ಆಫ್ಘನ್ ಬಿಕ್ಕಟ್ಟು: 'ಸಿಎಎ ಕಾಯ್ದೆ ಏಕೆ ಬೇಕು ಎಂದು ಈಗ ನಿಖರವಾಗಿ ತಿಳಿಯುತ್ತಿದೆ': ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

ಆಫ್ಘಾನಿಸ್ತಾನ ಬಿಕ್ಕಟ್ಟು ತಾರಕಕ್ಕೇರುತ್ತಿರುವಂತೆಯೇ ಇತ್ತ ಆಫ್ಘನ್ ನಲ್ಲಿರುವ ಭಾರತ ಮೂಲದ ನಿವಾಸಿಗಳು ತವರಿಗೆ ವಾಪಸ್ ಆಗುತ್ತಿದ್ದು, ಇದರ ನಡುವೆಯೇ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸಿಎಎ ಕಾಯ್ದೆ ಏಕೆ ಬೇಕು ಎಂದು ಈಗ ನಿಖರವಾಗಿ ತಿಳಿಯುತ್ತಿದೆ ಎಂದು ಹೇಳಿದ್ದಾರೆ.
ಹರ್ದೀಪ್ ಸಿಂಗ್ ಪುರಿ
ಹರ್ದೀಪ್ ಸಿಂಗ್ ಪುರಿ

ನವದೆಹಲಿ: ಆಫ್ಘಾನಿಸ್ತಾನ ಬಿಕ್ಕಟ್ಟು ತಾರಕಕ್ಕೇರುತ್ತಿರುವಂತೆಯೇ ಇತ್ತ ಆಫ್ಘನ್ ನಲ್ಲಿರುವ ಭಾರತ ಮೂಲದ ನಿವಾಸಿಗಳು ತವರಿಗೆ ವಾಪಸ್ ಆಗುತ್ತಿದ್ದು, ಇದರ ನಡುವೆಯೇ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸಿಎಎ ಕಾಯ್ದೆ ಏಕೆ ಬೇಕು ಎಂದು ಈಗ ನಿಖರವಾಗಿ ತಿಳಿಯುತ್ತಿದೆ ಎಂದು ಹೇಳಿದ್ದಾರೆ.

ತಾಲಿಬಾನಿ ಪಡೆಗಳು ಆಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ಬಳಿಕ ಅಲ್ಲಿನ ನಿವಾಸಿಗಳು ಮತ್ತು ತಾಲಿಬಾನ್ ಆಡಳಿತ ವಿರೋಧಿಸುತ್ತಿರುವವರು ದೇಶ ತೊರೆಯುತ್ತಿದ್ದು, ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ಅಫ್ಘಾನಿಸ್ತಾನ ಬಿಕ್ಕಟ್ಟಿನ ಮೂಲಕ ‘ನಿಖರವಾಗಿ' ಏಕೆ ಪೌರತ್ವ ತಿದ್ದುಪಡಿ ಕಾಯ್ದೆ ಅಗತ್ಯ ಎಂಬುದು ತಿಳಿದುಬರುತ್ತದೆ ಎಂದು ಹೇಳಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಪುರಿ, 'ನಮ್ಮ ಅಸ್ಥಿರ ನೆರೆರಾಷ್ಟ್ರಗಳ ಇತ್ತೀಚಿನ ಬೆಳವಣಿಗೆಗಳಿಂದಾಗಿ ಸಿಖ್ಖರು ಮತ್ತು ಹಿಂದೂಗಳು ಕಷ್ಟದ ಸಮಯವನ್ನು ಅನುಭವಿಸುತ್ತಿದ್ದಾರೆ. ಈ ಸಂದರ್ಭವು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಏಕೆ ಅಗತ್ಯ ಎಂಬುದನ್ನು ನಿಖರವಾಗಿ ಸೂಚಿಸುತ್ತದೆ ಎಂದು ಹೇಳಿದ್ದಾರೆ.

2019ರಲ್ಲಿ ಸಿಎಎ ಕಾಯ್ದೆಯನ್ನು ಅಂಗೀಕರಿಸಿದಾಗ ರಾಷ್ಟ್ರ ರಾಜಧಾನಿಯಲ್ಲಿ ಹಲವು ವಾರಗಳ ಕಾಲ ಪ್ರತಿಭಟನೆಗಳು ನಡೆದಿದ್ದವು. ಗಲಭೆಯಲ್ಲಿ ಸುಮಾರು 100 ಜನರು ಸಾವನ್ನಪ್ಪಿದ್ದರು. 2015ಕ್ಕೂ ಮುನ್ನ ಭಾರತಕ್ಕೆ ಬಂದ ನೆರೆಹೊರೆಯ ಮುಸ್ಲಿಂ ಬಹುಸಂಖ್ಯಾತ ದೇಶಗಳ ಕಿರುಕುಳಕ್ಕೊಳಗಾದ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಈ ಕಾನೂನು ಪೌರತ್ವವನ್ನು ಒದಗಿಸುತ್ತದೆ. ಇದು 2019 ರಲ್ಲಿ ಅಂಗೀಕರಿಸಲ್ಪಟ್ಟು, ಜನವರಿ 10, 2020 ರಲ್ಲಿ ಜಾರಿಗೆ ಬಂದಿತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com