ಮುಖ್ಯಮಂತ್ರಿಗಳ ವರ್ಚ್ಯುಯಲ್ ಸಭೆಯಲ್ಲಿ ಎರಡು ಗಂಟೆ ಕಾದರೂ ಪ್ರಧಾನಿಯೊಂದಿಗೆ ಮಾತನಾಡಲು ಮಮತಾಗೆ ಸಿಗದ ಅವಕಾಶ
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ವರ್ಚ್ಯುಯಲ್ ಸಭೆಯಲ್ಲಿ 2 ಗಂಟೆಗಳು ಕಾದರೂ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಗೆ ಮಾತನಾಡುವ ಅವಕಾಶವೇ ಸಿಕ್ಕಿಲ್ಲ.
Published: 23rd December 2021 01:07 AM | Last Updated: 23rd December 2021 01:21 PM | A+A A-

ಮೋದಿ-ಮಮತಾ ಬ್ಯಾನರ್ಜಿ
ಕೋಲ್ಕತ್ತ: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ವರ್ಚ್ಯುಯಲ್ ಸಭೆಯಲ್ಲಿ 2 ಗಂಟೆಗಳು ಕಾದರೂ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಗೆ ಮಾತನಾಡುವ ಅವಕಾಶವೇ ಸಿಕ್ಕಿಲ್ಲ.
ರಾಜ್ಯದ ಸಚಿವಾಲಯದ ಉನ್ನತ ಮೂಲಗಳು ಈ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದು, ಡಿ.22 ರಂದು ರಾತ್ರಿ ನಡೆದ "ಆಜಾದಿ ಕಿ ಅಮೃತ್ ಮಹೋತ್ಸವ್" ಸಭೆಯಲ್ಲಿ ಬ್ಯಾನರ್ಜಿ ಭಾಗಿಯಾಗಿದ್ದರು. ಆದರೆ ಮಾತನಾಡುವವರ ಪಟ್ಟಿಯಲ್ಲಿ ಮಮತಾ ಬ್ಯಾನರ್ಜಿ ಅವರ ಹೆಸರು ಇಲ್ಲದ ಕಾರಣ ಅವರಿಗೆ ಮಾತನಾಡುವುದಕ್ಕೆ ಅವಕಾಶ ನೀಡಲಾಗಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಘಟನೆ ಬಗ್ಗೆ ಸಿಎಂ ಮಮತಾ ಬ್ಯಾನರ್ಜಿ ತೀವ್ರ ಅಸಮಾಧಾನಗೊಂಡಿದ್ದು ಇಡೀ ರಾಜ್ಯದ ಆಡಳಿತ ವಿಭಾಗಕ್ಕೆ ನೋವುಂಟಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇತರ ರಾಜ್ಯಗಳ ಮುಖ್ಯಮಂತ್ರಿಗಳೂ ಭಾಗವಹಿಸಿದ್ದರು.