ಉತ್ತರ ಪ್ರದೇಶ: ಮಾಜಿ ಬ್ಲಾಕ್ ಮುಖ್ಯಸ್ಥನ ಬೆಂಗಾವಲು ವಾಹನದ ಮೇಲೆ ದಾಳಿ, ಐವರಿಗೆ ಗಾಯ
ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಮಾಜಿ ಬ್ಲಾಕ್ ಮುಖ್ಯಸ್ಥ ಹಾಜಿ ಯೂನಸ್ ಅವರ ಬೆಂಗಾವಲು ಪಡೆಯ ಮೇಲೆ ಗುಂಡಿನ ದಾಳಿ ನಡೆದಿದ್ದು, ಐವರು ಗಾಯಗೊಂಡಿದ್ದಾರೆ. ಪೊಲೀಸರು ಈ ಮಾಹಿತಿ ನೀಡಿದ್ದಾರೆ.
Published: 05th December 2021 10:31 PM | Last Updated: 05th December 2021 10:31 PM | A+A A-

ಸಂಗ್ರಹ ಚಿತ್ರ
ಬುಲಂದ್‌ಶಹರ್: ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಮಾಜಿ ಬ್ಲಾಕ್ ಮುಖ್ಯಸ್ಥ ಹಾಜಿ ಯೂನಸ್ ಅವರ ಬೆಂಗಾವಲು ಪಡೆಯ ಮೇಲೆ ಗುಂಡಿನ ದಾಳಿ ನಡೆದಿದ್ದು, ಐವರು ಗಾಯಗೊಂಡಿದ್ದಾರೆ. ಪೊಲೀಸರು ಈ ಮಾಹಿತಿ ನೀಡಿದ್ದಾರೆ.
ಸದ್ಯ ಜೈಲಿನಲ್ಲಿರುವ ಯೂನಸ್ ಎಂಬುವರು ಸೋದರಳಿಯ ಅನಸ್ ದಾಳಿಯ ಹಿಂದೆ ಇರಬಹುದೆಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಟ್ವಾಲಿ ಗ್ರಾಮಾಂತರ ಪ್ರದೇಶದ ಭೈಪುರ್ ಗ್ರಾಮದಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಮಿರ್ಜಾಪುರ ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಮಾಜಿ ಬ್ಲಾಕ್ ಮುಖ್ಯಸ್ಥರ ಬೆಂಗಾವಲು ಪಡೆ ಮೇಲೆ ದಾಳಿ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಸಿಂಗ್ ಹೇಳಿದ್ದಾರೆ.
ಕಾರಿನಲ್ಲಿ ಬಂದ ದಾಳಿಕೋರರು ರಾಜವಾಹ ಸೇತುವೆ ಬಳಿ ಬೆಂಗಾವಲು ಪಡೆಯ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಹೇಳಿದರು.
ಯೂನಸ್ ಎರಡು ಬಾರಿ ಬಿಎಸ್‌ಪಿ ಶಾಸಕ ಹಾಜಿ ಅಲೀಂ ಅವರ ಸಹೋದರ ಎಂಬುದು ಗಮನಾರ್ಹ. 2018ರಲ್ಲಿ ಅಲೀಂ ಅವರನ್ನು ಅವರ ಮನೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.