ಮೋಹನ್ ಭಾಗವತ್, ಮುಲಾಯಂ ಸಿಂಗ್ ಯಾದವ್ ಜೊತೆಗಿರುವ ಫೋಟೊ ವೈರಲ್; ಕಾಂಗ್ರೆಸ್ ಅಣಕ

ವಿವಾದ ಕುರಿತಾಗಿ ಸ್ಪಷ್ಟನೆ ನೀಡಿರುವ ಸಮಾಜವಾದಿ ಪಕ್ಷ ಈ ಫೋಟೊ ವೆಂಕಯ್ಯ ನಾಯ್ಡು ಅವರ ಮೊಮ್ಮಗಳ ಆರತಕ್ಷತೆ ಸಂದರ್ಭದಲ್ಲಿ ತೆಗೆದಿದ್ದೆಂದು ಹೇಳಿ ಪರಿಸ್ಥಿತಿ ತಣ್ಣಗಾಗಿಸಲು ಯತ್ನಿಸಿದೆ.
ವಿವಾದಕ್ಕೆ ಕಾರಣವಾದ ಫೋಟೊ
ವಿವಾದಕ್ಕೆ ಕಾರಣವಾದ ಫೋಟೊ

ನವದೆಹಲಿ: ಚುನಾವಣಾಗ್ರಸ್ಥ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ನಾಯಕರ ಮನೆಗಳ ಮೇಲೆ ಐಟಿ ದಾಳಿಯಾದ ಎರಡು ದಿನಗಳ ತರುವಾಯ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ಅವರ ಜೊತೆಗೆ ಕುಳಿತಿರುವ ಫೋಟೊ ಬಿಡುಗಡೆಯಾಗಿ ವಿವಾದ ಸೃಷ್ಟಿಸಿದೆ. 

ವಿವಾದ ಕುರಿತಾಗಿ ಸ್ಪಷ್ಟನೆ ನೀಡಿರುವ ಪಕ್ಷ ಈ ಫೋಟೊ ವೆಂಕಯ್ಯ ನಾಯ್ಡು ಅವರ ಮೊಮ್ಮಗಳ ಆರತಕ್ಷತೆ ಸಂದರ್ಭದಲ್ಲಿ ತೆಗೆದಿದ್ದೆಂದು ಹೇಳಿ ಪರಿಸ್ಥಿತಿ ತಣ್ಣಗಾಗಿಸಲು ಯತ್ನಿಸಿದೆ.

ಈ ಫೋಟೋವನ್ನು ಕೇಂದ್ರ ಸಚಿವ ಅರ್ಜುನ್ ಮೇಘವಾಲ್ ಅವರು ಹಂಚಿಕೊಂಡಿದ್ದರು. ಆ ಚಿತ್ರದಲ್ಲಿ ಅರ್ಜುನ್ ಅವರು ತಮ್ಮ ಜನ್ಮದಿನದ ಸಂದರ್ಭ ಭಾಗವತ್ ಅವರ ಆಶೀರ್ವಾದ ಪಡೆಯಲು ಮುಂದಾಗಿದ್ದರು. ಈ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚ್ಕೊಂಡಿದ್ದರು. ಆ ಫೋಟೋದ ಇನ್ನೊಂದು ಬದಿಯಲ್ಲಿ ಮುಲಾಯಂ ಅವರು ಆಸೀನರಾಗಿದ್ದು ಇದೀಗ ವಿವಾದ ಸೃಷ್ಟಿಸಿದೆ. 

ಈ ಕುರಿತಾಗಿ ಟೀಕಿಸಿರುವ ಉತ್ತರಪ್ರದೇಶ ಕಾಂಗ್ರೆಸ್ ಎಸ್ ಪಿ ಪಕ್ಷದ ಹೆಸರಿನಲ್ಲಿ ಎಸ್ ಎಂದರೆ ಸಂಘವಾದ ಇರಬೇಕು ಎಂದು ಅಣಕವಾಡಿದೆ.
ಇದನ್ನೂ ಓದಿ: ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ: ಮುಂಚೂಣಿಯಲ್ಲಿ ಟಿಎಂಸಿ; ಬಿಜೆಪಿ, ಕಾಂಗ್ರೆಸ್, ಸಿಪಿಎಂ ಮೂಲೆಗುಂಪು ಎಂದ ಮಮತಾ ಬ್ಯಾನರ್ಜಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com