ಮುಂದಿನ ವರ್ಷ ಫೆಬ್ರವರಿಯಲ್ಲಿ ಓಮಿಕ್ರಾನ್‌ನೊಂದಿಗೆ, ಕೋವಿಡ್ ಮೂರನೇ ಅಲೆ, ಆದರೆ 2ನೇ ಅಲೆಯಷ್ಟು ಭೀಕರವಾಗಿರಲ್ಲ

ಕೋವಿಡ್-19 ಹೊಸ ರೂಪಾಂತರವಾದ ಓಮಿಕ್ರಾನ್‌ನೊಂದಿಗೆ, ಕೊರೋನಾ ವೈರಸ್‌ನ ಮೂರನೇ ಅಲೆ ಫೆಬ್ರವರಿ ವೇಳೆಗೆ ಗರಿಷ್ಠ ಮಟ್ಟವನ್ನು ತಲುಪಬಹುದು ಮತ್ತು ದೇಶದಲ್ಲಿ ದಿನಕ್ಕೆ 1 ರಿಂದ 1.5 ಲಕ್ಷ ಪಾಸಿಟಿವ್ ಪ್ರಕರಣಗಳು ವರದಿಯಾಗುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಕೋವಿಡ್-19 ಹೊಸ ರೂಪಾಂತರವಾದ ಓಮಿಕ್ರಾನ್‌ನೊಂದಿಗೆ, ಕೊರೋನಾ ವೈರಸ್‌ನ ಮೂರನೇ ಅಲೆ ಫೆಬ್ರವರಿ ವೇಳೆಗೆ ಗರಿಷ್ಠ ಮಟ್ಟವನ್ನು ತಲುಪಬಹುದು ಮತ್ತು ದೇಶದಲ್ಲಿ ದಿನಕ್ಕೆ 1 ರಿಂದ 1.5 ಲಕ್ಷ ಪಾಸಿಟಿವ್ ಪ್ರಕರಣಗಳು ವರದಿಯಾಗುವ ಸಾಧ್ಯತೆಯಿದೆ. ಆದರೆ ಇದು ಎರಡನೆ ಅಲೆಯಷ್ಟು ಭೀಕರವಾಗಿರುವುದಾಗಿ. ಸೌಮ್ಯವಾಗಿರುತ್ತದೆ ಎಂದು ಸೋಮವಾರ ತಜ್ಞರು ತಿಳಿಸಿದ್ದಾರೆ.

ಕೋವಿಡ್-19 ಮೂರನೇ ಅಲೆಗೆ ಹೊಸ ರೂಪಾಂತರಿ ಓಮಿಕ್ರಾನ್ ಕಾರಣವಾಗಬಹುದು ಮುನ್ಸೂಚನೆ ನೀಡಲಾಗಿದೆ ಎಂದು ಕೋವಿಡ್-19ಗೆ ಸಂಬಂಧಿಸಿದ ಗಣಿತದ ಪ್ರಕ್ಷೇಪಣದಲ್ಲಿ ತೊಡಗಿರುವ ಐಐಟಿ ವಿಜ್ಞಾನಿ ಮನೀಂದ್ರ ಅಗರ್ವಾಲ್ ಅವರು ಹೇಳಿದ್ದಾರೆ.

"ನಮ್ಮ ಪ್ರಸ್ತುತ ಮುನ್ಸೂಚನೆಯೆಂದರೆ, ಹೊಸ ರೂಪಾಂತರದೊಂದಿಗೆ ಫೆಬ್ರವರಿ ವೇಳೆಗೆ ದೇಶದಲ್ಲಿ ಕೋವಿಡ್ ಮೂರನೇ ಅಲೆಯನ್ನು ನೋಡಬಹುದು. ಆದರೆ ಇದು ಎರಡನೇ ಅಲೆಗಿಂತ ಸೌಮ್ಯವಾಗಿರುತ್ತದೆ. ಡೆಲ್ಟಾ ತೀವ್ರತೆಯು ಓಮಿಕ್ರಾನ್‌ನ  ರೂಪಾಂತರಿಯಲ್ಲಿ ಕಂಡುಬರುತ್ತಿಲ್ಲ ಎಂಬುದನ್ನು ಎಂದು ನಾವು ಗಮನಿಸಿದ್ದೇವೆ" ಎಂದು ಅಗರ್ವಾಲ್ ತಿಳಿಸಿದ್ದಾರೆ.

ಆದಾಗ್ಯೂ, ದಕ್ಷಿಣ ಆಫ್ರಿಕಾದಲ್ಲಿ ಈ ರೂಪಾಂತರದ ಅನೇಕ ಪ್ರಕರಣಗಳು ದಾಖಲಾಗಿರುವುದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸದ್ಯಕ್ಕೆ ದಕ್ಷಿಣ ಆಫ್ರಿಕಾದಲ್ಲಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿಲ್ಲ. ವೈರಸ್ ಮತ್ತು ಆಸ್ಪತ್ರೆಗೆ ದಾಖಲಾದವರ ಹೊಸ ಅಂಕಿ-ಅಂಶ ಅದರ ಗಂಭೀರತೆಯನ್ನು ತಿಳಿಯಲು ಸಹಾಯ ಮಾಡುತ್ತದೆ ಎಂದು ಅಗರ್ವಾಲ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com