ಪುದುಚೇರಿಯಲ್ಲಿ ಕೋವಿಡ್ ಕಡ್ಡಾಯ, ತಪ್ಪಿದರೆ ಕಾನೂನು ಕ್ರಮ: ಸರ್ಕಾರದ ಎಚ್ಚರಿಕೆ
ದೇಶದಲ್ಲಿ ಕೊರೊನಾ ವೈರಸ್‌ನ ರೂಪಾಂತರ ತಳಿ ಓಮಿಕ್ರಾನ್ ಹರಡುವಿಕೆ ಭೀತಿ ಹೆಚ್ಚಾಗಿರುವ ಬೆನ್ನಲ್ಲೇ ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಕೋವಿಡ್ ಲಸಿಕೆ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
Published: 05th December 2021 01:13 PM | Last Updated: 05th December 2021 01:13 PM | A+A A-

ಮೈಸೂರಿನಲ್ಲಿ ಲಸಿಕೆ ಅಭಿಯಾನ
ಪುದುಚೇರಿ: ದೇಶದಲ್ಲಿ ಕೊರೊನಾ ವೈರಸ್‌ನ ರೂಪಾಂತರ ತಳಿ ಓಮಿಕ್ರಾನ್ ಹರಡುವಿಕೆ ಭೀತಿ ಹೆಚ್ಚಾಗಿರುವ ಬೆನ್ನಲ್ಲೇ ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಕೋವಿಡ್ ಲಸಿಕೆ ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಮಾಲ್, ಚಿತ್ರಮಂದಿರ ಪ್ರವೇಶಕ್ಕೆ 2 ಡೋಸ್ ಲಸಿಕೆ ಕಡ್ಡಾಯಗೊಳಿಸಿದ ಬಿಬಿಎಂಪಿ!
‘ಪುದುಚೇರಿ ಸಾರ್ವಜನಿಕ ಆರೋಗ್ಯ ಕಾಯ್ದೆ 1973’ರ ಅಡಿಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಕೋವಿಡ್ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ದಂಡ ಹೇರಲಾಗುತ್ತದೆ ಎಂದು ಪುದುಚೇರಿ ಆರೋಗ್ಯ ಇಲಾಖೆ ಆದೇಶಿಸಿದೆ.
The government of Puducherry makes COVID19 vaccination compulsory in the Union Territory with immediate effect. pic.twitter.com/i87ZhAZFbN
— ANI (@ANI) December 5, 2021
ಸರ್ಕಾರವು ಪುದುಚೇರಿ ಸಾರ್ವಜನಿಕ ಆರೋಗ್ಯ ಕಾಯಿದೆ 1973 ರ ನಿಬಂಧನೆಗಳನ್ನು ಕಡ್ಡಾಯವಾಗಿ ಲಸಿಕೆಯನ್ನು ಜಾರಿಗೆ ತಂದಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕ ಜಿ ಶ್ರೀರಾಮುಲು ಅವರು ಶನಿವಾರ ರಾತ್ರಿ ಆದೇಶದಲ್ಲಿ ಈ ವಿಷಯ ತಿಳಿಸಿದ್ದು, ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ.
ಇದನ್ನೂ ಓದಿ: 'ಓಮಿಕ್ರಾನ್' ಕೋವಿಡ್-19 ರೂಪಾಂತರಗಳ 'ಉಸೇನ್ ಬೋಲ್ಟ್' ಆಗಿದೆ: ಪ್ರಖ್ಯಾತ ವೈರಾಲಜಿಸ್ಟ್ ಡಾ. ರವಿ
'"ಲಸಿಕೆಯನ್ನು ಬಿಟ್ಟುಬಿಡುವವರು ಕಾಯಿದೆಯ ನಿಬಂಧನೆಗಳ ಪ್ರಕಾರ ದಂಡದ ಕ್ರಮವನ್ನು ಎದುರಿಸಬೇಕಾಗುತ್ತದೆ. ರಾಜ್ಯದಲ್ಲಿ ವೈರಸ್ ಹರಡಲು ಯಾವುದೇ ಅವಕಾಶವಿರಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ, ಕೆಲವು ಆಕ್ರಮಣಕಾರಿ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: 'ಮೊನೊಕ್ಲೋನಲ್ ಆ್ಯಂಟಿಬಾಡಿ ಥೆರಪಿ' ತೆಗೆದುಕೊಂಡಿದ್ದ 'ಓಮಿಕ್ರಾನ್' ಸೋಂಕಿತ ವೈದ್ಯ ಈಗ ಫುಲ್ 'ಫಿಟ್ ಅಂಡ್ ಫೈನ್'!
ದೇಶದಾದ್ಯಂತ ಈವರೆಗೆ 4 ಓಮೈಕ್ರಾನ್ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ 2 ಬೆಂಗಳೂರಿನಲ್ಲಿ, 1 ಮುಂಬೈಯಲ್ಲಿ ಹಾಗೂ ಮತ್ತೊಂದು ಗುಜರಾತ್‌ನಲ್ಲಿ ದೃಢಪಟ್ಟಿವೆ.