ಭುವನ ಸುಂದರಿ ಹರ್ನಾಜ್ ಸಂಧು ಸ್ಲೀವ್ಲೆಸ್ ಗೌನ್ ವಸ್ತ್ರ ವಿನ್ಯಾಸಗೊಳಿಸಿದ್ದು ತೃತೀಯಲಿಂಗಿ ಡಿಸೈನರ್ ಸೈಶಾ ಶಿಂಧೆ!

ಮಿಸ್ ಯೂನಿವರ್ಸ್ ಕಿರೀಟ ಧರಿಸುವ ಮೂಲಕ ಹರ್ನಾಜ್ ಸಂಧು ಇದೀಗ ಟಾಕ್ ಆಫ್ ದಿ ಟೌನ್ ಆಗಿದ್ದು, ಈ ಭುವನ ಸುಂದರಿ ಸ್ಪರ್ಧೆ ವೇಳೆ ಹರ್ನಾಜ್ ಧರಿಸಿದ್ದ ಗೌನ್ ಅನ್ನು ವಿನ್ಯಾಸ ಮಾಡಿದ್ದು ಮಾತ್ರ ತೃತೀಯಲಿಂಗಿ ಡಿಸೈನರ್ ಸೈಶಾ ಶಿಂಧೆ..!
ಸೈಶಾ ಶಿಂಧೆ-ಹರ್ನಾಜ್ ಸಂಧು
ಸೈಶಾ ಶಿಂಧೆ-ಹರ್ನಾಜ್ ಸಂಧು

ನವದೆಹಲಿ: ಮಿಸ್ ಯೂನಿವರ್ಸ್ ಕಿರೀಟ ಧರಿಸುವ ಮೂಲಕ ಹರ್ನಾಜ್ ಸಂಧು ಇದೀಗ ಟಾಕ್ ಆಫ್ ದಿ ಟೌನ್ ಆಗಿದ್ದು, ಈ ಭುವನ ಸುಂದರಿ ಸ್ಪರ್ಧೆ ವೇಳೆ ಹರ್ನಾಜ್ ಧರಿಸಿದ್ದ ಗೌನ್ ಅನ್ನು ವಿನ್ಯಾಸ ಮಾಡಿದ್ದು ಮಾತ್ರ ತೃತೀಯಲಿಂಗಿ ಡಿಸೈನರ್ ಸೈಶಾ ಶಿಂಧೆ..!

ಹೌದು..ಬರೋಬ್ಬರಿ 21 ವರ್ಷಗಳ ನಂತರ ಭಾರತದ ಸುಂದರಿಯೊಬ್ಬರು ಮಿಸ್ ಯೂನಿವರ್ಸ್​ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಭಾರತದ ಹರ್ನಾಜ್ ಸಂಧು ಇಂದು 2021ನೇ ಸಾಲಿನ ಭುವನ ಸುಂದರಿ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಪರಾಗ್ವೆಯ ನಾಡಿಯಾ ಫೆರೇರಾ ಮತ್ತು ದಕ್ಷಿಣ ಆಫ್ರಿಕಾದ ಲಲೆಲಾ ಮಸ್ವಾನೆ ಅವರನ್ನು ಸೋಲಿಸಿ ಅವರು ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇತ್ತೀಚೆಗೆ ನಡೆದ ಗ್ರ್ಯಾಂಡ್ ಫಿನಾಲೆಗಾಗಿ ಹರ್ನಾಜ್ ಸಂಧು ತೊಟ್ಟಿದ್ದ ಮಿನುಗುವ ಗೌನ್ ಕೂಡ ಎಲ್ಲರ ಗಮನ ಸೆಳೆದಿತ್ತು. ಈ ವಿಶೇಷ ಗೌನ್ ಅನ್ನು ವಿನ್ಯಾಸಗೊಳಿಸಿದ್ದು ಓರ್ವ ತೃತೀಯ ಲಿಂಗಿ.

ಡಿಸೈನರ್ ಸೈಶಾ ಶಿಂಧೆ ಅವರು ವಿನ್ಯಾಸಗೊಳಿಸಿದ್ದ ವಿಶೇಷ ಗೌನ್ ಅನ್ನು ಧರಿಸಿ ಹರ್ನಾಜ್ ಗ್ರಾಂಡ್ ಫಿನಾಲೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕಾಗಿ ಹರ್ನಾಜ್ ಅವರು ಬೀಜ್ ಮತ್ತು ಸಿಲ್ವರ್​​ ಬಣ್ಣದ ಅಲಂಕೃತ ಗೌನ್‌ ಅನ್ನು ಧರಿಸಿದ್ದರು. ಅವರ ದೇಹಕ್ಕೆ ಅಂಟಿ ಕೂತಿದ್ದ ಆ ಗೌನ್ V-ನೆಕ್‌ಲೈನ್ ಅನ್ನು ಒಳಗೊಂಡಿತ್ತು. ಸ್ಟೋನ್​ಗಳ ಹ್ಯಾಂಗಿಂಗ್ ಕಿವಿಯೋಲೆಗಳನ್ನು ಧರಿಸಿದ್ದ ಹರ್ನಾಜ್ ಅವರ ಮೇಕಪ್, ಡ್ರೆಸ್​, ನಗು, ಮಾತು ಎಲ್ಲವೂ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.

ಹರ್ನಾಜ್ ಅವರ ಗೌನ್ ವಿನ್ಯಾಸಗೊಳಿಸಿದ ಸೈಶಾ ಶಿಂಧೆ ತೃತೀಯಲಿಂಗಿಯಾಗಿದ್ದು, ಈ ಮೊದಲು ಅವರಿಗೆ ಸ್ವಪ್ನಿಲ್ ಶಿಂಧೆ ಎಂಬ ಹೆಸರಿತ್ತು. ಇದೀಗ ಅವರು ಲಿಂಗಪರಿವರ್ತನೆ ಮಾಡಿಕೊಂಡ ನಂತರ ತಮ್ಮ ಹೆಸರನ್ನು ಸೈಶಾ ಶಿಂಧೆ ಎಂದು ಇನ್​ಸ್ಟಾಗ್ರಾಂನಲ್ಲಿ ಬದಲಾಯಿಸಿಕೊಂಡಿದ್ದಾರೆ. ಬಾಲಿವುಡ್ ತಾರೆಗಳಾದ ಕರೀನಾ ಕಪೂರ್, ಶ್ರದ್ಧಾ ಕಪೂರ್ ಮತ್ತು ಅನುಷ್ಕಾ ಶರ್ಮಾ ಅವರಂತಹ ಅನೇಕ ನಟಿಯರ ಸ್ಟೈಲಿಂಗ್ ಮಾಡುವಲ್ಲಿ ಸೈಶಾ ಶಿಂಧೆ ಹೆಸರುವಾಸಿಯಾಗಿದ್ದಾರೆ. ಫ್ಯಾಷನ್‌ನಂತಹ ಚಿತ್ರಗಳಲ್ಲಿ ಇವರು ವಸ್ತ್ರ ವಿನ್ಯಾಸವನ್ನೂ ಮಾಡಿದ್ದರು.

2006 ರ ಜೆನ್ ನೆಕ್ಸ್ಟ್ ಕ್ಲಾಸ್‌ನ ಭಾಗವಾಗಿ ಲ್ಯಾಕ್ಮೆ ಫ್ಯಾಶನ್ ವೀಕ್ (ಎಲ್‌ಎಫ್‌ಡಬ್ಲ್ಯೂ) ನಲ್ಲಿ ಸೈಶಾ ಫ್ಯಾಶನ್ ಲೋಕಕ್ಕೆ ಪದಾರ್ಪಣೆ ಮಾಡಿದ್ದರು.  ಈ ವರ್ಷದ ಜೂನ್‌ನಲ್ಲಿ ಆಂಗ್ಲ ಭಾಷೆಯ ದೈನಿಕಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ, ಸೈಶಾ ಶಿಂಧೆ, “ಈ ಮೂಲಕ ಸಮಯ ಬ್ರ್ಯಾಂಡ್‌ಗಳು ಮತ್ತು ವಿನ್ಯಾಸಕರು ನಮ್ಮಂತಹ ಜನರನ್ನು ಒಳಗೊಂಡಿರುವ ಮಾರುಕಟ್ಟೆ ಇದೆ ಎಂದು ಅರಿತುಕೊಂಡರು, ಅವರು ಮಾರಾಟ ಮಾಡುತ್ತಿರುವುದನ್ನು ಖರೀದಿಸಲು ಸಂಪನ್ಮೂಲಗಳನ್ನು ಹೊಂದಿದ್ದಾರೆ. ಆದಾಗ್ಯೂ, ಮುಖ್ಯವಾಹಿನಿಯ ಮಾಧ್ಯಮ, ಮನರಂಜನೆ, ಆರೋಗ್ಯ, ಕ್ರೀಡೆ, ಸಂಗೀತ, ಫ್ಯಾಷನ್ ಇತ್ಯಾದಿಗಳಿಂದ ಹೆಚ್ಚಿನ ಜನರು ಬಹಿರಂಗವಾಗಿ ಹೊರಬರಲು ಮತ್ತು ಅವರ ನಿಜವಾದ ಗುರುತನ್ನು ಸ್ವೀಕರಿಸಲು ಪ್ರಾರಂಭಿಸಿದಾಗ ಮಾತ್ರ ಇದು ಸಂಭವಿಸುತ್ತದೆ. ಸಮಾಜದ ಪ್ರತಿಯೊಂದು ಅಂಶದಿಂದ ಹೊರಬರುವ ಜನರು, ಆಯಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿರುವಂತೆ, ಪ್ರಾತಿನಿಧ್ಯ ಹೆಚ್ಚು ಇರುತ್ತದೆ ಎಂದು ಹೇಳಿದ್ದಾರೆ.

1994ರಲ್ಲಿ ಸುಶ್ಮಿತಾ ಸೇನ್ ಮತ್ತು 2000ರಲ್ಲಿ ಲಾರಾ ದತ್ತಾ ಅವರು ಮಿಸ್ ಯೂನಿವರ್ಸ್​ ಕಿರೀಟವನ್ನು ತೊಟ್ಟಿದ್ದರು. ಹರ್ನಾಜ್‌ ಸಂಧು ಭುವನ ಸುಂದರಿ ಕಿರೀಟವನ್ನು ಮುಗಿಗೇರಿಸಿಕೊಂಡಿರುವ ಮೂರನೇ ಭಾರತೀಯ ಮಹಿಳೆಯಾಗಿದ್ದಾರೆ. ಚಂಡೀಗಢ ಮೂಲದ ಮಾಡೆಲ್ ಹರ್ನಾಜ್ ಸಂಧು ಈ ಹಿಂದೆ ಹಲವಾರು ಸೌಂದರ್ಯ ಸ್ಪರ್ಧೆಗಳನ್ನು ಗೆದ್ದಿದ್ದಾರೆ. ಅವರು ಮಿಸ್ ದಿವಾ 2021 ಮತ್ತು ಫೆಮಿನಾ ಮಿಸ್ ಇಂಡಿಯಾ ಪಂಜಾಬ್ 2019 ಕಿರೀಟವನ್ನು ಪಡೆದಿದ್ದರು. ಫೆಮಿನಾ ಮಿಸ್ ಇಂಡಿಯಾ 2019ರಲ್ಲಿ ಟಾಪ್ 12ರಲ್ಲಿ ಸ್ಥಾನ ಪಡೆದಿದ್ದರು. ಇದೀಗ ಭುವನ ಸುಂದರಿ 2021 ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com