ಭಾರತದಲ್ಲಿ ಕೋವಿಡ್-19 ಎಂಡೆಮಿಕ್ ಹಂತ ತಲುಪುತ್ತಿದೆ: ಡಬ್ಲ್ಯುಹೆಚ್ಒ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್

ಭಾರತದಲ್ಲಿ ಪ್ಯಾಂಡೆಮಿಕ್ ಹಂತದಲ್ಲಿದ್ದ ಕೋವಿಡ್-19 ಸೋಂಕು ಈಗ ಎಂಡೆಮಿಕ್ ಹಂತ ತಲುಪುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ಸೌಮ್ಯ ಸ್ವಾಮಿನಾಥನ್
ಸೌಮ್ಯ ಸ್ವಾಮಿನಾಥನ್

ನವದೆಹಲಿ: ಭಾರತದಲ್ಲಿ ಪ್ಯಾಂಡೆಮಿಕ್ ಹಂತದಲ್ಲಿದ್ದ ಕೋವಿಡ್-19 ಸೋಂಕು ಈಗ ಎಂಡೆಮಿಕ್ ಹಂತ ತಲುಪುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.

ಎಂಡೆಮಿಕ್ ಹಂತದಲ್ಲಿ ಸೋಂಕು ಪ್ರಸರಣ ಕಡಿಮೆ ಅಥವಾ ಮಧ್ಯಮ ಮಟ್ಟದಲ್ಲಿರುತ್ತದೆ ಹಾಗೂ ಜನಸಂಖ್ಯೆ ವೈರಾಣುವಿನೊಂದಿಗೆ ಜೀವಿಸುವುದನ್ನು ಕಲಿಯುವ ಹಂತವಾಗಿದೆ ಎಂದು ಸೌಮ್ಯ ಸ್ವಾಮಿನಾಥನ್ ಅಭಿಪ್ರಾಯಪಟ್ಟಿದ್ದಾರೆ.

ದಿ ವೈರ್ ಮಾಧ್ಯಮದ ಕರಣ್ ಥಾಪರ್ ಅವರೊಂದಿಗೆ ಮಾತನಾಡಿರುವ ಸೌಮ್ಯ ಸ್ವಾಮಿನಾಥನ್, ಕೋವ್ಯಾಕ್ಸಿನ್ ಗೆ ಕ್ಲಿಯರೆನ್ಸ್ ನೀಡುವ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಗುಂಪು ಕೋವ್ಯಾಕ್ಸಿನ್ ಕುರಿತು ತೃಪ್ತಿದಾಯಕ ಅಭಿಪ್ರಾಯಹೊಂದಿ ಸೆಪ್ಟೆಂಬರ್ ಮಧ್ಯಭಾಗದಲ್ಲಿ ಕ್ಲಿಯರೆನ್ಸ್ ನೀಡಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಭಾರತದ ಗಾತ್ರ, ಜನಸಂಖ್ಯೆಯ ವೈವಿಧ್ಯತೆ, ದೇಶದ ವಿವಿಧ ಭಾಗಗಳಲ್ಲಿನ ರೋಗ ನಿರೋಧಕ ಸ್ಥಿತಿಗಳನ್ನು ಪರಿಗಣಿಸಿದರೆ, ದೇಶದಲ್ಲಿನ ಪರಿಸ್ಥಿತಿಯಲ್ಲಿ ಏರಿಳಿತಗಳು ಸಂಭವಿಸುವ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ.

ಕಳೆದ ಕೆಲವು ತಿಂಗಳುಗಳಲ್ಲಿ ಕಂಡುಬಂದಂತೆ ಸೋಂಕು ಪ್ರಸರಣ ಸಂಖ್ಯೆ ಘಾತೀಯ ಬೆಳವಣಿಗೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸೋಂಕು ಹರಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾವು ಎಂಡೆಮಿಸಿಟಿಯತ್ತ ಸಾಗುತ್ತಿರುವ ಸಾಧ್ಯತೆಗಳಿವೆ ಎಂದು ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.

ಕಡಿಮೆ ಸೋಂಕು ಪ್ರಮಾಣದ ನಡುವೆ ಇನ್ನು ಕೆಲವು ಸಮಯ ಕೊರೋನಾ ಲಸಿಕೆ ಪ್ರಮಾಣ ಹೆಚ್ಚಳವಾಗಬಹುದೆಂಬ ವಿಶ್ವಾಸವನ್ನೂ ಸೌಮ್ಯ ಸ್ವಾಮಿನಾಥನ್ ವ್ಯಕ್ತಪಡಿಸಿದ್ದಾರೆ.

2022 ರ ವೇಳೆಗೆ ಶೇ.70 ರಷ್ಟು ಮಂದಿಗೆ ಲಸಿಕೆ ನೀಡಲಾಗಿರುತ್ತದೆ. ಈ ಬಳಿಕ ದೇಶಗಳು ಮರಳಿ ಸಹಜ ಸ್ಥಿತಿಗೆ ಬರಬಹುದು ಎಂದಿರುವ ಅವರು ಕೋವಿಡ್-19 ಮಕ್ಕಳಲ್ಲಿ ಕಂಡುಬರುವ ಬಗ್ಗೆಯೂ ಮಾತನಾಡಿದ್ದಾರೆ.

ಸೆರೋಸರ್ವೆ ಹಾಗೂ ಇತರ ದೇಶಗಳಿಂದ ನಾವು ಈ ವಿಷಯವಾಗಿ ಕಲಿಯಬಹುದಾಗಿರುವುದೇನೆಂದರೆ ಮಕ್ಕಳಿಗೂ ಕೊರೋನಾ ಸೋಂಕು ತಗುಲಲಿದೆ ಹಾಗೂ ಸೋಂಕು ಅವರಿಂದಲೂ ಹರಡಲಿದೆ, ಆದರೆ ಮಕ್ಕಳಲ್ಲಿ ಕಂಡುಬರುವ ರೋಗ ತೀವ್ರತೆ ಅದೃಷ್ಟವಶಾತ್ ಕಡಿಮೆ ಪ್ರಮಾಣದಲ್ಲಿದೆ. ತುಂಬಾ ಕಡಿಮೆ ಪ್ರಮಾಣದಲ್ಲಿ ಮಕ್ಕಳಿಗೆ ರೋಗ ಉಲ್ಬಣಗೊಂಡು ವಯಸ್ಕರ ಸಂಖ್ಯೆಗಿಂತಲೂ ಕಡಿಮೆ ಪ್ರಮಾಣದಲ್ಲಿ ಸಾವುಗಳು ಸಂಭವಿಸಿವೆ. ಆದರೆ ಮಕ್ಕಳ ದಾಖಲಾತಿಗಾಗಿ ಆಸ್ಪತ್ರೆಗಳನ್ನು ಸಜ್ಜುಗೊಳಿಸುವುದು ಉತ್ತಮ, ಮಕ್ಕಳಲ್ಲಿ ಕಂಡುಬರುವ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳಿಗೂ ಮಕ್ಕಳ ತೀವ್ರ ನಿಗಾ ಘಟಕ ಉತ್ತಮ ಎಂದು ಸೌಮ್ಯ ಸ್ವಾಮಿನಾಥನ್ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com