ಆಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣ: ಎಸ್ ಜಿ ಅಂದ್ರೆ ಸುಶೇನ್ ಗುಪ್ತಾ, ಸೋನಿಯಾ ಗಾಂಧಿ ಅಲ್ಲ- ಇಡಿ ಸ್ಪಷ್ಟನೆ
ಸುಮಾರು 3,700 ಕೋಟಿ ರೂ. ಮೊತ್ತದ ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಡೀಲ್ ಪ್ರಕರಣದಲ್ಲಿ ಕೆಲವು ಶಂಕಿತರ ನಡುವೆ ವಿನಿಮಯವಾಗಿರುವ ಅನೇಕ ಇಮೇಲ್ ಮತ್ತು ದಾಖಲೆಗಳಲ್ಲಿ ಬಳಸಲಾಗಿರುವ ಎಸ್ ಜಿ ಅಂದ್ರೆ ಸುಶೇನ್ ಮೋಹನ್ ಗುಪ್ತಾ ಎಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಶುಕ್ರವಾರ ತಿಳಿಸಿದೆ.
Published: 25th December 2021 08:24 PM | Last Updated: 25th December 2021 08:26 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಸುಮಾರು 3,700 ಕೋಟಿ ರೂ. ಮೊತ್ತದ ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಡೀಲ್ ಪ್ರಕರಣದಲ್ಲಿ ಕೆಲವು ಶಂಕಿತರ ನಡುವೆ ವಿನಿಮಯವಾಗಿರುವ ಅನೇಕ ಇಮೇಲ್ ಮತ್ತು ದಾಖಲೆಗಳಲ್ಲಿ ಬಳಸಲಾಗಿರುವ ಎಸ್ ಜಿ ಅಂದ್ರೆ ಸುಶೇನ್ ಮೋಹನ್ ಗುಪ್ತಾ ಎಂದು ಈ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಶುಕ್ರವಾರ ತಿಳಿಸಿದೆ. ಗುಪ್ತಾ ಅವರನ್ನು ಮಾರ್ಚ್ 2019 ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು.
ಆರೋಪಿ ರಾಜೀವ್ ಸಕ್ಸೇನಾ ಸಲ್ಲಿಸಿದ್ದ ಪೆನ್ ಡ್ರೈವ್ ನಿಂದ ಡಾಟಾ ಪಡೆದ ನಂತರ ಈ ವಿಚಾರದ ಬಗ್ಗೆ ಜಾರಿ ನಿರ್ದೇಶನಾಲಯ ಈ ರೀತಿಯ ಸ್ಪಷ್ಟನೆ ನೀಡಿದೆ. ಭಾರತ ಸರ್ಕಾರದ ನ್ಯಾಯಿಕ ಮನವಿ ಮೇರೆಗೆ ಮಾರಿಷಸ್ ಸರ್ಕಾರದಿಂದ ಈ ಡಾಟಾವನ್ನು ನೀಡಲಾಗಿದೆ. ಜನವರಿ 2019ರಲ್ಲಿ ಯುನೈಟೆಡ್ ಅರಬ್ ಎಮಿರೈಟ್ಸ್ ನಿಂದ ಭಾರತಕ್ಕೆ ಸಕ್ಸೇನಾ ಅವರನ್ನು ಗಡಿಪಾರು ಮಾಡಲಾಗಿತ್ತು.
ಇಡಿಯಿಂದ ಸ್ಪಷ್ಟನೆ ಬರುತ್ತಿದ್ದಂತೆ ಈ ಪ್ರಕರಣದಲ್ಲಿ ಸೋನಿಯಾ ಗಾಂಧಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದ ಬಿಜೆಪಿ ವಿರುದ್ಧ ಕಾಂಗ್ರೆಸ್ ತೀವ್ರ ದಾಳಿ ನಡೆಸಿದೆ. ಬಿಜೆಪಿ- ಮೋದಿ ಸರ್ಕಾರ ಆಡಿದ ಕೆಟ್ಟ, ಕೊಳಕು ಆಟ ಬಹಿರಂಗವಾಗಿದೆ. ಹೆಸರು ಕೆಡಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಟಿವಿ ನಿರೂಪಕರು ಕ್ಷಮೆ ಕೇಳಬೇಕೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜಿವಾಲಾ ಟ್ವೀಟ್ ಮಾಡಿದ್ದಾರೆ.
खेत खलिहान के खिलाफ मोदी सरकार का षड्यंत्र और रची गई साज़िश आखिरकार उजागर हो ही गई। pic.twitter.com/NdsLIUYZtf
— Randeep Singh Surjewala (@rssurjewala) December 25, 2021
ಈ ಸರ್ಕಾರ ಕ್ರಿಮಿನಲ್ ಕ್ಷುಲಕತೆಯೊಂದಿಗೆ ವರ್ತಿಸುವುದು ದುರದೃಷ್ಟಕರ ಸಂಗತಿ ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಪವನ್ ಖೇರಾ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.