ಆತ್ಮರಕ್ಷಣೆಗಾಗಿ ಬಿಎಸ್ಎಫ್ ನಿಂದ ಗುಂಡಿನ ದಾಳಿ: ಇಬ್ಬರು ಬಾಂಗ್ಲಾದೇಶಿ 'ಕಳ್ಳಸಾಗಾಣಿಕೆದಾರರು' ಹತ

ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬಿಎಸ್ಎಫ್ ಯೋಧರು ಗುಸ್ತು ತಿರುಗುತ್ತಿದ್ದಾಗ ಬಾಂಗ್ಲಾದೇಶದ ಕಳ್ಳಸಾಗಣೆದಾರರು ಸುತ್ತುವರೆದಿದ್ದರಿಂದ ಆತ್ಮರಕ್ಷಣೆಗಾಗಿ ಯೋಧರು ಗುಂಡಿನ ದಾಳಿ ನಡೆಸಿದ್ದು ಅದರಲ್ಲಿ ಇಬ್ಬರು ಕಳ್ಳಸಾಗಣೆದಾರರು ಮೃತಪಟ್ಟಿರುವುದಾಗಿ ಭಾರತೀಯ ಸೇನೆ ಹೇಳಿದೆ.
ಬಿಎಸ್ಎಫ್
ಬಿಎಸ್ಎಫ್

ನವದೆಹಲಿ: ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬಿಎಸ್ಎಫ್ ಯೋಧರು ಗುಸ್ತು ತಿರುಗುತ್ತಿದ್ದಾಗ ಬಾಂಗ್ಲಾದೇಶದ ಕಳ್ಳಸಾಗಣೆದಾರರು ಸುತ್ತುವರೆದಿದ್ದರಿಂದ ಆತ್ಮರಕ್ಷಣೆಗಾಗಿ ಯೋಧರು ಗುಂಡಿನ ದಾಳಿ ನಡೆಸಿದ್ದು ಅದರಲ್ಲಿ ಇಬ್ಬರು ಕಳ್ಳಸಾಗಣೆದಾರರು ಮೃತಪಟ್ಟಿರುವುದಾಗಿ ಭಾರತೀಯ ಸೇನೆ ಹೇಳಿದೆ.

ಅಲ್ಲದೆ ಈ ಸಂಬಂಧ ಬಿಎಸ್‌ಎಫ್ ಬಾಂಗ್ಲಾದೇಶದ ಬಾರ್ಡರ್ ಗಾರ್ಡ್(ಬಿಜಿಬಿ)ಗೆ ತನ್ನ ಬಲವಾದ ಪ್ರತಿಭಟನೆ ಸಲ್ಲಿಸಿದೆ. ಆ ದೇಶದ ಕಳ್ಳಸಾಗಾಣಿಕೆದಾರರು ಗಸ್ತಿನಲ್ಲಿದ್ದ ಭಾರತೀಯ ಯೋಧರ ಮೇಲೆ ದಾಳಿ ನಡೆಸಿದ್ದಾರೆ. ಇನ್ನು ಆತ್ಮರಕ್ಷಣೆಗಾಗಿ ಗುಂಡು ಬಾರಿಸಬೇಕಾಗಿ ಬಂತು. ಇದರಿಂದ ಗಡಿಯಲ್ಲಿ ಇಬ್ಬರು ದುಷ್ಕರ್ಮಿಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಚಂಗ್ರಬಂಧ ಗಡಿ ಪೋಸ್ಟ್ ಬಳಿ ಭಾನುವಾರ ಮುಂಜಾನೆ 3.35ರ ಸುಮಾರಿಗೆ ಈ ಘಟನೆ ನಡೆದಿದೆ.

"ಗಡಿಯಲ್ಲಿ ಗಸ್ತು ತಿರುಗುತ್ತಿರುವಾಗ 18-20 ಬಾಂಗ್ಲಾದೇಶದ ಕಳ್ಳಸಾಗಣೆದಾರರು ಸೇನೆಯನ್ನು ಸುತ್ತುವರಿದರು. ಈ ವೇಳೆ ಈ ಪ್ರದೇಶವನ್ನು ತೊರೆಯುವಂತೆ ಸೇನೆ ಕೇಳಿಕೊಂಡಿತು. ಆದಾಗ್ಯೂ, ಇದಕ್ಕೆ ಬೆಲೆ ಕೊಡದ ಕಳ್ಳಸಾಗಣೆದಾರರು ಗಡಿ ಭದ್ರತಾ ಪಡೆ ಹಲ್ಲೆ ಮಾಡಿದ್ದಾರೆ. ಜೀವಕ್ಕೆ ಅಪಾಯ ಎದುರಾಗಿದ್ದು ಅಲ್ಲದೆ ಬೇರೆ ದಾರಿಯಿಲ್ಲದೆ ಬಿಎಸ್ಎಫ್ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆ ಎಂದು ಸೇನೆ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಯ ಒಟ್ಟು 4,096 ಕಿಲೋಮೀಟರ್‌ಗಳ 932 ಕಿಲೋಮೀಟರ್‌ಗಳಷ್ಟು ಭಾಗ ಬಿಎಸ್ಎಫ್ ಕಾವಲು ಕಾಯುತ್ತಿದೆ. ಇದರ ಮುಖ್ಯ ಕಛೇರಿಯು ಸಿಲಿಗುರಿಯ ಕಡಮತಲದಲ್ಲಿದೆ.

ಹೇಳಿಕೆಯ ಪ್ರಕಾರ, ಘಟನೆಯ ಸ್ಥಳವನ್ನು ಹುಡುಕಿದಾಗ ಭಾರತೀಯ ಭೂಪ್ರದೇಶದ 'ಸುಮಾರು 100 ಮೀಟರ್' ಒಳಗೆ ಇಬ್ಬರು ಬಾಂಗ್ಲಾದೇಶಿ ಕಳ್ಳಸಾಗಾಣಿಕೆದಾರರ ಶವಗಳು ಪತ್ತೆಯಾಗಿವೆ.

ಈ ಬಗ್ಗೆ ಬಿಜಿಬಿಗೆ ಮಾಹಿತಿ ನೀಡಲಾಗಿದ್ದು ಘಟನೆಗೆ ಸಂಬಂಧಿಸಿದಂತೆ ಬಲವಾದ ಪ್ರತಿಭಟನೆ ಸಲ್ಲಿಸಿದೆ ಎಂದು ಅದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com