ಹೈ ರಿಸ್ಕ್ ರಾಷ್ಟ್ರಗಳಿಂದ ಬಂದ 16 ಸಾವಿರ ಪ್ರಯಾಣಿಕರ ಪೈಕಿ 18 ಜನಕ್ಕೆ ಕೋವಿಡ್ ಪಾಸಿಟಿವ್: ಮನ್ಸೂಖ್ ಮಾಂಡವೀಯಾ

ಕೋವಿಡ್-19 ರೂಪಾಂತರಿ  ಹೊಸ ತಳಿ ಓಮಿಕ್ರಾನ್ ಪತ್ತೆಯಾದ ಹೈ ರಿಸ್ಕ್ ರಾಷ್ಟ್ರಗಳಿಂದ ಇಲ್ಲಿಯವರೆಗೂ ದೇಶಕ್ಕೆ ಆಗಮಿಸಿದ್ದ 16 ಸಾವಿರ ಪ್ರಯಾಣಿಕರ ಆರ್ ಟಿಪಿಸಿಆರ್ ಟೆಸ್ಟ್ ಮಾಡಲಾಗಿದೆ. ಈ ಪೈಕಿ 18 ಪ್ರಯಾಣಿಕರಲ್ಲಿ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವೀಯಾ ಶುಕ್ರವಾರ ಸಂಸತ್ತಿಗೆ ತಿಳಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವೀಯಾ
ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವೀಯಾ

ನವದೆಹಲಿ: ಕೋವಿಡ್-19 ರೂಪಾಂತರಿ  ಹೊಸ ತಳಿ ಓಮಿಕ್ರಾನ್ ಪತ್ತೆಯಾದ ಹೈ ರಿಸ್ಕ್ ರಾಷ್ಟ್ರಗಳಿಂದ ಇಲ್ಲಿಯವರೆಗೂ ದೇಶಕ್ಕೆ ಆಗಮಿಸಿದ್ದ 16 ಸಾವಿರ ಪ್ರಯಾಣಿಕರ ಆರ್ ಟಿಪಿಸಿಆರ್ ಟೆಸ್ಟ್ ಮಾಡಲಾಗಿದೆ. ಈ ಪೈಕಿ 18 ಪ್ರಯಾಣಿಕರಲ್ಲಿ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವೀಯಾ ಶುಕ್ರವಾರ ಸಂಸತ್ತಿಗೆ ತಿಳಿಸಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಸಚಿವರು, ಓಮಿಕ್ರಾನ್ ಪತ್ತೆಗಾಗಿ ಹೈ ರಿಸ್ಕ್ ರಾಷ್ಟ್ರಗಳಿಂದ ಬಂದಂತಹ ಪ್ರಯಾಣಿಕರಿಗೆ ಜೀನೊಮ್ ಸೀಕ್ವೆನ್ಸಿಂಗ್ ನಡೆಯುತ್ತಿರುವುದಾಗಿ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಮುಂದಿನ ಯಾವುದೇ ಸವಾಲುಗಳನ್ನು ಎದುರಿಸಲು ಸಿದ್ಧವಾಗಿದೆ. ಮುಂಬರುವ ಕೋವಿಡ್-19 ಪ್ರಕರಣ ಸಮಸ್ಯೆ ಪರಿಹರಿಸಲು ಎಲ್ಲಾ ರಾಜ್ಯಗಳು ಸೂಕ್ತ ಔಷಧ ದಾಸ್ತಾನು ಹೊಂದುವಂತ ನೀತಿ ಅನುಸರಿಸಲಾಗುವುದು ಎಂದರು.

ವೈಜ್ಞಾನಿಕ ಸಲಹೆಗಳ ಆಧಾರದ ಮೇಲೆ ಮಕ್ಕಳಿಗೆ ಬೂಸ್ಟರ್ ಡೋಸ್ ಹಾಗೂ ಲಸಿಕೆ ನೀಡಿಕೆ ಕುರಿತು ನಿರ್ಧಾರ ತೆಗೆದುಕೊಳ್ಳವುದು ಎಂದು ಹೇಳಿದ ಸಚಿವರು, ವಿಜ್ಞಾನಿಗಳಲ್ಲಿ ನಂಬಿಕೆ ಇಡುವಂತೆ ಪ್ರತಿಪಕ್ಷಗಳಲ್ಲಿ ಅವರು ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com