಗಳಲ್ಲಿ ಗರಿಷ್ಠ ಪ್ರಕರಣಗಳು ಶೇ 2.2 ಐಸಿಯು ಚಿಕಿತ್ಸೆ ಪಡೆಯಬೇಕಾಗಿ ಬಂದಿತ್ತು. ಆದಾಗ್ಯೂ ಹಾಲಿ  ಇರುವ ಮೂಲಸೌಕರ್ಯಕ್ಕಿಂತ ಹೆಚ್ಚಿನದ್ದು ಮತ್ತು ಹೆಚ್ಚಿನ ಬೆಡ್ ಗಳ ಅಗತ್ಯವಿದೆ ಎಂದು ಹೇಳಲಾಗಿದೆ.

ಕೇಂದ್ರಸರ್ಕಾರದಿಂದ ಅಗತ್ಯ ಸಿದ್ಧತೆ
ಕೊವಿಡ್ -19 ರ ಮೂರನೇ ಅಲೆಯನ್ನು ನಿಭಾಯಿಸಲು ಕೇಂದ್ರವು ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಈ ಉದ್ದೇಶಕ್ಕಾಗಿ 23,123 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಶುಕ್ರವಾರ ತಿಳಿಸಿದ್ದಾರೆ. ಮೂರನೇ ತರಂಗವು ಇತರರಿಗಿಂತ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎಂಬ ಆತಂಕದ ನಡುವೆ ಮಕ್ಕಳ ಆರೈಕೆಯನ್ನು ಬಲಪಡಿಸಲು ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ಅವರು ಹೇಳಿದರು.

 ಕೋವಿಡ್ -19 ಸಾಂಕ್ರಾಮಿಕದ ಮೂರನೇ ಅಲೆಯು ಜುಲೈ 15 ಮತ್ತು ಅಕ್ಟೋಬರ್ 13, 2021 ರ ನಡುವೆ ಭಾರತಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ. ಈಗಾಗಲೇ ಡೆಲ್ಟಾ-ಪ್ಲಸ್ ರೂಪಾಂತರ ಮೂರನೇ ಅಲೆಗೆ ಮೂಲ ಕಾರಣವಾಗುತ್ತದೆ ಎಂದು ತಜ್ಞರು ಶಂಕಿಸಿದ್ದಾರೆ. ಇದೇ ವಿಚಾರವಾಗಿ NIDM ಕೂಡ ಮಾಹಿತಿ ನೀಡಿದ್ದು, ಡೆಲ್ಟಾ-ಪ್ಲಸ್ ರೂಪಾಂತರವು B.1.617.2 (ಡೆಲ್ಟಾ ರೂಪಾಂತರ) ದ ರೂಪಾಂತರದಿಂದಾಗಿ ಭಾರತದಲ್ಲಿ ಮಾರಕ ಎರಡನೇ ಏರಿಕೆಗೆ ಕಾರಣವಾಗಿತ್ತು. ಮೂರನೇ ಅಲೆಗೂ ಇದೇ ರೂಪಾಂತರ ಕಾರಣವಾಗಬಹುದು ಎಂದು ಹೇಳಿದೆ.

 ಈ ಹೊಸ ವೈರಸ್ ರೂಪಾಂತರವು ಡೆಲ್ಟಾ ರೂಪಾಂತರದ ಉಪ-ವಂಶವಾಗಿದ್ದು, ಇದು ಸ್ಪೈಕ್ ಪ್ರೋಟೀನ್ ಮ್ಯುಟೇಶನ್ 'K417N' ಸಾಮರ್ಥ್ಯವನ್ನು ಪಡೆದುಕೊಂಡಿದೆ, ಇದು ಬೀಟಾ ರೂಪಾಂತರದಲ್ಲಿ ಕಂಡುಬರುತ್ತದೆ (ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದೆ).

"ಡೆಲ್ಟಾ ಪ್ಲಸ್ ರೂಪಾಂತರವನ್ನು ಡೆಲ್ಟಾಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಕರೆಯಲು ಈಗ ಸಾಕಷ್ಟು ಪುರಾವೆಗಳಿಲ್ಲದಿದ್ದರೂ, NCDC ಪ್ರಕಾರ, ಆಗಸ್ಟ್ 2, 2021 ರ ವೇಳೆಗೆ, ಈ ರೂಪಾಂತರವು 58,240 ಮಾದರಿಗಳ ಪೈಕಿ 16 ರಾಜ್ಯಗಳಲ್ಲಿ 70 ಪ್ರಕರಣಗಳಲ್ಲಿ ಪತ್ತೆಯಾಗಿದೆ ಎಂದು ಹೇಳಿದೆ. 

ಮಕ್ಕಳ ಮೇಲೆ ಪರಿಣಾಮ
ಮಕ್ಕಳ ಮೇಲೆ ಸಂಭವನೀಯ ಕೋವಿಡ್ ಮೂರನೇ ಅಲೆಯ ಪರಿಣಾಮವನ್ನು ಒತ್ತಿ ಹೇಳುತ್ತಾ, ಭಾರತೀಯ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಪ್ರಸ್ತುತ ಮತ್ತು ಹೊಸ ಡೆಲ್ಟಾ ಪ್ಲಸ್ ರೂಪಾಂತರವು ವಯಸ್ಕರಿಗಿಂತ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದಕ್ಕೆ ಯಾವುದೇ ಜೈವಿಕ ಪುರಾವೆಗಳಿಲ್ಲ ಎಂದು ವರದಿ ಹೇಳಿದೆ. ಲ್ಯಾನ್ಸೆಟ್ ಕೋವಿಡ್ -19 ಕಮಿಷನ್ ಇಂಡಿಯಾ ಟಾಸ್ಕ್ ಫೋರ್ಸ್ ನಿರೀಕ್ಷಿತ ಮೂರನೇ ತರಂಗವು ನಿರ್ದಿಷ್ಟವಾಗಿ ಮಕ್ಕಳನ್ನು ಗುರಿಯಾಗಿಸುತ್ತದೆ ಎಂಬುದಕ್ಕೆ ಯಾವುದೇ ಪ್ರಸ್ತುತ ಪುರಾವೆಗಳಿಲ್ಲ ಎಂದು ತೀರ್ಮಾನಿಸಿದೆ ಎಂದು ವರದಿ ಹೇಳಿದೆ.

ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್-ಏಮ್ಸ್) ನಿಂದ ಸಿರೊಲಾಜಿಕಲ್ ಸಮೀಕ್ಷೆ (4 ರಾಜ್ಯಗಳ 45,000 ಕ್ಕೂ ಹೆಚ್ಚು ಮಾದರಿಗಳಿಂದ), ನಿರ್ದಿಷ್ಟವಾಗಿ ಮಕ್ಕಳನ್ನು (ಎರಡು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ) ಗುರಿಯಾಗಿಸುವ ಭವಿಷ್ಯದ ಅಲೆಯ ಊಹೆಯು ಆಧಾರ ರಹಿತವಾಗಿದೆ ಎಂದು ಸೂಚಿಸುತ್ತದೆ ಎಂದು ಹೇಳಲಾಗಿದೆ. ಅಧ್ಯಯನವು 2-17 ವರ್ಷ ವಯಸ್ಸಿನವರಲ್ಲಿ 55.7 ಪ್ರತಿಶತದಷ್ಟು ಮತ್ತು ವಯಸ್ಕರಲ್ಲಿ 63.5 ಪ್ರತಿಶತದಷ್ಟು ಸೆರೋಲಾಜಿಕಲ್ ಪ್ರಾಬಲ್ಯವನ್ನು ಗಮನಿಸಿದೆ, ಇದು ವಯಸ್ಕರು ಮತ್ತು ಮಕ್ಕಳ ನಡುವಿನ ಅಂಕಿಅಂಶಗಳ ವ್ಯತ್ಯಾಸವನ್ನು ಸ್ಪಷ್ಟವಾಗಿ ನಿರ್ಧರಿಸುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com