ಅಸ್ಸಾಂ ವಶಕ್ಕೆ ಪಡೆದಿದ್ದ ನಿರ್ಮಾಣ ಸಾಮಗ್ರಿ ವಾಪಸ್: ಮಿಜೊರಾಮ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಸುಧಾರಣೆ

ಅಸ್ಸಾಂ-ಮಿಜೊರಾಮ್ ಗಡಿ ಭಾಗದಲ್ಲಿ ಉಂಟಾಗಿದ್ದ ಹೊಸ ಉದ್ವಿಗ್ನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ.
ಅಸ್ಸಾಂ ವಶಕ್ಕೆ ಪಡೆದಿದ್ದ ನಿರ್ಮಾಣ ಸಾಮಗ್ರಿ
ಅಸ್ಸಾಂ ವಶಕ್ಕೆ ಪಡೆದಿದ್ದ ನಿರ್ಮಾಣ ಸಾಮಗ್ರಿ

ಗುವಾಹಟಿ: ಅಸ್ಸಾಂ-ಮಿಜೊರಾಮ್ ಗಡಿ ಭಾಗದಲ್ಲಿ ಉಂಟಾಗಿದ್ದ ಹೊಸ ಉದ್ವಿಗ್ನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ.

ಅಸ್ಸಾ ನ ಹೈಲಕಂದಿ ಜಿಲ್ಲಾಡಳಿತ ವಶಕ್ಕೆ ಪಡೆದಿದ್ದ ನಿರ್ಮಾಣ ಕಾಮಗಾರಿ ಸಾಮಗ್ರಿಗಳನ್ನು ಮಿಜೊರಾಮ್ ನ ಕೊಲಾಸಿಬ್ ಜಿಲ್ಲಾಡಳಿತಕ್ಕೆ ವಾಪಸ್ ನೀಡಿದ ಬಳಿಕ ಪರಿಸ್ಥಿತಿ ಸುಧಾರಣೆ ಕಂಡಿದೆ.
 
ಮಿಜೊರಾಮ್ ನ ಸೇತುವೆ ನಿರ್ಮಾಣ ಕಾಮಗಾರಿಯನ್ನು ತಡೆದಿದ್ದ ಅಸ್ಸಾಂ ಪೊಲೀಸ್ ಸಿಬ್ಬಂದಿಗಳು ಟಿಎಂಟಿ ಬಾರ್ ಸೇರಿದಂತೆ ಹಲವು ನಿರ್ಮಾಣ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದರ ಪರಿಣಾಮ ಗಡಿ ಭಾಗದಲ್ಲಿ ಹೊಸ ವಿವಾದ ಉಂಟಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

ಈ ಘಟನೆಯ ಬಳಿಕ ಮಿಜೊರಾಮ್ ಪೊಲೀಸರು ಅಸ್ಸಾಂ ಪೊಲೀಸರ ವಿರುದ್ಧ ಕಳ್ಳತನದ ಪ್ರಕರಣ ದಾಖಲಿಸಿದ್ದರು. ಮಿಜೊರಾಮ್ ನ ಪ್ರಕಾರ ಸೇತುವೆ ನಿರ್ಮಾಣವಾಗುತ್ತಿದ್ದ ಪ್ರದೇಶ ಕೊಲಸಿಬ್ ಜಿಲ್ಲೆಯ ಬೈರಾಬಿಗೆ ಸೇರಿದ್ದಾಗಿದೆ. ಆದರೆ ಅಸ್ಸಾಂ ಈ ಪ್ರದೇಶವನ್ನು ತನ್ನದೆಂದು ಹೇಳುತ್ತಿದ್ದು ಹೈಲಕಂದಿ ಜಿಲ್ಲೆಯ ಕಚುರ್ತಲ್ ನಲ್ಲಿದೆ.

ಮಿಜೊರಾಮ್ ನ ಕೊಲಸಿಬ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೆಚ್ ಲಥಲಾಂಗ್ಲಿಯಾನ ಅಸ್ಸಾಂ ನ ಜಿಲ್ಲಾಡಳಿತ ನಿರ್ಮಾಣ ಸಾಮಗ್ರಿಗಳನ್ನು ಹಿಂತಿರುಗಿಸಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಅಸ್ಸಾಂ ನಿಂದ ನಿರ್ಮಾಣ ಸಾಮಗ್ರಿಗಳು ವಾಪಸ್ ದೊರೆತಿರುವ ಹಿನ್ನೆಲೆಯಲ್ಲಿ ಮಿಜೊರಾಮ್ ಪೊಲೀಸರು ಅಸ್ಸಾಂ ಪೊಲೀಸರ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಹಿಂಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com