ಸಚಿವರು ಮತ್ತು ಸಂಸದರ ಮೂಲಕ ವರ್ಗಾವಣೆ ಶಿಫಾರಸು ತಂದರೆ ಕ್ರಮ: ಸಹಾಯಕ ಸೆಕ್ಷನ್ ಅಧಿಕಾರಿಗಳಿಗೆ ಕೇಂದ್ರ ಎಚ್ಚರಿಕೆ
ಸಿಬ್ಬಂದಿ ಮತ್ತು ತರಬೇತಿ (DoPT) ವಿಭಾಗದ ಮುಖ್ಯಸ್ಥರು, ವೈಯಕ್ತಿಕ ಮತ್ತು ಮೆಡಿಕಲ್ ಗ್ರೌಂಡ್ಸ್ ನಲ್ಲಿ ವರ್ಗಾವಣೆ ಕೋರಿದ ಮನವಿ ಪತ್ರಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಂದಿರುವುದಾಗಿ ತಿಳಿಸಿದ್ದರು.
Published: 05th December 2021 11:31 PM | Last Updated: 05th December 2021 11:36 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಸೆಂಟ್ರಲ್ ಸೆಕ್ರೆಟರಿಯೇಟ್ ಸರ್ವಿಸ್(CSS) ಅಡಿ ಸಹಾಯಕ ಸೆಕ್ಷನ್ ಅಧಿಕಾರಿಗಳಾಗಿ (ASO) ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಸಚಿವರು ಮತ್ತು ಸಂಸದರ ಮೂಲಕ ವರ್ಗಾವಣೆ ಶಿಫಾರಸು ತಂದ ಸಹಾಯಕ ಸೆಕ್ಷನ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಕೇಂದ್ರ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ರೈತ ನಾಯಕ ರಾಕೇಶ್ ಟಿಕಾಯತ್ ರನ್ನು ಉಗ್ರಗಾಮಿ ಎಂದು ಕರೆದ ಬಿಜೆಪಿ ನಾಯಕ
ಇದಕ್ಕೂ ಮುನ್ನ ಸಿಬ್ಬಂದಿ ಮತ್ತು ತರಬೇತಿ (DoPT) ವಿಭಾಗದ ಮುಖ್ಯಸ್ಥರು, ವೈಯಕ್ತಿಕ ಮತ್ತು ಮೆಡಿಕಲ್ ಗ್ರೌಂಡ್ಸ್ ನಲ್ಲಿ ವರ್ಗಾವಣೆ ಕೋರಿದ ಮನವಿ ಪತ್ರಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಂದಿರುವುದಾಗಿ ತಿಳಿಸಿದ್ದರು.
ಇದನ್ನೂ ಓದಿ: ಗೋವಾದಲ್ಲಿ ಆಪ್ ಅಧಿಕಾರಕ್ಕೆ ಬಂದರೆ ಭರ್ಜರಿ ಆಫರ್ ಘೋಷಿಸಿದ ಕೇಜ್ರಿವಾಲ್!
ಹೆಚ್ಚಿನ ವೇಳೆ ಅಧಿಕಾರಿಗಳ ವರ್ಗಾವಣೆ ಮನವಿಗಳನ್ನು ಸಚಿವರೇ ಶಿಫಾರಸು ಮಾಡುತ್ತಿರುವುದಾಗಿ ತಿಳಿದುಬಂದಿತ್ತು. ಆ ಹಿನ್ನೆಲೆಯಲ್ಲಿ ಕೇಂದ್ರ ಈ ಎಚ್ಚರಿಕೆ ನೀಡಿದೆ. ಯಾವುದೇ ಸರ್ಕಾರಿ ನೌಕರ ರಾಜಕೀಯ ಅಥವಾ ಬಾಹ್ಯ ಒತ್ತಡವನ್ನು ಹೇರುವ ಹಾಗಿಲ್ಲ ಎಂದು ಕಾನೂನಿನಲ್ಲಿ ಹೇಳಲಾಗಿದೆ. ಅದನ್ನು ಉದಾಹರಿಸಲಾಗಿದೆ.
ಇದನ್ನೂ ಓದಿ: 'ಹೆಣ್ಮಕ್ಳೇ ಸ್ಟ್ರಾಂಗ್ ಗುರು': ರಾಜಕೀಯ ಪಕ್ಷಗಳು ಮಹಿಳಾ ಮತದಾರರನ್ನು ಓಲೈಸುತ್ತಿರುವುದೇಕೆ?