ಪ್ರಧಾನ ಮಂತ್ರಿ ಜನಧನ ಯೋಜನೆಗೆ 7 ವರ್ಷ: ಭಾರತದ ಅಭಿವೃದ್ಧಿ ಪಥವನ್ನೇ ಬದಲಿಸಿದ ಯೋಜನೆ ಎಂದ ಮೋದಿ

ಪ್ರಧಾನ ಮಂತ್ರಿ ಜನಧನ ಯೋಜನೆಗೆ ಇಂದಿಗೆ 7 ವರ್ಷಗಳು ಪೂರ್ಣಗೊಂಡಿದ್ದು, ಈ ಹಿನ್ನಲೆಯಲ್ಲಿ ತಮ್ಮ ಸರ್ಕಾರದ ಯೋಜನೆಯ ಕುರಿತು ಮಾತನಾಡಿರುವ ಪ್ರಧಾನಿ ಮೋದಿ, ಭಾರತದ ಅಭಿವೃದ್ಧಿ ಪಥವನ್ನೇ ಬದಲಿಸಿದ ಯೋಜನೆ ಹೇಳಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಪ್ರಧಾನ ಮಂತ್ರಿ ಜನಧನ ಯೋಜನೆಗೆ ಇಂದಿಗೆ 7 ವರ್ಷಗಳು ಪೂರ್ಣಗೊಂಡಿದ್ದು, ಈ ಹಿನ್ನಲೆಯಲ್ಲಿ ತಮ್ಮ ಸರ್ಕಾರದ ಯೋಜನೆಯ ಕುರಿತು ಮಾತನಾಡಿರುವ ಪ್ರಧಾನಿ ಮೋದಿ, ಭಾರತದ ಅಭಿವೃದ್ಧಿ ಪಥವನ್ನೇ ಬದಲಿಸಿದ ಯೋಜನೆ  ಹೇಳಿದ್ದಾರೆ.

‘ಪ್ರಧಾನ ಮಂತ್ರಿ ಜನಧನ’ ಯೋಜನೆಯು ಜನರಿಗೆ ಬ್ಯಾಂಕ್‌ ಖಾತೆಗಳನ್ನು ತೆರೆಯಲು ನೆರವಾಗುವುದರ ಜತೆಗೆ ಭಾರತದ ಅಭಿವೃದ್ಧಿ ಪಥವನ್ನು ಪರಿವರ್ತಿಸಿದೆ.  ಈ ಯೋಜನೆಯು ಅಸಂಖ್ಯಾತ ಭಾರತೀಯರ ಹಣಕಾಸಿನ ಲಭ್ಯತೆ, ಘಟನೆ ಮತ್ತು ಸಬಲೀಕರಣಕ್ಕೆ ನೆರವಾಗಿದೆ. ಇದು ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು.

ಈ ಯೋಜನೆಯ ಯಶಸ್ವಿಗಾಗಿ ಶ್ರಮಿಸಿದ ಎಲ್ಲರ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ. ಅವರ ಪ್ರಯತ್ನವು ಭಾರತದ ಜನರು ಉತ್ತಮ ಗುಣಮಟ್ಟದ ನಡೆಸಲು ನೆರವಾಗಿದೆ. ಈ ಕಾರ್ಯಕ್ರಮದಡಿಯಲ್ಲಿ ತೆರೆಯಲಾದ 43.04 ಕೋಟಿ ಬ್ಯಾಂಕ್‌ ಖಾತೆಗಳ ಪೈಕಿ 36.86 ಕೋಟಿ ಖಾತೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com