ಭಯ ಬೇಡ, 3 ನೇ ಅಲೆ ಇನ್ನೂ ಬಂದಿಲ್ಲ: 9 ರಾಜ್ಯಗಳಲ್ಲಿ ಕೋವಿಡ್-19 ಸಂಖ್ಯೆ ಹೆಚ್ಚಳದ ಬಗ್ಗೆ ತಜ್ಞರ ಅಭಯ
ಕೋವಿಡ್-19 ಸೋಂಕು ಸಂಖ್ಯೆ 9 ರಾಜ್ಯಗಳ 50 ಜಿಲ್ಲೆಗಳಲ್ಲಿ ಏರುಗತಿಯಲ್ಲಿದ್ದು ಓಮಿಕ್ರಾನ್ ರೂಪಾಂತರಿಯೂ ಪತ್ತೆಯಾಗುತ್ತಿರುವುದರಿಂದ 3 ನೇ ಅಲೆಯ ಆತಂಕ ಮೂಡಿದೆ. ಆದರೆ ಭಯಪಡುವ ಅಗತ್ಯವಿಲ್ಲ ಎಂದು ತಜ್ಞರ ಹೇಳಿದ್ದಾರೆ.
Published: 07th December 2021 12:48 PM | Last Updated: 07th December 2021 01:35 PM | A+A A-

ಕೋವಿಡ್-19 ಸಾಂದರ್ಭಿಕ ಚಿತ್ರ
ನವದೆಹಲಿ: ಕೋವಿಡ್-19 ಸೋಂಕು ಸಂಖ್ಯೆ 9 ರಾಜ್ಯಗಳ 50 ಜಿಲ್ಲೆಗಳಲ್ಲಿ ಏರುಗತಿಯಲ್ಲಿದ್ದು ಓಮಿಕ್ರಾನ್ ರೂಪಾಂತರಿಯೂ ಪತ್ತೆಯಾಗುತ್ತಿರುವುದರಿಂದ 3 ನೇ ಅಲೆಯ ಆತಂಕ ಮೂಡಿದೆ. ಆದರೆ ಭಯಪಡುವ ಅಗತ್ಯವಿಲ್ಲ ಎಂದು ತಜ್ಞರ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ನ ಎರಡು ಹೊಸ ಪ್ರಕರಣಗಳು ವರದಿಯಾಗಿದ್ದು ಈ ಮೂಲಕ ದೇಶಾದ್ಯಂತ 23 ಕ್ಕೆ ಹೊಸ ರೂಪಾಂತರಿ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.
10 ದಿನಗಳಲ್ಲಿ ರಾಜಸ್ಥಾನ, ತಮಿಳುನಾಡು, ಕೇರಳ, ದೆಹಲಿ, ಕರ್ನಾಟಕ, ಜಮ್ಮು-ಕಾಶ್ಮೀರ, ಒಡಿಶಾ, ಮಿಜೊರಾಮ್ ಗಳಲ್ಲಿ ಕೋವಿಡ್-19 ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಪತ್ರ ಬರೆದಿದ್ದು, ಸೋಂಕು ಪ್ರಸರಣ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದೆ.
ಸಾರ್ವಜನಿಕ ಆರೋಗ್ಯ ತಜ್ಞರ ಪ್ರಕಾರ ಸಣ್ಣ ಪ್ರಮಾಣದ ರೋಗಲಕ್ಷಣಗಳು ಹಾಗೂ ರೋಗಲಕ್ಷಣ ರಹಿತರನ್ನು ಹೆಚ್ಚು ಪರೀಕ್ಷೆಗೊಳಪಡಿಸುತ್ತಿರುವುದರಿಂದ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.