ಎಂಜಿನ್ ದೋಷದಿಂದ ಮಾಡಿದ ಸ್ಪೈಸ್ ಜೆಟ್ ವಿಮಾನ ತುರ್ತು ಭೂಸ್ಪರ್ಶ: ತನಿಖೆಗೆ ಆದೇಶಿಸಿದ ಡಿಜಿಸಿಎ

ಎರಡೂವರೆ ವರ್ಷಗಳ ಕಾಲ ಸ್ಥಗಿತಗೊಂಡಿದ್ದ ವಿಮಾನಯಾನ ಕ್ಷೇತ್ರ ಸಹಜ ಸ್ಥಿತಿಗೆ ಮರಳುತ್ತಿರುವ ಸಮಯದಲ್ಲೇ ಈ ಪ್ರಕರಣ ನಡೆದಿರುವುದು ಆತಂಕಕ್ಕೆ ಕಾರಣವಾಗಿತ್ತು.  
ವಿಮ್ಯಾಕ್ಸ್ ಸ್ಪೈಸ್ ಜೆಟ್ ವಿಮಾನ
ವಿಮ್ಯಾಕ್ಸ್ ಸ್ಪೈಸ್ ಜೆಟ್ ವಿಮಾನ

ನವದೆಹಲಿ: ನಾಗರಿಕ ವಿಮಾನಯಾನ ನಿಯಂತ್ರಕ ನಿರ್ದೇಶನಾಲಯ (ಡಿಜಿಸಿಎ) ತುರ್ತು ಭೂಸ್ಪರ್ಶ ಮಾಡಿದ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನ ಪ್ರಕರಣದ ತನಿಖೆಗೆ ಆದೇಶ ನೀಡಿದೆ. 

ಗುರುವಾರ ಸ್ಪೈಸ್ ಜೆಟ್ ನ ವಿಮಾನ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಬೋಯಿಂಗ್ ಸಂಸ್ಥೆಯ ವಿಮ್ಯಾಕ್ಸ್ ಎನ್ನುವ ಸರಣಿಗೆ ಸೇರಿದ ಈ ವಿಮಾನದ ಎಂಜಿನ್ ನಲ್ಲಿ ದೋಷ ಕಾಣಿಸಿಕೊಂಡಿತ್ತು. 

ಕೊರೊನಾ ಹಿನ್ನೆಲೆಯಲ್ಲಿ ಎರಡೂವರೆ ವರ್ಷಗಳ ಕಾಲ ಸ್ಥಗಿತಗೊಂಡಿದ್ದ ವಿಮಾನಯಾನ ಕ್ಷೇತ್ರ ಸಹಜ ಸ್ಥಿತಿಗೆ ಮರಳುತ್ತಿರುವ ಸಮಯದಲ್ಲೇ ಈ ಪ್ರಕರಣ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.  

ವಿವಾದಕ್ಕೆ ಕಾರಣವಾಗಿರುವ ವಿಮ್ಯಾಕ್ಸ್ ಸರಣಿಯ ವಿಮಾನ ಶೇ.20 ರಷ್ಟು ಇಂಧನ ಉಳಿಸುತ್ತದೆ ಎಂದು ಸ್ಪೈಸ್ ಜೆಟ್ ಈ ಹಿಂದೆ ಹೇಳಿಕೊಂಡಿತ್ತು. ಈ ವಿಮಾನ ಸರಣಿಯಿಂದಾಗಿ ದೇಶೀಯ ವಿಮಾನಯಾನ ಕ್ಷೇತ್ರದಲ್ಲಿ ಕ್ರಾಂತಿ ಉಂಟಾಗುವುದಾಗಿ ಸಂಸ್ಥೆ ಅಭಿಪ್ರಾಯಪಟ್ಟಿತ್ತು. 

ಇದೀಗ ಪ್ರಕರಣದ ತನಿಖೆಗೆ ಆದೇಶ ನೀಡಿರುವ ಡಿಜಿಸಿಎ ವಿಮಾನ ನಿರ್ಮಾತೃ ಸಂಸ್ಥೆ ಬೋಯಿಂಗ್ ಮತ್ತು ಎಂಜಿನ್ ತಯಾರಕ ಸಂಸ್ಥೆಯನ್ನೂ ವಿಚಾರಣೆಯಲ್ಲಿ ಪಾಲ್ಗೊಳ್ಳುವಂತೆ ನಿರ್ದೇಶನ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com