ಅಸ್ಸಾಂ: ನಿನ್ನೆ ಬಿದ್ದ ಕೆಸರು ಗುಂಡಿಯಲ್ಲೇ ಮತ್ತೆ ಸಿಲುಕಿದ ಐದು ಆನೆಗಳು!!

ಆಸ್ಸಾಂನಲ್ಲಿ ಆನೆಗಳ ಸುದ್ದಿಯೊಂದು ಭಾರಿ ವೈರಲ್ ಆಗುತ್ತಿದ್ದು, ನಿನ್ನೆ ಬಿದ್ದಂತಹ ಕೆಸರು ಗುಂಡಿಯಲ್ಲೇ ಇಂದು ಮತ್ತೆ ಐದು ಆನೆಗಳು ಸಿಲುಕಿಕೊಳ್ಳುವ ಮೂಲಕ ಆನೆಗಳ ಸುದ್ದಿ ವ್ಯಾಪಕ ವೈರಲ್ ಆಗುತ್ತಿದೆ.
ಕೆಸರು ಗುಂಡಿಯಲ್ಲಿ ಆನೆಗಳು
ಕೆಸರು ಗುಂಡಿಯಲ್ಲಿ ಆನೆಗಳು

ಗೋವಾಲ್ಪರ: ಆಸ್ಸಾಂನಲ್ಲಿ ಆನೆಗಳ ಸುದ್ದಿಯೊಂದು ಭಾರಿ ವೈರಲ್ ಆಗುತ್ತಿದ್ದು, ನಿನ್ನೆ ಬಿದ್ದಂತಹ ಕೆಸರು ಗುಂಡಿಯಲ್ಲೇ ಇಂದು ಮತ್ತೆ ಐದು ಆನೆಗಳು ಸಿಲುಕಿಕೊಳ್ಳುವ ಮೂಲಕ ಆನೆಗಳ ಸುದ್ದಿ ವ್ಯಾಪಕ ವೈರಲ್ ಆಗುತ್ತಿದೆ.

ಈ ಘಟನೆ ನಡೆದಿರುವುದು ಅಸ್ಸಾಂನ ಗೋವಾಲ್ಪರದಲ್ಲಿ. ನಿನ್ನೆಯಷ್ಟೇ ಇಲ್ಲಿನ ಬೃಹತ್ ಕೆಸರು ಗುಂಡಿಯಲ್ಲಿ ಆರು ಆನೆಗಳು ಸಿಲುಕಿದ್ದವು. ಈ ವಿಚಾರ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸಿ ಆನೆಗಳನ್ನು ರಕ್ಷಿಸಿ ಕಾಡಿಗೆ ಅಟ್ಟಿದ್ದರು. 

ಅಚ್ಚರಿ ಎಂದರೆ ಇಂದು ಮತ್ತೆ ಇದೇ ಕೆಸರು ಗುಂಡಿಯಲ್ಲಿ ಐದು ಆನೆಗಳು ಬಂದು ಸಿಲುಕಿವೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಆಹಾರ ಅರಸಿ ಆನೆಗಳು ಬರುತ್ತವೆ: ಅರಣ್ಯ ಇಲಾಖೆ
ಇನ್ನು ಈ ಘಟನೆ ಕುರಿತು ಮಾಹಿತಿ ನೀಡಿರುವ ಅರಣ್ಯ ಇಲಾಖೆ ಅಧಿಕಾರಿಗಳು, 'ನಿನ್ನೆ ಇದೇ ಜಿಲ್ಲೆಯಲ್ಲಿರುವ ಕೆಸರು ಗುಂಡಿಯೊಂದರಲ್ಲಿ ಗುರುವಾರ ರಾತ್ರಿ ಸಿಲುಕಿದ್ದ ಆರು ಆನೆಗಳನ್ನು ರಕ್ಷಿಸಲಾಗಿತ್ತು. ಇದೀಗ ಅದೇ ಗುಂಡಿಗೆ ಮತ್ತೆ ಐದು ಆನೆಗಳು ಸಿಲುಕಿವೆ. ಆನೆಗಳು ಗುಂಡಿಯಲ್ಲಿ ಸಿಲುಕಿದ್ದ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಅದರಂತೆ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡ, ಜೆಸಿಬಿ ಸಹಾಯದಿಂದ ಕೆಸರು ಗುಂಡಿಯ ಒಂದು ಭಾಗವನ್ನು ಬಗೆದು ಆನೆಗಳು ಮೇಲೇಳಲು ದಾರಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಆಹಾರ ಮತ್ತು ನೀರಿಗಾಗಿ ಆನೆಗಳು ಈ ಪ್ರದೇಶಕ್ಕೆ ಆಗಾಗ್ಗೆ ಬರುತ್ತಿರುತ್ತವೆ. ಸಂಕಷ್ಟದಲ್ಲಿದ್ದ ಎಲ್ಲ ಆನೆಗಳನ್ನು ರಕ್ಷಿಸಿ, ಸಮೀಪದ ಅರಣ್ಯಕ್ಕೆ ಅಟ್ಟಲಾಗಿದೆ. ಇಂತಹ ಪ್ರಕರಣಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲಾಗುವುದು. ಆನೆಗಳು ನೀರು ಕುಡಿದು ಹಿಂತಿರುಗಲು ಅನುಕೂಲವಾಗುವಂತೆ ಗುಂಡಿಯನ್ನು ಅಗೆದು ಜಾಗ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com