12ನೇ ತರಗತಿಯ ಅಕೌಂಟೆನ್ಸಿಗೆ ಗ್ರೇಸ್ ಮಾರ್ಕ್ಸ್ ವದಂತಿ: ಸುಳ್ಳು ಸುದ್ದಿ ಬಗ್ಗೆ ಎಚ್ಚರ ಎಂದ ಸಿಬಿಎಸ್‌ಇ

12ನೇ ತರಗತಿಯ ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆಯಲ್ಲಿನ ದೋಷದಿಂದಾಗಿ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲಾಗುವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ಆಡಿಯೋ ನಂಬಬೇಡಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: 12ನೇ ತರಗತಿಯ ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆಯಲ್ಲಿನ ದೋಷದಿಂದಾಗಿ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ನೀಡಲಾಗುವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ಆಡಿಯೋ ನಂಬಬೇಡಿ ಎಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) ಮಂಗಳವಾರ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದೆ.

"ಡಿಸೆಂಬರ್ 13 ರಂದು ನಡೆದ 12ನೇ ತರಗತಿಯ ಅಕೌಂಟೆನ್ಸಿ ಟರ್ಮ್ -1 ಪತ್ರಿಕೆಯಲ್ಲಿನ ದೋಷದಿಂದಾಗಿ ಪರೀಕ್ಷಾ ನಿಯಂತ್ರಕರ ಮತ್ತು CBSE ಹೆಸರಿನಲ್ಲಿ ಆಡಿಯೋ ಸಂದೇಶವನ್ನು ಉಲ್ಲೇಖಿಸಿ ನಕಲಿ ವರದಿಗಳನ್ನು ಪ್ರಸಾರ ಮಾಡುತ್ತಿರುವುದು ಮಂಡಳಿಯ ಗಮನಕ್ಕೆ ಬಂದಿದೆ. ಅದರಲ್ಲಿ 6 ಅಂಕಗಳವರೆಗೆ ಗ್ರೇಸ್ ಮಾರ್ಕ್ಸ್ ನೀಡಲಾಗುವುದು" ಎಂದು ಹೇಳಲಾಗಿದ್ದು, ಇದು ನಕಲಿ ಎಂದು ಸಿಬಿಎಸ್ ಇ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಕಟವಾಗಿರುವ ಸುದ್ದಿ ವರದಿಯಲ್ಲಿನ ವಿಷಯಗಳು ಸಂಪೂರ್ಣ ಆಧಾರರಹಿತ ಮತ್ತು ಸುಳ್ಳು. ಈ ಬಗ್ಗೆ ಯಾವುದೇ ವರದಿಗಾರರು ಪರೀಕ್ಷಾ ನಿಯಂತ್ರಕರನ್ನು ಅಥವಾ ಸಿಬಿಎಸ್‌ಇ ಜೊತೆ ಮಾತನಾಡಿಲ್ಲ ಮತ್ತು ಮಂಡಳಿಯು ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದ್ದರಿಂದ ಸಿಬಿಎಸ್‌ಇ, ಸಾರ್ವಜನಿಕರಿಗೆ ಇಂತಹ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಸಿಬಿಎಸ್ ಇ ಎಚ್ಚರಿಕೆ ನೀಡಿದೆ. 

ಉದ್ದೇಶಿತ ಆಡಿಯೊ ಸಂದೇಶದಲ್ಲಿ, ನಿಯಂತ್ರಕರು, "ವಿದ್ಯಾರ್ಥಿಗಳೇ ಚಿಂತಿಸಬೇಡಿ, ನೀವು 28 ರಿಂದ 31 ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸಿದರೆ, ನೀವು ಸುಮಾರು 38 ಅಂಕಗಳನ್ನು ಗಳಿಸುತ್ತೀರಿ. CBSE ವಿದ್ಯಾರ್ಥಿಗಳಿಗೆ ಆರು ಅಂಕಗಳವರೆಗೆ ಗ್ರೇಸ್ ಮಾರ್ಕ್ಸ್ ನೀಡುತ್ತದೆ" ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com