ಸಿಸಿಟಿವಿ ಅಳವಡಿಕೆಯಲ್ಲಿ ನ್ಯೂಯಾರ್ಕ್, ಲಂಡನ್‌ ಅನ್ನೂ ಮೀರಿಸಿದ ದೆಹಲಿ

ನಗರಗಳಲ್ಲಿ ಸಿಸಿಟಿವಿ ಅಳವಡಿಕೆಯಲ್ಲಿ ರಾಜಧಾನಿ ದೆಹಲಿ ಈಗ ಲಂಡನ್, ಶಾಂಘೈ, ನ್ಯೂಯಾರ್ಕ್ ಮತ್ತು ಸಿಂಗಾಪುರದಂತಹ ನಗರಗಳನ್ನು ಮೀರಿಸಿದ್ದು, ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ನಗರಗಳಲ್ಲಿ ಸಿಸಿಟಿವಿ ಅಳವಡಿಕೆಯಲ್ಲಿ ರಾಜಧಾನಿ ದೆಹಲಿ ಈಗ ಲಂಡನ್, ಶಾಂಘೈ, ನ್ಯೂಯಾರ್ಕ್ ಮತ್ತು ಸಿಂಗಾಪುರದಂತಹ ನಗರಗಳನ್ನು ಮೀರಿಸಿದ್ದು, ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗುರುವಾರ ಹೇಳಿದ್ದಾರೆ.

ಅಂತಾರಾಷ್ಟ್ರೀಯ ನಿಯತಕಾಲಿಕದಲ್ಲಿ ಪ್ರಕಟಗೊಂಡ ವಿಶ್ಲೇಷಣೆಯನ್ನು ಉಲ್ಲೇಖಿಸಿದ ದೆಹಲಿ ಸಿಎಂ, ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಚದರ ಮೈಲಿಗೆ ಸಿಸಿಟಿವಿಗಳನ್ನು ಸ್ಥಾಪಿಸಲಾಗಿದೆ ಎಂದರು.

ಪ್ರಪಂಚದಾದ್ಯಂತದ 150 ನಗರಗಳ ವಿಶ್ಲೇಷಣೆಯಲ್ಲಿ, ದೆಹಲಿ ಜಾಗತಿಕವಾಗಿ ಗರಿಷ್ಠ ಸಿಸಿಟಿವಿ ವ್ಯಾಪ್ತಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇಲ್ಲಿ ಎಲೆಕ್ಟ್ರಾನಿಕ್ ಕಣ್ಗಾವಲು ಜಾಲವು ಪ್ರತಿ ಚದರ ಮೈಲಿಗೆ 1,826 ಕ್ಯಾಮೆರಾಗಳನ್ನು ಸ್ಥಾಪಿಸಿದೆ, ಲಂಡನ್ 1,138, ಚೆನ್ನೈ 609, ಶೆನ್ಜೆನ್ (ಚೀನಾ) 520, ವುಕ್ಸಿ (ಚೀನಾ) 472, ಕ್ವಿಂಗ್‌ಡಾವೊ (ಚೀನಾ) 415, ಶಾಂಘೈ (ಚೀನಾ) 408, ಸಿಂಗಾಪುರ 387, ಚಾಂಗ್ಶಾ(ಚೀನಾ) 353 ಮತ್ತು ವುಹಾನ್ (ಚೀನಾ) 339 ಸಿಸಿಟಿವಿಗಳನ್ನು ಅಳವಡಿಸಿವೆ.

ಪ್ರತಿ ಚದರ ಮೈಲಿಗೆ ಅತಿ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿರುವ ನಗರಗಳ ಪೈಕಿ ದೆಹಲಿಯು ಶಾಂಘೈ, ನ್ಯೂಯಾರ್ಕ್ ಹಾಗೂ ಲಂಡನ್‌ಗಳಂತಹ ಮಹಾ ನಗರಗಳನ್ನು ಹಿಂದಿಕ್ಕಿರುವ ಬಗ್ಗೆ ಹೆಮ್ಮೆಯಿದೆ. ಅತ್ಯಂತ ಕಡಿಮೆ ಸಮಯದಲ್ಲಿ ಈ ಮೈಲಿಗಲ್ಲು ಸಾಧಿಸಲು ನೆರವಾದ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳಿಗೆ ನಾನು ಅಭಿನಂದನೆ ಸಲ್ಲಿಸಲು ಬಯಸುತ್ತೇನೆ ಎಂದು ಸಿಎಂ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com