ಭಾರತೀಯ ಸೇನಾಪಡೆ ಚೀಫ್‌ ಆಫ್‌ ಸ್ಟಾಫ್‌ ಕಮಿಟಿ ಅಧ್ಯಕ್ಷರಾಗಿ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಅಧಿಕಾರ ಸ್ವೀಕಾರ

ಭಾರತೀಯ ಸೇನಾ ಪಡೆಯ ಮೂರೂ ವಿಭಾಗದ ಮುಖ್ಯಸ್ಥ ಹುದ್ದೆಯಾದ ಚೀಫ್‌ ಆಫ್‌ ಸ್ಟಾಫ್‌ ಕಮಿಟಿ ಅಧ್ಯಕ್ಷರಾಗಿ ಸೇನಾ ಮುಖ್ಯಸ್ಥ ಜ.ಎಂ.ಎಂ.ನರವಣೆ ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಎಂ.ಎಂ ನರವಣೆ
ಎಂ.ಎಂ ನರವಣೆ

ನವದೆಹಲಿ: ಭಾರತೀಯ ಸೇನಾ ಪಡೆಯ ಮೂರೂ ವಿಭಾಗದ ಮುಖ್ಯಸ್ಥ ಹುದ್ದೆಯಾದ ಚೀಫ್‌ ಆಫ್‌ ಸ್ಟಾಫ್‌ ಕಮಿಟಿ ಅಧ್ಯಕ್ಷರಾಗಿ ಸೇನಾ ಮುಖ್ಯಸ್ಥ ಜ.ಎಂ.ಎಂ.ನರವಣೆ ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಜ.ಬಿಪಿನ್‌ ರಾವತ್‌ ಸಾವಿನ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ನರವಣೆ ಅವರನ್ನು ನೇಮಕ ಮಾಡಲಾಗಿದೆ. ಸಶಸ್ತ್ರ ಪಡೆಗಳ ಮುಖ್ಯಸ್ಥ ಹುದ್ದೆ ಸೃಷ್ಟಿಗೂ ಮುನ್ನ ಈ ಹುದ್ದೆ ಇತ್ತು.

ಸೇನೆ, ನೌಕಾಪಡೆ ಮತ್ತು ವಾಯಪಡೆಯ ಮುಖ್ಯಸ್ಥರ ಪೈಕಿ ಅತ್ಯಂತ ಹಿರಿಯರು ಚೀಫ್‌ ಆಫ್‌ ಸ್ಟಾಫ್‌ ಕಮಿಟಿ ಅಧ್ಯಕ್ಷರಾಗಿ ನಿಯುಕ್ತಿಗೊಳ್ಳುತ್ತಿದ್ದರು. ಈ ಹಿಂದೆ ಬಿಪಿನ್‌ ರಾವತ್‌ ಅವರು ಈ ಹುದ್ದೆ ಮತ್ತು ಸಶಸ್ತ್ರ ಪಡೆಗಳ ಮುಖ್ಯಸ್ಥ ಹುದ್ದೆ ಎರಡನ್ನೂ ನಿರ್ವಹಿಸುತ್ತಿದ್ದರು. ಇದೀಗ ನರವಣೆ ಈ ಹುದ್ದೆಗೆ ನೇಮಕವಾಗಿರುವ ಹಿನ್ನೆಲೆಯಲ್ಲಿ ಅವರೇ ಸಶಸ್ತ್ರ ಪಡೆಗಳ ಮುಖ್ಯಸ್ಥರಾಗಬಹುದು ಎಂಬ ಸುದ್ದಿಗೆ ಇನ್ನಷ್ಟು ಬಲ ಬಂದಿದೆ

ಚೀಫ್ ಆಫ್ ಆರ್ಮಿ ಸ್ಟಾಫ್ ಜನರಲ್ ಬಿಪಿನ ರಾವತ್ ಅವರನ್ನು 2019ರಲ್ಲಿ  ಮೂರು ಸೇನೆಗಳ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು.  ಹೀಗಾಗಿ ತೆರವಾದ ಸ್ಥಾನಕ್ಕೆ ಡಿಸೆಂಬರ್ 31, 2019ರಲ್ಲಿ ಮನೋಜ್ ಮುಕುಂದ್ ನರವಣೆಯನ್ನು ನೇಮಕ ಮಾಡಲಾಗಿತ್ತು. ಸರಿಸುಮಾರು 2 ವರ್ಷಗಳ ಕಾಲ ಸಿಓಎಎಸ್ ಆಗಿ ಸೇವೆ ಸಲ್ಲಿಸಿದ ಎಂಎಂ ನರವಣೆ ಇದೀಗ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಆಗಿ ಬಡ್ತಿ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com