300 ಪ್ಯಾಕೆಟ್‌ ನಿಷೇಧಿತ ಜಗಿಯುವ ತಂಬಾಕು ವಶಕ್ಕೆ ಪಡೆದ ಪೊಲೀಸರು

300 ಪ್ಯಾಕೆಟ್ ಗಳಷ್ಟು ನಿಷೇಧಿತ ಜಗಿಯುವ ತಂಬಾಕನ್ನು ಕೊಚ್ಚಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಂಬಾಕು
ತಂಬಾಕು

ಕೊಚ್ಚಿ: 300 ಪ್ಯಾಕೆಟ್ ಗಳಷ್ಟು ನಿಷೇಧಿತ ಜಗಿಯುವ ತಂಬಾಕನ್ನು ಕೊಚ್ಚಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಟ್ಟಂಚೇರಿಯ ಬಳಿ ಇರುವ ಪನಾಯಪಿಲ್ಲಿಯಲ್ಲಿನ ಕೂಲ್ ಬಾರ್ ನಿಂದ ಈ ನಿಷೇಧಿತ ತಂಬಾಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿಷೇಧಿತ ತಂಬಾಕನ್ನು ಹೊಂದಿದ್ದ ಬಾರ್ ನ ಮಾಲಿಕ ಥಾನ್ಸೀರ್ (23) ನ್ನು ಪೊಲೀಸರು ಬಂಧಿಸಿದ್ದಾರೆ. 

250 ಪ್ಯಾಕೆಟ್ ಗಳ ಗುಟ್ಕಾ ಹಾಗೂ 65 ಪ್ಯಾಕ್ ಗಳ ಹನ್ಸ್ ಜಗಿಯುವ ತಂಬಾಕನ್ನು ವಶಕ್ಕೆ ಪಡೆಯಲಾಗಿದ್ದು ಆರೋಪಿಯನ್ನು ಜಾಮೀನ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ. 

ಕೇರಳದಲ್ಲಿ 2012 ರಿಂದಲೂ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಗುಟ್ಕಾ ಹಾಗೂ ಜಗಿಯುವ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ. ಆದರೆ ತಂಬಾಕು ನಿಷೇಧದ ನಂತರ ಹೊರ ರಾಜ್ಯಗಳಿಂದ ತಂಬಾಕು ಉತ್ಪನ್ನಗಳು ರಾಜ್ಯಕ್ಕೆ ಅತಿ ಹೆಚ್ಚಿನ ದರದಲ್ಲಿ ಕಳ್ಳಸಾಗಣೆಯಾಗುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com