ಬಾರ್ಮಾರ್ ನಲ್ಲಿ ಮಿಗ್-21 ಪತನ: ಪೈಲಟ್ ಗಳು ಸುರಕ್ಷಿತ 

ಭಾರತೀಯ ವಾಯುಪಡೆಯ ಮಿಗ್-21 ಫೈಟರ್ ಜೆಟ್ ಗಳು ಬಾರ್ಮಾರ್ ನಲ್ಲಿ ಪತನಗೊಂಡಿದ್ದು, ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿದೆ. 
ಮಿಗ್-21
ಮಿಗ್-21

ಬಾರ್ಮಾರ್: ಭಾರತೀಯ ವಾಯುಪಡೆಯ ಮಿಗ್-21 ಫೈಟರ್ ಜೆಟ್ ಗಳು ಬಾರ್ಮಾರ್ ನಲ್ಲಿ ಪತನಗೊಂಡಿದ್ದು, ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿದೆ. 

ಪತನಗೊಂಡ ಮಿ-21 ನಲ್ಲಿದ್ದ ಪೈಲಟ್ ಗಳು ಸುರಕ್ಷಿತವಾಗಿ ಹೊರ ಹಾರಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವರ್ಷದಲ್ಲಿ ವರದಿಯಾಗುತ್ತಿರುವ ನಾಲ್ಕನೇ ಮಿಗ್-21 ಪತನದ ಪ್ರಕರಣ ಇದಾಗಿದ್ದು, ಮಸ್ತರ್ ನ ಗ್ರಾಮದ ಪ್ರದೇಶದಲ್ಲಿನ ನಿರ್ಜನ ಪ್ರದೇಶದಲ್ಲಿ ಸಂಜೆ 5:30 ಕ್ಕೆ ಪತನಗೊಂಡಿದೆ ಈ ಘಟನೆಯ ಬಗ್ಗೆ ಐಎಎಫ್ ತನಿಖೆಗೆ ಆದೇಶಿಸಿದೆ.

ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಅಮಿತಾಬ್ ಶರ್ಮಾ ಈ ಬಗ್ಗೆ ಮಾಹಿತಿ ನೀಡಿದ್ದು, ಎಂದಿನಂತೆ ಈ ಯುದ್ಧವಿಮಾನ ತರಬೇತಿ ಸೋರ್ಟಿಯಲ್ಲಿತ್ತು, ಪೈಲಟ್ ಗೆ ಸಣ್ಣ-ಪುಟ್ಟ ಗಾಯಗಳುಂಟಾಗಿವೆ ಹಾಗೂ ಸ್ಥಳೀಯರು ಪೈಲಟ್ ಗೆ ಸುರಕ್ಷಿತವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯೂ ಸಂಭವಿಸಿಲ್ಲ ಪತನಗೊಂಡ ವಿಮಾನದ ಅವೇಶಗಳ ಪೈಕಿ ಕೆಲವು ಬೆಂಕಿಗೆ ಆಹುತಿಯಾಗಿದ್ದರೆ, ಇನ್ನೂ ಕೆಲವು ಚದುರಿಹೋಗಿತ್ತು ಎಂದು ಜಿಲ್ಲಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಐಎಎಫ್, 1730 ಗಂಟೆಗಳಿಗೆ ಇಂದು ಮಿಗ್-21 ಬೈಸನ್ ವೆಸ್ಟ್ರನ್ ಸೆಕ್ಟರ್ ನಲ್ಲಿ ತರಬೇತಿಯಲ್ಲಿ ನಿರತವಾಗಿದ್ದ ಯುದ್ಧವಿಮಾನ,  ಪತನಗೊಂಡಿದೆ". ಟೇಕ್ ಆಫ್ ಆದ ನಂತರ ಕಾಣಿಸಿಕೊಂಡ ತಾಂತ್ರಿಕ ದೋಷ ಇದಕ್ಕೆ ಕಾರಣ ಎಂದು ತಿಳಿದುಬಂದಿದ್ದು ಆಂತರಿಕ ತನಿಖೆಗೆ ಆದೇಶಿಸಲಾಗಿದೆ ಎಂದು ಐಎಎಫ್ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com