ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಬಳಿ 4.05 ಕೋಟಿ ಡೋಸ್ ಗೂ ಹೆಚ್ಚು ಕೋವಿಡ್ ಲಸಿಕೆ ಲಭ್ಯ: ಕೇಂದ್ರ

4.05 ಕೋಟಿ ಡೋಸ್ ಗೂ ಹೆಚ್ಚು ಕೋವಿಡ್ ಲಸಿಕೆ ಇನ್ನೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: 4.05 ಕೋಟಿ ಡೋಸ್ ಗೂ ಹೆಚ್ಚು ಕೋವಿಡ್ ಲಸಿಕೆ ಇನ್ನೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದುವರೆಗೆ 58.86 ಕೋಟಿ ಡೋಸ್ ಗೂ ಹೆಚ್ಚು ಲಸಿಕೆ ಒದಗಿಸಲಾಗಿದೆ ಮತ್ತು ಇನ್ನೂ 17.64 ಲಕ್ಷಕ್ಕೂ ಹೆಚ್ಚು ಡೋಸ್‌ ಲಸಿಕೆ ಪೂರೈಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

4.05 ಕೋಟಿ ಡೋಸ್ ಗೂ ಹೆಚ್ಚು ಬ್ಯಾಲೆನ್ಸ್ ಮತ್ತು ಬಳಕೆಯಾಗದ ಕೋವಿಡ್ -19 ಲಸಿಕೆ ಇನ್ನೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ ಎಂದು ಕೇಂದ್ರ ಹೇಳಿದೆ.

ಕೇಂದ್ರ ಸರ್ಕಾರವು ಕೋವಿಡ್ ಲಸಿಕೆ ಅಭಿಯಾನದ ವೇಗವನ್ನು ಹೆಚ್ಚಿಸಲು ಮತ್ತು ದೇಶಾದ್ಯಂತ ಕೋವಿಡ್ ಲಸಿಕೆಯ ವ್ಯಾಪ್ತಿಯನ್ನು ವಿಸ್ತರಿಸಲು ಬದ್ಧವಾಗಿದೆ. 

ಕೋವಿಡ್ -19 ಲಸಿಕೆಯ ಸಾರ್ವತ್ರಿಕರಣದ ಹೊಸ ಹಂತವು ಜೂನ್ 21 ರಿಂದ ಆರಂಭವಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com