ಯುವತಿಯಿಂದ ಸುಳ್ಳು ಗ್ಯಾಂಗ್ ರೇಪ್ ದೂರು: ಕಮೀಷನರ್ ಸೇರಿದಂತೆ 1000 ಪೊಲೀಸ್ ಸಿಬ್ಬಂದಿ ಹೈರಾಣು

ನಗರ ಪೊಲೀಸ್ ಕಮೀಷನರ್ ಕೂಡಾ ತಮ್ಮ ನಗರದ ಗೌರವಕ್ಕೆ ಎಲ್ಲಿ ಚ್ಯುತಿ ಬರುವುದೋ ಎಂದು ಬೆದರಿ ಆರೋಪಿಗಳನ್ನು ಕೂಡಲೆ ಪತ್ತೆ ಹಚ್ಚುವಂತೆ ಆದೇಶಿಸಿದ್ದರು. ಪೊಲೀಸರು 50ಕ್ಕೂ ಹೆಚ್ಚು ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದರು. 250 ಸಿಸಿಟಿವಿ ವಿಡಿಯೊ ಪರಿಶೀಲಿಸಿದ್ದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನಾಗ್ಪುರ: 19 ವರ್ಷದ ಯುವತಿ ತನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದು ದಾಖಲಿಸಿದ್ದ ದೂರು ಸುಳ್ಳು ಎಂದು ಸಾಬೀತಾಗಿದೆ. ತನ್ನ ಬಾಯ್ ಫ್ರೆಂಡನ್ನು ಮದುವೆಯಾಗುವ ಉದ್ದೇಶದಿಂದ ಆಕೆ ಸುಳ್ಳು ದೂರನ್ನು ದಾಖಲಿಸಿದ್ದಾಗಿ ತಿಳಿದುಬಂದಿದೆ. 

ಸೋಮವಾರ ಯುವತಿ ನಾಗ್ಪುರ ಠಾಣೆಗೆ ಬಂದು ಗ್ಯಾಂಗ್ ರೇಪ್ ದೂರು ದಾಖಲಿಸಿದ್ದಳು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸ್ ಸಿಬ್ಬಂದಿ ಸುಳಿವಿನ ಆಧಾರದಲ್ಲಿ ನಗರವಿಡೀ ಆರೋಪಿಗಳಿಗಾಗಿ ಜಾಲಾಡಿದ್ದರು. 

ನಗರ ಪೊಲೀಸ್ ಕಮೀಷನರ್ ಕೂಡಾ ತಮ್ಮ ನಗರದ ಗೌರವಕ್ಕೆ ಎಲ್ಲಿ ಚ್ಯುತಿ ಬರುವುದೋ ಎಂದು ಬೆದರಿ ಆರೋಪಿಗಳನ್ನು ಕೂಡಲೆ ಪತ್ತೆ ಹಚ್ಚುವಂತೆ ಆದೇಶಿಸಿದ್ದರು. ಅದರಂತೆ ಸುಮಾರು 1000 ಪೊಲೀಸ್ ಸಿಬ್ಬಂದಿ ಅರೋಪಿಗಳ ಶೋದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಸುಮಾರು 250 ಸಿಸಿ ಟಿವಿ ವಿಡಿಯೋಗಳನ್ನು ತರಿಸಿಕೊಂಡು ಕೂಲಂಕಷ ಪರಿಶೀಲನೆಯನ್ನೂ ಪೊಲೀಸರು ನಡೆಸಿದ್ದರು. ಎಷ್ಟೆಲ್ಲಾ ಕಸರತ್ತು ಮಾಡಿದ ನಂತರವೂ ಆರೋಪಿಗಳ ಬಗ್ಗೆ ಕಿಂಚಿತ್ತೂ ಮಾಹಿತಿ ಸಿಕ್ಕಿರಲಿಲ್ಲ. ಆಗ ಅನುಮಾನಗೊಂಡ ಪೊಲೀಸರು ದೂರು ನೀಡಿದ ಯುವತಿಯನ್ನು ಕರೆಸಿ ವಿಚಾರನೆ ನಡೆಸಿದಾಗ ಆಕೆ ಸತ್ಯ ಬಾಯಿಬಿಟ್ಟಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com