ನನ್ನ ಬಾಬ್ರಿ ಮಸೀದಿ ಹುತಾತ್ಮವಾಗಿದೆ, ಈ ಬಗ್ಗೆ SP, BSP, Congress ಒಂದೂ ಮಾತನಾಡಲಿಲ್ಲ ಏಕೆ?: ವಿಪಕ್ಷಗಳ ವಿರುದ್ಧ ಒವೈಸಿ ಕಿಡಿ

ನನ್ನ ಬಾಬ್ರಿ ಮಸೀದಿ ಹುತಾತ್ಮವಾಗಿದೆ.. ಆದರೆ ಈ ಬಗ್ಗೆ ಜ್ಯಾತ್ಯಾತೀತ ಪಕ್ಷಗಳು ಎಂದು ಹೇಳಿಕೊಳ್ಳುವ ಸಮಾಜವಾದಿ (SP), ಬಹುಜನ ಸಮಾಜವಾದಿ (BSP) ಮತ್ತು ಕಾಂಗ್ರೆಸ್ (Congress) ಪಕ್ಷಗಳೂ ಒಂದೂ ಮಾತನಾಡಲಿಲ್ಲ ಏಕೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
ಅಸಾದುದ್ದೀನ್ ಒವೈಸಿ
ಅಸಾದುದ್ದೀನ್ ಒವೈಸಿ

ಕಾನ್ಪುರ: ನನ್ನ ಬಾಬ್ರಿ ಮಸೀದಿ ಹುತಾತ್ಮವಾಗಿದೆ.. ಆದರೆ ಈ ಬಗ್ಗೆ ಜ್ಯಾತ್ಯಾತೀತ ಪಕ್ಷಗಳು ಎಂದು ಹೇಳಿಕೊಳ್ಳುವ ಸಮಾಜವಾದಿ (SP), ಬಹುಜನ ಸಮಾಜವಾದಿ (BSP) ಮತ್ತು ಕಾಂಗ್ರೆಸ್ (Congress) ಪಕ್ಷಗಳೂ ಒಂದೂ ಮಾತನಾಡಲಿಲ್ಲ ಏಕೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.

ಕಾನ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಒವೈಸಿ, 'ನನ್ನ ಬಾಬ್ರಿ ಮಸೀದಿ ಹುತಾತ್ಮವಾಯಿತು. ಅದನ್ನು ಕಳಂಕಗೊಳಿಸಿದ ಜನರು ಭಾರತದ ಅಡಿಪಾಯ ಮತ್ತು ಕಾನೂನಿನ ಆಳ್ವಿಕೆಗೆ ಅಡ್ಡಿಪಡಿಸಿದರು. ಆದರೆ ಈ ಬಗ್ಗೆ ಜಾತ್ಯಾತೀತ ಪಕ್ಷಗಳು ಎಂದು ಹೇಳಿಕೊಳ್ಳುವ ಸಮಾಜವಾದಿ (SP), ಬಹುಜನ ಸಮಾಜವಾದಿ (BSP) ಮತ್ತು ಕಾಂಗ್ರೆಸ್ (Congress) ಪಕ್ಷಗಳೂ ಒಂದೂ ಮಾತನಾಡಲಿಲ್ಲ. ಎಲ್ಲಿಯಾದರೂ ಈ ಬಗ್ಗೆ ಒಂದೇ ಒಂದು ಮಾತನ್ನಾದರೂ ಹೇಳಿದ್ದಾರೆಯೇ ಅವರು..? ಅದು ನನ್ನ ಮಸೀದಿಗೆ ಆದ ಕಳಂಕವೇ ಹೊರತು ಅವರದ್ದಲ್ಲ ಎಂದು ಅವರು ಕಣ್ಣು ಮುಚ್ಚಿ ಕುಳಿತಿದ್ದರು ಎಂದು ಕಿಡಿಕಾರಿದ್ದಾರೆ.

ಅಂತೆಯೇ ಬಾಬ್ರಿ ಮಸೀದಿ ಧ್ವಂಸದ ವಿಚಾರವಾಗಿ ಬಂದ ತೀರ್ಪಿನ ಕುರಿತು ನಾನು ಸಾಕಷ್ಟು ಬಾರಿ ಮಾತನಾಡಿದ್ದೇನೆ. ಬಾಬರಿ ಮಸೀದಿ ತೀರ್ಪಿನಲ್ಲಿ ಯಾವುದೇ ಅಪರಾಧಿ ಇಲ್ಲ ಎಂದು ಹೇಳಿದ ನಂತರ, ನಾನು ಸಂಸತ್ತಿನಲ್ಲಿ ಸಿಬಿಐ ಏಕೆ ಮೇಲ್ಮನವಿ ಸಲ್ಲಿಸಲಿಲ್ಲ ಮತ್ತು ಮಸೀದಿಗೆ ಕಳಂಕ ತಂದವರು ಯಾರು ಎಂದು ಕೇಳಿದೆ. ಈ ಬಗ್ಗೆ ಎಸ್‌ಪಿ, ಬಿಎಸ್‌ಪಿ ಅಥವಾ ಕಾಂಗ್ರೆಸ್‌ನ ಯಾರಾದರೂ ನಾಯಕರು ಏನಾದರೂ ಹೇಳಿದ್ದೀರಾ? ಎಂದು ಒವೈಸಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com