ದೆಹಲಿ ಹುಡುಗಿಗೆ 'SEX' ಅಕ್ಷರ ಒಳಗೊಂಡ ನೋಂದಣಿ ಸಂಖ್ಯೆ ನೀಡಿದ ಸಾರಿಗೆ ಇಲಾಖೆಗೆ ಡಿಸಿಡಬ್ಲ್ಯೂ ನೋಟಿಸ್

SEX' ಎಂಬ ಅಕ್ಷರಗಳನ್ನು ಒಳಗೊಂಡಿರುವ ಬಾಲಕಿಯರ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆಯನ್ನು ಬದಲಾಯಿಸುವಂತೆ ಕೋರಿ ದೆಹಲಿ ಮಹಿಳಾ ಆಯೋಗ(ಡಿಸಿಡಬ್ಲ್ಯು) ಸಾರಿಗೆ ಇಲಾಖೆಗೆ ಶನಿವಾರ ನೋಟಿಸ್ ಜಾರಿ ಮಾಡಿದೆ.
ಸ್ವಾತಿ ಮಲಿವಾಲ್
ಸ್ವಾತಿ ಮಲಿವಾಲ್

ನವೆಂಬರ್: 'SEX' ಎಂಬ ಅಕ್ಷರಗಳನ್ನು ಒಳಗೊಂಡಿರುವ ಬಾಲಕಿಯರ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆಯನ್ನು ಬದಲಾಯಿಸುವಂತೆ ಕೋರಿ ದೆಹಲಿ ಮಹಿಳಾ ಆಯೋಗ(ಡಿಸಿಡಬ್ಲ್ಯು) ಸಾರಿಗೆ ಇಲಾಖೆಗೆ ಶನಿವಾರ ನೋಟಿಸ್ ಜಾರಿ ಮಾಡಿದೆ.

ನೋಟಿಸ್ ಗೆ ಪ್ರತಿಕ್ರಿಯೆ ಸಲ್ಲಿಸುವಾಗ ಈ ಹೊಸ ಸರಣಿಯಡಿ ನೋಂದಣಿಯಾಗಿರುವ ಒಟ್ಟು ವಾಹನಗಳ ಸಂಖ್ಯೆಯನ್ನು ನಮೂದಿಸುವಂತೆ ಡಿಸಿಡಬ್ಲ್ಯು ಸಾರಿಗೆ ಇಲಾಖೆಗೆ ಸೂಚಿಸಿದೆ.

ಈ ವಿಚಾರ ಬೆಳಕಿಗೆ ಬಂದ ನಂತರ ಇಡೀ ಸರಣಿಯನ್ನು ನಿಲ್ಲಿಸಲಾಗಿದೆ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

"ಜನರು ಕ್ಷುಲ್ಲಕರಾಗಿ ಕಿರುಕುಳ ನೀಡುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ, ಬಾಲಕಿಗೆ ಇಷ್ಟೊಂದು ಕಿರುಕುಳ ನೀಡುವುದು ಸರಿಯಲ್ಲ. ಇನ್ನು ಮುಂದೆ ಬಾಲಕಿಗೆ ತೊಂದರೆಯಾಗದಂತೆ ಈ ಸಮಸ್ಯೆಯನ್ನು ಬಗೆಹರಿಸಲು ಸಾರಿಗೆ ಇಲಾಖೆಗೆ ನಾಲ್ಕು ದಿನಗಳ ಕಾಲಾವಕಾಶ ನೀಡಿದ್ದೇವೆ" ಎಂದು ಡಿಸಿಡಬ್ಲ್ಯು ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

" 'SEX'" ಪದವನ್ನು ಹೊಂದಿರುವ ಈ ಹಂಚಿಕೆ ಸರಣಿಯಲ್ಲಿ ನೋಂದಾಯಿಸಲಾದ ಒಟ್ಟು ವಾಹನಗಳ ಸಂಖ್ಯೆಯನ್ನು ಸಲ್ಲಿಸಲು ನಾನು ಸಾರಿಗೆ ಇಲಾಖೆಯನ್ನು ಸೂಚಿಸಿದ್ದೇನೆ" ಎಂದು ಅವರು ಹೇಳಿದ್ದಾರೆ.

ಇತ್ತೀಚಿಗಷ್ಟೇ ಹೊಸ ಸ್ಕೂಟಿ ಖರೀದಿಸಿದ್ದ ದೆಹಲಿ ವಿದ್ಯಾರ್ಥಿನಿಯೊಬ್ಬರಿಗೆ 'SEX' ಅಕ್ಷರಗಳನ್ನು ಒಳಗೊಂಡ ನೋಂದಣಿ ಸಂಖ್ಯೆ ನೀಡಲಾಗಿತ್ತು. ಈ ನೋಂದಣಿ ಸಂಖ್ಯೆಯಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದ ಯುವತಿ ಸ್ಕೂಟಿ ಓಡಿಸುವುದನ್ನೇ ಬಿಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com