ಪಂಜಾಬ್: ಪಾಕ್ ಗಡಿಯಲ್ಲಿ ಡ್ರೋನ್ ಹೊಡೆದುರುಳಿಸಿದ ಗಡಿ ಭದ್ರತಾ ಪಡೆ

ಪಂಜಾಬ್ ನಲ್ಲಿ ಭಾರತ- ಪಾಕಿಸ್ತಾನ ಗಡಿಯಲ್ಲಿ ಡ್ರೋನ್ ವೊಂದನ್ನು ಗಡಿ ಭದ್ರತಾ ಪಡೆ ಹೊಡೆದುರುಳಿಸಿರುವುದಾಗಿ ಶನಿವಾರ ಬಿಎಸ್ ಎಫ್ ತಿಳಿಸಿದೆ. 
ಡ್ರೋನ್ ಸಾಂದರ್ಭಿಕ ಚಿತ್ರ
ಡ್ರೋನ್ ಸಾಂದರ್ಭಿಕ ಚಿತ್ರ

ಚಂಡೀಗಢ: ಪಂಜಾಬ್ ನಲ್ಲಿ ಭಾರತ- ಪಾಕಿಸ್ತಾನ ಗಡಿಯಲ್ಲಿ ಡ್ರೋನ್ ವೊಂದನ್ನು ಗಡಿ ಭದ್ರತಾ ಪಡೆ ಹೊಡೆದುರುಳಿಸಿರುವುದಾಗಿ ಶನಿವಾರ ಬಿಎಸ್ ಎಫ್ ತಿಳಿಸಿದೆ. 

ಶುಕ್ರವಾರ ರಾತ್ರಿ 11:10 ರ ಸುಮಾರಿನಲ್ಲಿ ಫಿರೋಜ್‌ಪುರ ಸೆಕ್ಟರ್‌ನ ವಾನ್ ಗಡಿ ಪೋಸ್ಟ್ ಬಳಿ ಚೀನಾ ನಿರ್ಮಿತ ಡ್ರೋನ್ ನ್ನು ಪತನಗೊಳಿಸಲಾಗಿದೆ. 

ಕಪ್ಪು ಬಣ್ಣದ ಹಾರುವ ವಸ್ತುವನ್ನು ಅಂತರರಾಷ್ಟ್ರೀಯ ಗಡಿಯಿಂದ ಸುಮಾರು 300 ಮೀಟರ್ ಮತ್ತು ಗಡಿ ಬೇಲಿಯಿಂದ 150 ಮೀಟರ್ ದೂರದಲ್ಲಿ ಹಾರಾಡುತ್ತಿದ್ದ ಕಪ್ಪು ಬಣ್ಣದ ಡ್ರೋನ್ ನ್ನು ಹೊಡೆದುರುಳಿಸಲಾಗಿದೆ ಎಂದು ಗಡಿ ಭದ್ರತಾ ಪಡೆ ಹೇಳಿಕೆಯಲ್ಲಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com