ಕೊವೊವ್ಯಾಕ್ಸ್‌ ಲಸಿಕೆಯ ತುರ್ತು ಬಳಕೆಗೆ ಅನುಮತಿ: ಡಬ್ಲ್ಯೂಎಚ್ಒಗೆ ಪೂನಾವಾಲಾ ಅಭಿನಂದನೆ

ವಿಶ್ವ ಆರೋಗ್ಯ ಸಂಸ್ಥೆ ಕೊವೊವ್ಯಾಕ್ಸ್‌ ನ ತುರ್ತು ಬಳಕೆಗೆ ಶುಕ್ರವಾರ ಅನುಮತಿ ನೀಡಿದ್ದು, ಇದಕ್ಕೆ ಸೆರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆದಾರ್‌ ಪೂನಾವಾಲಾ ಅಭಿನಂದನೆ ಸಲ್ಲಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ ಕೊವೊವ್ಯಾಕ್ಸ್‌ ನ ತುರ್ತು ಬಳಕೆಗೆ ಶುಕ್ರವಾರ ಅನುಮತಿ ನೀಡಿದ್ದು, ಇದಕ್ಕೆ ಸೆರಮ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆದಾರ್‌ ಪೂನಾವಾಲಾ ಅಭಿನಂದನೆ ಸಲ್ಲಿಸಿದ್ದಾರೆ.

ನೋವಾವ್ಯಾಕ್ಸ್‌ ಮೂಲಕ ನೀಡಲಾದ ಪರವಾನಗಿಯ ಅಡಿಯಲ್ಲಿ ಕೋವಾವ್ಯಾಕ್ಸ್ ಅನ್ನು ಪುಣೆಯ ಎಸ್‌ಐಐ ಅಭಿವೃದ್ಧಿಪಡಿಸುತ್ತಿದೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಬಳಕೆಗೆ ಅನುಮತಿ ನೀಡಿದ್ದು, WHO ಅನುಮತಿ ಪಡೆದ 9ನೇ ಲಸಿಕೆ ಕೊವೊವ್ಯಾಕ್ಸ್‌ ಆಗಿದೆ. ಕಡಿಮೆ-ಆದಾಯದ ದೇಶಗಳಲ್ಲಿ ಲಸಿಕೀಕರಣವನ್ನು ಹೆಚ್ಚಿಸುವ ಉದ್ದೇಶದ ಹಿನ್ನೆಲೆಯಲ್ಲಿ ಕೊವೊವ್ಯಾಕ್ಸ್‌ಗೆ ಅನುಮೋದನೆ ನೀಡಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಪೂನಾವಾಲಾ ‘ಕೋವಿಡ್‌ ವಿರುದ್ಧದ ನಮ್ಮ ಹೋರಾಟದಲ್ಲಿ ಇದು ಮತ್ತೊಂದು ಮೈಲಿಗಲ್ಲು ಸಾಧಿಸಿದ್ದೇವೆ. ಕೊವೊವ್ಯಾಕ್ಸ್‌ ಈಗ ತುರ್ತು ಬಳಕೆಗಾಗಿ ಡಬ್ಲ್ಯೂಎಚ್‌ಒ ಅನುಮೋದನೆ ಪಡೆದಿದೆ. ಅತ್ಯುತ್ತಮ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಇದು ಸಾಬೀತುಪಡಿಸಿದೆ. ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು’ ಎಂದು ಟ್ವೀಟ್‌ ಮಾಡಿದ್ದಾರೆ. ಅಂತೆಯೇ ಮುಂದಿನ ಆರು ತಿಂಗಳಲ್ಲಿ ಮಕ್ಕಳಿಗೆ ಕೊವೊವ್ಯಾಕ್ಸ್‌ ನೀಡಲು ಎಸ್‌ಐಐ ಯೋಜಿಸಿದೆ ಎಂದು ಈ ವಾರದ ಆರಂಭದಲ್ಲಿ ಪೂನಾವಾಲಾ ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು?
WHO ಪ್ರಕಾರ, Covovax ಅನ್ನು ಅದರ ತುರ್ತು ಬಳಕೆಯ ಪಟ್ಟಿ (EUL) ಕಾರ್ಯವಿಧಾನದ ಅಡಿಯಲ್ಲಿ ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕಾರಿತ್ವ, ಅಪಾಯ ನಿರ್ವಹಣಾ ಯೋಜನೆ, ಪ್ರೋಗ್ರಾಮ್ಯಾಟಿಕ್ ಸೂಕ್ತತೆ ಮತ್ತು ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಅವರು ನಡೆಸಿದ ಉತ್ಪಾದನಾ ಸ್ಥಳ ಪರಿಶೀಲನೆಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗಿದೆ. 'ತುರ್ತು ಬಳಕೆಯ ಪಟ್ಟಿಗಾಗಿ ತಾಂತ್ರಿಕ ಸಲಹಾ ಗುಂಪು (TAG-EUL), WHO ನಿಂದ ಕರೆಯಲ್ಪಟ್ಟಿದೆ ಮತ್ತು ಪ್ರಪಂಚದಾದ್ಯಂತದ ತಜ್ಞರಿಂದ ಮಾಡಲ್ಪಟ್ಟಿದೆ, ಲಸಿಕೆಯು COVID-19 ವಿರುದ್ಧ ರಕ್ಷಣೆಗಾಗಿ WHO ಮಾನದಂಡಗಳನ್ನು ಪೂರೈಸುತ್ತದೆ ಎಂದು ನಿರ್ಧರಿಸಿದೆ, ಇದು ಲಸಿಕೆಯ ಪ್ರಯೋಜನವನ್ನು ದೂರವಿಡುತ್ತದೆ. ಯಾವುದೇ ಅಪಾಯಗಳನ್ನು ಮೀರಿಸುತ್ತದೆ ಮತ್ತು ಲಸಿಕೆಯನ್ನು ಜಾಗತಿಕವಾಗಿ ಬಳಸಬಹುದು" ಎಂದು ಅದು ಹೇಳಿದೆ. 

ಪ್ರಯೋಗದ ಹಂತದಲ್ಲಿರುವ Covovax ಪ್ರಯೋಗಗಳ ಸಮಯದಲ್ಲಿ ಅತ್ಯುತ್ತಮ ಫಲಿತಾಂಶ ತೋರಿಸಿರುವುದರಿಂದ ಮೂರು ವರ್ಷಗಳವರೆಗೆ ಮಕ್ಕಳಿಗೆ ರಕ್ಷಣೆ ನೀಡುತ್ತದೆ.  ಪ್ರಸ್ತುತ, ಕೋವಿಶೀಲ್ಡ್ ಮತ್ತು ಇತರ COVID-19 ಲಸಿಕೆಗಳನ್ನು 18 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಅನುಮೋದಿಸಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com