ಅಯೋಧ್ಯೆ, ಕಾಶಿ ನಂತರ ಮಥುರಾದಲ್ಲಿ ಬೃಹತ್ ಕೃಷ್ಣನ ದೇವಾಲಯ ನಿರ್ಮಾಣವಾಗಬೇಕು: ಹೇಮಾ ಮಾಲಿನಿ
ಅಯೋಧ್ಯೆ, ಕಾಶಿ ನಂತರ ತಮ್ಮ ಲೋಕಸಭಾ ಕ್ಷೇತ್ರ ಮಥುರಾದಲ್ಲಿ ಬೃಹತ್ ದೇವಾಲಯ ನಿರ್ಮಿಸುವಂತೆ ಬಿಜೆಪಿ ಸಂಸದೆ ಹೇಮಾಮಾಲಿನಿ ಮನವಿ ಮಾಡಿಕೊಂಡಿದ್ದಾರೆ.
Published: 20th December 2021 10:16 AM | Last Updated: 20th December 2021 10:16 AM | A+A A-

ಹೇಮಾ ಮಾಲಿನಿ
ಇಂದೋರ್: ಅಯೋಧ್ಯೆ, ಕಾಶಿ ನಂತರ ತಮ್ಮ ಲೋಕಸಭಾ ಕ್ಷೇತ್ರ ಮಥುರಾದಲ್ಲಿ ಬೃಹತ್ ದೇವಾಲಯ ನಿರ್ಮಿಸುವಂತೆ ಬಿಜೆಪಿ ಸಂಸದೆ ಹೇಮಾಮಾಲಿನಿ ಮನವಿ ಮಾಡಿಕೊಂಡಿದ್ದಾರೆ.
ಇಂದೋರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೇಮಾಮಾಲಿನಿ, ರಾಮ ಜನ್ಮಭೂಮಿ, ಕಾಶಿ ಜೀರ್ಣೋದ್ಧಾರದ ನಂತರ ಮಥುರಾ ಕೂಡ ಅತ್ಯಂತ ಮಹತ್ವದ ಸ್ಥಳವಾಗಿದೆ ಎಂದು ಅವರು ಹೇಳಿದ್ದಾರೆ.
ತಮ್ಮನ್ನು ಕಾಶಿಗೆ ಆಹ್ವಾನಿಸಲಾಗಿದೆ, ತಾವು ಇಂದು ಕಾಶಿಗೆ ತೆರಳುವುದಾಗಿ ಅವರು ತಿಳಿಸಿದ್ದಾರೆ. ಮಥುರಾದಲ್ಲಿ ಈಗಾಗಲೇ ದೇವಸ್ಥಾನವಿದೆ. ಮೋದಿಜಿ ಅಭಿವೃದ್ಧಿಪಡಿಸಿದ ಕಾಶಿ ವಿಶ್ವನಾಥ್ ಕಾರಿಡಾರ್ ಮಾದರಿಯಲ್ಲಿ ಅದನ್ನು ಅಭಿವೃದ್ದಿಪಡಿಸಬೇಕಿದೆ ಎಂದು ಕೋರಿದ್ದಾರೆ.
ಇದನ್ನೂ ಓದಿ: ತಮ್ಮ ಕ್ಷೇತ್ರದ ರಸ್ತೆಗಳನ್ನು ಹೇಮಾಮಾಲಿನಿ ಕೆನ್ನೆಗೆ ಹೋಲಿಸಿ ಎಡವಟ್ಟು ಮಾಡಿಕೊಂಡ ಮಹಾ ಸಚಿವ
ಪ್ರೇಮ, ವಾತ್ಸಲ್ಯದ ಸಂಕೇತವಾದ ಕೃಷ್ಣ ಭಗವಾನ್ ಜನ್ಮಸ್ಥಳ ಮಥುರಾ ಸಂಸದಳಾಗಿ ಅಲ್ಲಿ ಒಂದು ದೊಡ್ಡ ದೇವಾಲಯ ಇರಬೇಕೆಂದು ನಾನು ಬಯಸುತ್ತೇನೆ. ಇಲ್ಲಿ ಈಗಾಗಲೇ ದೇವಸ್ಥಾನವಿದೆ. ಮೋದಿಜೀ ಅಭಿವೃದ್ಧಿಪಡಿಸಿದ ಕಾಶಿ ವಿಶ್ವನಾಥ್ ಕಾರಿಡಾರ್ ಮಾದರಿಯಲ್ಲಿ ಮಥುರಾವನ್ನು ಸುಂದರವಾಗಿಸಬೇಕು ಎಂದು ಹೇಮಮಾಲಿನಿ ಮನವಿ ಮಾಡಿದ್ದಾರೆ.