ರಾಜ್ಯಸಭಾ ಸದಸ್ಯರ ಅಮಾನತು: ಸಮಸ್ಯೆ ಬಗೆಹರಿಸಲು ಮೋದಿ ಸರ್ಕಾರ ನೀಡಿದ ಆಹ್ವಾನ ತಿರಸ್ಕರಿಸಿದ ಪ್ರತಿಪಕ್ಷಗಳು

ಸಂಸತ್ತಿನ ಚಳಿಗಾಲದ ಅಧಿವೇಶನ ಅಂತಿಮ ವಾರಕ್ಕೆ ಕಾಲಿಡುತ್ತಿದ್ದು, 12 ರಾಜ್ಯಸಭಾ ಸಂಸದರ ಅಮಾನತು ವಿರೋಧಿಸಿ ಪ್ರತಿಪಕ್ಷಗಳು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿರುವ ಹಿನ್ನೆಲೆಯಲ್ಲಿ...
ರಾಜ್ಯಸಭೆ ಕಲಾಪ
ರಾಜ್ಯಸಭೆ ಕಲಾಪ

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಅಂತಿಮ ವಾರಕ್ಕೆ ಕಾಲಿಡುತ್ತಿದ್ದು, 12 ರಾಜ್ಯಸಭಾ ಸಂಸದರ ಅಮಾನತು ವಿರೋಧಿಸಿ ಪ್ರತಿಪಕ್ಷಗಳು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿರುವ ಹಿನ್ನೆಲೆಯಲ್ಲಿ  ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರ ನೀಡಿದ ಆಹ್ವಾನವನ್ನು ಪ್ರತಿಪಕ್ಷಗಳು ತಿರಸ್ಕರಿಸಿವೆ.

ಕೇಂದ್ರ ಸರ್ಕಾರ ಐದು ಪ್ರತಿಪಕ್ಷಗಳ ನಾಯಕರ ಸಭೆ ಕರೆದಿದೆ. ಆದರೆ ಪ್ರತಿ ಪಕ್ಷಗಳು ಈ ಸಭೆಗೆ ಹಾಜರಾಗುವ ಸಾಧ್ಯತೆಯಿಲ್ಲ ಮತ್ತು ಎಲ್ಲಾ ಪ್ರತಿ ಪ್ರತಿಪಕ್ಷಗಳೊಂದಿಗೆ ಈ ವಿಷಯ ಚರ್ಚಿಸಬೇಕೆಂದು ಬಯಸುತ್ತಿವೆ.

ವಿರೋಧ ಪಕ್ಷಗಳ ನಾಯಕರು ಸೋಮವಾರ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಸಭೆ ಸೇರಿ ಮುಂದಿನ ನಡೆ ಬಗ್ಗೆ ನಿರ್ಧರಿಸುವ ಸಾಧ್ಯತೆ ಇದೆ.

12 ಸಂಸದರ ಅಮಾನತು ವಿರುದ್ಧದ ಹೋರಾಟದಲ್ಲಿ ಪ್ರತಿಪಕ್ಷಗಳು ಒಗ್ಗಟ್ಟಾಗಿವೆ. ವಿಪಕ್ಷಗಳಲ್ಲಿ ಒಡಕು ಮೂಡಿಸಲು ಅಧಿವೇಶನದ ಅಂತ್ಯದಲ್ಲಿ ಐದು ಪಕ್ಷಗಳನ್ನು ಮಾತ್ರ ಚರ್ಚೆಗೆ ಕರೆಯಲಾಗಿದೆ ಎಂದು ಅಮಾನತುಗೊಂಡ 12 ಸಂಸದರ ಪೈಕಿ ಒಬ್ಬರಾದ ಸಿಪಿಐ ಸಂಸದ ಬಿನೋಯ್ ವಿಶ್ವಂ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com